PM Kisan 22nd Installment Update:ಕರ್ನಾಟಕ ಸೇರಿದಂತೆ ದೇಶಾದ್ಯಂತದ ಲಕ್ಷಾಂತರ ರೈತರು ಕಾತುರದಿಂದ ನಿರೀಕ್ಷಿಸುತ್ತಿದ್ದ PM Kisan 22nd Instalment (ಪಿಎಂ ಕಿಸಾನ್ 22ನೇ ಕಂತು) ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ(Central Govt)ವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಹಂತದ ಅನುದಾನವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸಿದೆ. ಈ ಬಾರಿಯೂ ರೈತರಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ (DBT) ವರ್ಗಾಯಿಸಲಾಗಿದೆ. ನೀವೂ ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದರೆ, PM Kisan 22ನೇ ಕಂತಿನ ಸ್ಟೇಟಸ್ ಚೆಕ್(PM Kisan 22nd installment status check) ಮಾಡುವುದು ಹೇಗೆ, ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ಪರಿಶೀಲಿಸುವ ವಿಧಾನ, ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Table of Contents
PM Kisan 22nd Installment ₹2000 Released Update | PM Kisan 22ನೇ ಕಂತು, ರೈತರ ಖಾತೆಗೆ ₹2,000 ಹಣ | Prime Minister Kisan Samman Nidhi 22nd Installment

ಕರ್ನಾಟಕ ಸೇರಿದಂತೆ ದೇಶಾದ್ಯಂತದ ಸುಮಾರು 9.32 ಕೋಟಿ ರೈತರ ಬಹುನಿರೀಕ್ಷಿತ PM Kisan 22nd Instalment ಗೆ ಅಧಿಕೃತ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ 22ನೇ ಕಂತಿನ ಹಣ(22nd Instalment)ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆನ್ನೆ (ಮಾರ್ಚ್ 13, 2026) ಅಸ್ಸಾಂನ ಗುವಾಹಟಿಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಡಿಜಿಟಲ್ ಪಾವತಿಗೆ ಚಾಲನೆ ನೀಡುವ ಮೂಲಕ ಬಿಡುಗಡೆಗೊಳಿಸಿದ್ದಾರೆ.
ಈ ಮೂಲಕ ದೇಶದ ರೈತರ ಖಾತೆಗಳಿಗೆ ಒಟ್ಟು ₹18,640 ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳು ಹಾಗೂ ಮನೆಯ ಅಗತ್ಯ ವೆಚ್ಚಗಳನ್ನು ಪೂರೈಸಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಈಗ ರೈತರ ಜೀವನದ ಅವಿಭಾಜ್ಯ ಅಂಗವಾಗಿದೆ.
ಈ ಬಾರಿಯೂ ಪ್ರಧಾನಿ ಮೋದಿ ಅವರು ಗುವಾಹಟಿಯಲ್ಲಿ ಸಾವಿರಾರು ರೈತರ ಸಮ್ಮುಖದಲ್ಲಿ ಬಟನ್ ಒತ್ತುವ ಮೂಲಕ PM Kisan 22ನೇ ಕಂತಿನ ಹಣ ವರ್ಗಾವಣೆಗೆ ಚಾಲನೆ(PM Kisan 22nd installment money transfer) ನೀಡಿದ್ದಾರೆ.
PM Kisan 22ನೇ ಕಂತು: ₹2000 Installment ಯಾವಾಗ ರೈತರ ಖಾತೆಗೆ ಜಮಾ ಆಗುತ್ತದೆ? | PM Kisan 22nd Installment Update
ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಿರುವುದರಿಂದ, PM Kisan 22nd Instalment ಹಣವು ತಕ್ಷಣವೇ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಪ್ರಾರಂಭವಾಗಿದೆ. ಕೆಲವು ರೈತರ ಖಾತೆಗಳಿಗೆ ಈಗಾಗಲೇ ಹಣ ಜಮಾ(money) ಆಗಿರಬಹುದು. ಇನ್ನುಳಿದ ರೈತರ ಖಾತೆಗಳಿಗೂ ಮುಂದಿನ 24 ರಿಂದ 48 ಗಂಟೆಗಳ ಒಳಗಾಗಿ ಹಣ ಜಮಾ ಆಗುವ ನಿರೀಕ್ಷೆಯಿದೆ.
ಈ ಬಾರಿ ದೇಶಾದ್ಯಂತ ಒಟ್ಟು 9.32 ಕೋಟಿ ರೈತರ ಖಾತೆಗಳಿಗೆ ತಲಾ ₹2,000 ರಂತೆ PM Kisan 22ನೇ ಕಂತಿನ ₹2,000 ಹಣ ಜಮಾ ಆಗಲಿದೆ. ಇದರೊಂದಿಗೆ ಈ ಯೋಜನೆಯಡಿ ಇದುವರೆಗೆ ರೈತರಿಗೆ ವಿತರಿಸಲಾದ ಒಟ್ಟು ಮೊತ್ತವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
PM Kisan 22ನೇ ಕಂತು: ₹2,000 Installment ಯಾವಾಗ ಬಿಡುಗಡೆ? | PM Kisan 22nd Instalment Release Update
ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ಅವರು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಾರೆ. 22ನೇ ಕಂತನ್ನು ಫೆಬ್ರವರಿ-ಮಾರ್ಚ್ 2026ರ ಅವಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಕಂತುಗಳಂತೆಯೇ, ಅರ್ಹ ರೈತರ ಖಾತೆಗೆ ತಲಾ ₹2,000 ನೇರವಾಗಿ ಜಮಾ ಆಗಲಿದೆ. ಒಟ್ಟಾರೆಯಾಗಿ ವರ್ಷಕ್ಕೆ ₹6,000 ಸಹಾಯಧನ ನೀಡುವ ಈ ಯೋಜನೆಯಡಿ, ಇದುವರೆಗೂ 11 ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ.
PM Kisan 22ನೇ ಕಂತಿನ ಸ್ಟೇಟಸ್ ಚೆಕ್: ನಿಮ್ಮ ಖಾತೆಗೆ ₹2,000 Installment ಹಣ ಬಂತಾ? | PM Kisan 22nd Instalment Payment Status Check Step-by-Step Guide
ಪ್ರಧಾನಿ ಮೋದಿ ಅವರು ಹಣ ಬಿಡುಗಡೆಗೆ ಚಾಲನೆ ನೀಡಿರುವುದರಿಂದ, ಈಗ ನೀವು ನಿಮ್ಮ PM Kisan 22ನೇ ಕಂತಿನ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕಾಗಿದೆ. ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಅಥವಾ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿ(Name Beneficiary List)ಯಲ್ಲಿದೆಯೇ ಎಂಬುದನ್ನು ಈ ಕೆಳಗಿನ ಸುಲಭ ವಿಧಾನಗಳ ಮೂಲಕ ಪರಿಶೀಲಿಸಬಹುದು.
1.ಅಧಿಕೃತ ವೆಬ್ಸೈಟ್ (pmkisan.gov.in) ಮೂಲಕ PM Kisan 22nd Instalment ₹2,000 ಸ್ಟೇಟಸ್ ಪರಿಶೀಲನೆ | Official Website Payment Status Check
- ಮೊದಲು PM Kisan ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ಮುಖಪುಟದಲ್ಲಿರುವ ‘Farmers Corner‘ ಅಡಿಯಲ್ಲಿ ‘Beneficiary Status‘ ಆಯ್ಕೆ ಮಾಡಿ.
- ನಂತರ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ನಂಬರ್ ನಮೂದಿಸಿ.
- ನಂತರ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ ‘Get Data‘ ಕ್ಲಿಕ್ ಮಾಡಿ.
- ನಿಮ್ಮ ಪರದೆಯ ಮೇಲೆ ನಿಮ್ಮ ಹೆಸರು, ವಿಳಾಸ, ಫೋಟೋ ಮತ್ತು PM Kisan 22ನೇ ಕಂತು ಸೇರಿದಂತೆ ಎಷ್ಟು ಕಂತುಗಳು ಜಮಾ ಆಗಿವೆ ಎಂಬ ವಿವರ ಕಾಣಿಸುತ್ತದೆ.
22ನೇ ಕಂತಿನ ಎದುರು ‘ಸಕ್ರಿಯ‘ ಅಥವಾ ‘₹2000 ಜಮಾ‘ ಎಂಬ ಸ್ಥಿತಿ ತೋರಿದರೆ ನಿಮ್ಮ ಖಾತೆಗೆ ಹಣ ಬಂದಿದೆ ಎಂದರ್ಥ.
2. PM Kisan ಮೊಬೈಲ್ ಆಪ್ ಮೂಲಕ ₹2,000 Installment ಸ್ಟೇಟಸ್ ಪರಿಶೀಲನೆ | PM Kisan 22nd Instalment Status Check via Mobile App
ನಿಮ್ಮ ಸ್ಮಾರ್ಟ್ಫೋನ್ನಲ್ಲಿ PM Kisan ಆಪ್ ಇದ್ದರೆ, ಅದನ್ನು ಓಪನ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ಅಪ್ಲಿಕೇಶನ್ನಲ್ಲೂ ಸಹ PM Kisan 22nd Instalment Status ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
3.ಹೆಸರು ಪಟ್ಟಿ (Beneficiary List) ಡೌನ್ಲೋಡ್ ಮಾಡಿ PM Kisan 22nd Instalment ₹2,000 ಸ್ಟೇಟಸ್ ಪರಿಶೀಲನೆ | How to Download PM Kisan Beneficiary List
ನೀವು ನಿಮ್ಮ ಗ್ರಾಮದ PM Kisan 22ನೇ ಕಂತಿನ ಹೆಸರು ಪಟ್ಟಿ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಬಹುದು.
- ಮೊದಲು PM Kisan ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
- ನಂತರ ಲಾಗಿನ್ ಮಾಡಿ ಮುಖ ಪುಟದಲ್ಲಿ ‘Farmers Corner‘ ಅಡಿಯಲ್ಲಿ ‘Beneficiary List‘ ಆಯ್ಕೆ ಮಾಡಿ.
- ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲ್ಲೂಕು, ಗ್ರಾಮ ಮತ್ತು ಹೋಬಳಿ ಆಯ್ಕೆ ಮಾಡಿ.
- ನಂತರ ‘Get Report‘ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ PDF ಪಟ್ಟಿ ತೆರೆಯುತ್ತದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಿ. ಹೆಸರು ಇದ್ದರೆ, ನೀವು ಪಿಎಂ ಕಿಸಾನ್ 22ನೇ ಕಂತಿಗೆ ಅರ್ಹರು.
4.CSC ಅಥವಾ ಬ್ಯಾಂಕ್ ಪಾಸ್ಬುಕ್ ಮೂಲಕ PM Kisan 22nd Instalment ₹2,000 ಸ್ಟೇಟಸ್ ಪರಿಶೀಲನೆ | Check PM Kisan Payment Status via CSC / Bank Passbook
ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ (CSC) ಗೆ ಹೋಗಿ ನಿಮ್ಮ ಸ್ಟೇಟಸ್ ಪರೀಕ್ಷಿಸಿಕೊಳ್ಳಬಹುದು. ಇಲ್ಲವೇ ನಿಮ್ಮ ಬ್ಯಾಂಕ್ ಪಾಸ್ಬುಕ್ ಅನ್ನು ಅಪ್ಡೇಟ್(Update) ಮಾಡಿಸಿ. ಖಾತೆಗೆ ಹಣ ಜಮಾ ಆಗಿದ್ದರೆ, ಪಾಸ್ಬುಕ್ನಲ್ಲಿ ‘PM Kisan 22nd Instalment’ ಅಥವಾ ‘DBT‘ ಎಂದು ಎಂಟ್ರಿಯಾಗಿರುತ್ತದೆ.
ಕರ್ನಾಟಕದ ರೈತರಿಗೆ PM Kisan 22ನೇ ಕಂತಿನ ಮಹತ್ವ | Importance of PM Kisan 22nd Instalment ₹2,000 for Karnataka Farmers
ಕರ್ನಾಟಕ ಕೃಷಿ ಪ್ರಧಾನ ರಾಜ್ಯವಾಗಿದ್ದು, ರಾಜ್ಯದ ಬೆಳಗಾವಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ದಾವಣಗೆರೆ, ಕಲಬುರಗಿ, ಬಳ್ಳಾರಿ, ರಾಯಚೂರು ಮುಂತಾದ ಜಿಲ್ಲೆಗಳ ಲಕ್ಷಾಂತರ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
PM Kisan 22ನೇ ಕಂತಿನ ₹2000 ಹಣ(PM Kisan 22nd installment ₹2000) ರೈತರಿಗೆ ಬಿತ್ತನೆ ಸಮಯದಲ್ಲಿ ದೊಡ್ಡ ನೆರವಾಗಲಿದೆ. ಮುಂಗಾರು ಹಂಗಾಮಿನ (ಖಾರಿಫ್) ತಯಾರಿಗಾಗಿ ಬೀಜ, ಗೊಬ್ಬರ, ಔಷಧಗಳ ಖರೀದಿಗೆ ಈ ಹಣವನ್ನು ಬಳಸಿಕೊಳ್ಳಬಹುದು. ಜೊತೆಗೆ ಮನೆಯ ಸಣ್ಣಪುಟ್ಟ ಖರ್ಚುಗಳಿಗೂ ಇದು ಆಸರೆಯಾಗಲಿದೆ.
ನಿಮ್ಮ ಖಾತೆಗೆ PM Kisan 22ನೇ ಕಂತಿನ ₹2000 Installment ಹಣ ಬಾರದಿದ್ದರೆ ಕಾರಣಗಳು | Why PM Kisan 22nd Instalment Payment Not Credited
ಕೆಲವು ರೈತರ ಖಾತೆಗಳಿಗೆ PM Kisan 22nd Instalment ಹಣ ಬರದೇ ಇರಬಹುದು. ಇದಕ್ಕೆ ಮುಖ್ಯ ಕಾರಣಗಳು:
eKYC ಆಗಿಲ್ಲ: ನಿಮ್ಮ PM Kisan ಖಾತೆಯ ಈ-ಕೇವೈಸಿ (eKYC) ಆಗದೇ ಇದ್ದಲ್ಲಿ ಹಣ ಬರಲ್ಲ, ಸರ್ಕಾರ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಿರುತ್ತದೆ. ತಕ್ಷಣವೇ ಹತ್ತಿರದ CSC ಕೇಂದ್ರಕ್ಕೆ ಹೋಗಿ ಅಥವಾ pmkisan.gov.in ಪೋರ್ಟಲ್ ಮೂಲಕ eKYC ಪೂರ್ಣಗೊಳಿಸಿ.
ಆಧಾರ್-ಬ್ಯಾಂಕ್ ಲಿಂಕ್ ಆಗಿಲ್ಲ: ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರುವುದು ಕಡ್ಡಾಯವಾಗಿದೆ.
ಭೂಮಿ ದಾಖಲೆಗಳು (RTC/ಪಹಣಿ) ಸರಿಯಿಲ್ಲ: ನಿಮ್ಮ ಹೆಸರಿನಲ್ಲಿ ಕೃಷಿ ಭೂಮಿ ಇದೆ ಎಂಬ ಮಾಹಿತಿ ಗ್ರಾಮದ ದಾಖಲೆಗಳಲ್ಲಿ ನವೀಕೃತವಾಗಿರಬೇಕು.
ಅರ್ಹತಾ ಮಾನದಂಡಗಳನ್ನು ಪೂರೈಸದಿರುವುದು: ನೀವು ಸರ್ಕಾರಿ ನೌಕರರಾಗಿದ್ದರೆ, ಪಿಂಚಣಿದಾರರಾಗಿದ್ದರೆ ಅಥವಾ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ನಿಮಗೆ ಈ ಯೋಜನೆ ಅನ್ವಯಿಸುವುದಿಲ್ಲ.
Conclusion
PM Kisan 22nd Instalment ಈಗಾಗಲೇ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಕರ್ನಾಟಕದ ರೈತರು ತಮ್ಮ PM Kisan 22ನೇ ಕಂತಿನ ಸ್ಟೇಟಸ್ ಅನ್ನು ತಪ್ಪದೇ ಪರಿಶೀಲಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ, ತಕ್ಷಣವೇ ಅವುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಮುಂದಿನ ಕಂತುಗಳಿಗೆ ಸಿದ್ಧರಾಗಬೇಕು.
Back To Home Page: Click here
FAQ – PM Kisan 22ನೇ Installment ಸ್ಟೇಟಸ್ ಚೆಕ್
PM Kisan 22ನೇ ಕಂತಿನಲ್ಲಿ ಎಷ್ಟು ಹಣ ಸಿಗುತ್ತದೆ?
ಪ್ರತಿ ಅರ್ಹ ರೈತರ ಖಾತೆಗೆ ₹2,000 (ಎರಡು ಸಾವಿರ ರೂಪಾಯಿಗಳು) ಜಮಾ ಆಗುತ್ತವೆ.
PM Kisan 22ನೇ ಕಂತು ಯಾವಾಗ ಬಿಡುಗಡೆಯಾಯಿತು?
ಮಾರ್ಚ್ 13, 2026 ರಂದು ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಂತಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
PM Kisan 22ನೇ ಕಂತಿನ ಸ್ಟೇಟಸ್ ಹೇಗೆ ಚೆಕ್ ಮಾಡುವುದು?
pmkisan.gov.in ವೆಬ್ಸೈಟ್ ನಲ್ಲಿ Beneficiary Status ಅಡಿಯಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಹಾಕಿ ಪರಿಶೀಲಿಸಬಹುದು.
ನನ್ನ ಖಾತೆಗೆ PM Kisan 22ನೇ ಕಂತಿನ ಹಣ ಬಂದಿಲ್ಲ. ನಾನು ಯಾರನ್ನು ಸಂಪರ್ಕಿಸಬೇಕು?
ಮೊದಲು ಆನ್ಲೈನ್ನಲ್ಲಿ ಸ್ಟೇಟಸ್ ಚೆಕ್ ಮಾಡಿ. ಹೆಸರು ಇದ್ದೂ ಹಣ ಬಂದಿಲ್ಲವಾದರೆ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ನಿಮ್ಮ ಹೆಸರೇ ಪಟ್ಟಿಯಲ್ಲಿ ಇಲ್ಲದಿದ್ದರೆ, ನಿಮ್ಮ ಹೋಬಳಿಯ ಕಂದಾಯ ಇಲಾಖೆ ಅಥವಾ PM Kisan ಹೆಲ್ಪ್ಲೈನ್ (155261 / 1800-180-1551) ಗೆ ಕರೆ ಮಾಡಿ.
PM Kisan 22ನೇ ಕಂತಿಗೆ ನಾನು ಹೊಸತಾಗಿ ಅರ್ಜಿ ಸಲ್ಲಿಸಬಹುದೇ?
ಹೌದು, ನೀವು ಈ ಯೋಜನೆಗೆ ಅರ್ಹರಾಗಿದ್ದು, ಇದುವರೆಗೂ ನೋಂದಾಯಿಸಿಕೊಂಡಿಲ್ಲದಿದ್ದರೆ, ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಕಂದಾಯ ಇಲಾಖೆ ಸಹಾಯದಿಂದ pmkisan.gov.in ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಆದರೆ 22ನೇ ಕಂತಿಗೆ ಈಗ ನೋಂದಾಯಿಸಿದರೆ ಹಣ ಸಿಗಲು 23ನೇ ಕಂತಿನವರೆಗೆ ಕಾಯಬೇಕಾಗಬಹುದು.
ನಾನು ಈ ಹಿಂದೆ 5 ಕಂತು ಪಡೆದಿದ್ದೆ, ಆದರೆ ಈಗ ಹೆಸರು ತೆಗೆದು ಹಾಕಲಾಗಿದೆ. ಪುನಃ ಅರ್ಜಿ ಸಲ್ಲಿಸಬಹುದೇ?
ನಿಮ್ಮ ಹೆಸರು ಏಕೆ ತೆಗೆಯಲಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಹೆಚ್ಚಿನ ಸಂದರ್ಭದಲ್ಲಿ eKYC ಆಗದ ಕಾರಣ ತೆಗೆಯಲಾಗಿರುತ್ತದೆ. ನೀವು ಪೋರ್ಟಲ್ ಮೂಲಕ ಅಥವಾ ಹತ್ತಿರದ CSC ಕೇಂದ್ರದ ಮೂಲಕ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೆ ನೋಂದಾಯಿಸಿಕೊಳ್ಳಬಹುದು.
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.