Aadhaar Card Update 2026: ಈ ಕೆಲಸ ಮಾಡದಿದ್ದರೆ ನಿಮ್ಮ ಮಕ್ಕಳ ಆಧಾರ್ ಕಾರ್ಡ್ ರದ್ದಾಗುತ್ತದೆ! ಬೇಗ ಈ ಕೆಲಸ ಮಾಡಿ

Spread the love

Children Aadhaar Card Update 2026:ಈ ಕೆಲಸ ಮಾಡದಿದ್ದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗುತ್ತೆ. ಯಾವ ಕೆಲಸ ಮಾಡಬೇಕು, ಯಾಕೆ ಆಧಾರ ಕಾರ್ಡ್(Aadhaar Card) ರದ್ದಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ

ಈಗಂತೂ ಪ್ರತಿಯೊಬ್ಬರಿಗೂ ಕೂಡ ಆಧಾರ್ ಕಾರ್ಡ್ ಭಾರತೀಯ ನಾಗರಿಕನ ವಿಶಿಷ್ಟ ಗುರುತಾಗಿದೆ. ಆಧಾರ್ ಕಾರ್ಡ್ ಇದ್ದರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳು ಪಡೆಯಬಹುದು ಅದಲ್ಲದೆ, ನಮ್ಮ ಗುರುತಾಗಿಯೂ ಕೂಡ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಮಕ್ಕಳಿಗೂ ಆಧಾರ್ ಮಾಡಿಸುವುದು ಈಗ ತುಂಬಾ ಅತ್ಯಂತ ಮುಖ್ಯವಾಗಿದೆ.

ಈಗ, ಬಾಲ್ ಆಧಾರ್(Baal Aadhaar)‌ಗೆ ಸಂಬಂಧಿಸಿದ ಈ ಕೆಲಸವನ್ನು ಪೂರ್ಣಗೊಳಿಸುವುದು ತುಂಬಾ ಮುಖ್ಯ ಆಗಿದೆ, ಇಲ್ಲದಿದ್ದರೆ ನಿಮ್ಮ ಆಧಾರ್ ನಿಷ್ಕ್ರಿಯವಾಗಬಹುದು.

ರಾಜ್ಯ ಸರ್ಕಾರವು 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ (Mandatory Aadhaar Update) ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಈ ಸಂಬಂಧ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿ ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ.ಈ ದಿನಾಂಕದೊಳಗೆ ಅಪ್‌ಡೇಟ್(update) ಮಾಡಿಸದಿದ್ದರೆ, ಮುಂದೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

Table of Contents

ಮಕ್ಕಳಿಗಾಗಿ ಆಧಾರ್ ಕಾರ್ಡ್ ಮಾಡಿಸುವುದು ಏಕೆ ಅಗತ್ಯ? Children Aadhaar Card Update 2026

Children Aadhaar Card Update 2026: ಈ ಕೆಲಸ ಮಾಡದಿದ್ದರೆ ನಿಮ್ಮ ಮಕ್ಕಳ ಆಧಾರ್ ಕಾರ್ಡ್ ರದ್ದಾಗುತ್ತದೆ! ಬೇಗ ಈ ಕೆಲಸ ಮಾಡಿ Free

ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳಿಗಾಗಿ ಹಲವಾರು ಯೋಜನೆಯನ್ನು (ಮಧ್ಯಾಹ್ನದ ಊಟ, ಆರೋಗ್ಯ ಸೇವೆಗಳು, ಇತ್ಯಾದಿ) ನಡೆಸುತ್ತವೆ. ಆದರೆ ಮಕ್ಕಳನ್ನು ಶಾಲೆಗಳಿಗೆ ಸೇರಿಸುವಾಗ ಪ್ರವೇಶ ನಮೂನೆಯನ್ನು ಭರ್ತಿ ಮಾಡುವಾಗ, ಮಗುವಿನ ಆಧಾರ್(Children Aadhaar Update) ಸಂಖ್ಯೆಯನ್ನು ಸಹ ಕೇಳಲಾಗುತ್ತದೆ ಅದಕ್ಕಾಗಿ ಆಧಾರ್ ಕಾರ್ಡ್(Children Aadhaar Update) ಬೇಕಾಗುತ್ತದೆ.

ಬ್ಯಾಂಕ್ ಖಾತೆ, ಪಾಸ್ಪೋರ್ಟ್ ಅರ್ಜಿ ಮುಂತಾದವುಗಳಿಗೆ ಆಧಾರ್ ಕಾರ್ಡ್ ಬೇಕಾಗುತ್ತದೆ.

ಮಕ್ಕಳ ಆಧಾರ್ ಕಾರ್ಡ್ ಯಾಕೆ ರದ್ದಾಗುತ್ತದೆ? | Children Aadhaar Card Update 2026 ಕಾರಣಗಳು

ಹೌದು ಬಾಲ ಆಧಾರ್‌ಗೆ ಸಂಬಂಧಿಸಿದ ಒಂದು ಪ್ರಮುಖ ಮಾಹಿತಿ ನಿಮ್ಮ ಮಗುವಿನ ಆಧಾರ್ ಕಾರ್ಡ್(Children Aadhaar card) ನಿಷ್ಕ್ರಿಯವಾಗಬಹುದು ಎಂದು ತಿಳಿಯದೆ ಇರುವುದು. ಮಗುವಿಗೆ 5 ವರ್ಷ ತುಂಬಿದ ನಂತರವೆ, ಅವನ ಅಥವಾ ಅವಳ ಬಯೋಮೆಟ್ರಿಕ್(Biometric Update) ಪರಿಶೀಲನೆ ಅಗತ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದನ್ನು ನೀವು ಮಾಡದಿದ್ದರೆ ಮಗುವಿನ ಬಾಲ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

5 ರಿಂದ 17 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯವೇ? | Children Aadhaar Card Update 2026 Rules

5 ರಿಂದ 17 ವಯಸ್ಸಿನ ಮಕ್ಕಳ ಆಧಾರ್ ಸಂಖ್ಯೆಗೆ ಕಡ್ಡಾಯ ಬೈಯೋಮೆಟ್ರಿಕ್ ಅಪ್ಡೇಟ್ಗಾಗಿ (Mandatory Biometric Update) ಎಂದಿನಂತೆ ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ದಿನಾಂಕ 30/09/2026 ರವರೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ತಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಿಸಿಕೊಳ್ಳಬಹುದಾಗಿದೆ ಇದರಿಂದಾಗಿ ಮಕ್ಕಳ ಶಾಲೆಯ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರದ ವಿವಿಧ ಯೋಜನೆಗಳು, ವಿದ್ಯಾರ್ಥಿ ವೇತನ, ತರಬೇತಿಗಳು ಸೇರಿದಂತೆ ಇತ್ಯಾದಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ.

ಯಾಕೆ ಆಧಾರ್ ಅಪ್‌ಡೇಟ್ ಇಷ್ಟು ಮುಖ್ಯ? (Why Aadhaar Update is Important)

ಮಕ್ಕಳು ಹುಟ್ಟಿದ ತಕ್ಷಣ ಮಾಡಿಸಲಾಗುವ ಆಧಾರ್ ಕಾರ್ಡ್(Aadhaar card)‌ನಲ್ಲಿ ಸಾಮಾನ್ಯವಾಗಿ ಕೇವಲ ಫೋಟೋ ಮತ್ತು ಮೂಲ ವೈಯಕ್ತಿಕ ಮಾಹಿತಿಯಷ್ಟೇ ದಾಖಲಿಸಲಾಗಿರುತ್ತದೆ. ಆ ಹಂತದಲ್ಲಿ ಮಕ್ಕಳ ಬೆರಳಚ್ಚು (Fingerprints) ಹಾಗೂ ಕಣ್ಣಿನ ಪಾಪೆ (Iris Scan) ಸಂಪೂರ್ಣವಾಗಿ ಅಭಿವೃದ್ಧಿಯಾಗಿರದ ಕಾರಣ ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ.

ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ದೇಹದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ವಿಶೇಷವಾಗಿ ಬೆರಳಚ್ಚು ಮತ್ತು ಕಣ್ಣಿನ ಗುರುತುಗಳು ಬದಲಾಗುವುದರಿಂದ ಹಳೆಯ ಬಯೋಮೆಟ್ರಿಕ್ ಮಾಹಿತಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ದೃಢೀಕರಣದಲ್ಲಿ ಸಮಸ್ಯೆ ಉಂಟಾಗಬಹುದು.

ಇದೇ ಕಾರಣದಿಂದ ಭಾರತ ಸರ್ಕಾರವು ಮಕ್ಕಳಿಗೆ 5 ವರ್ಷ ಮತ್ತು 15 ವರ್ಷ ವಯಸ್ಸಿನಲ್ಲಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ಅಪ್‌ಡೇಟ್ ಮಾಡಿದ ನಂತರ ಆಧಾರ್ ಕಾರ್ಡ್‌ನ ಮಾಹಿತಿ ಹೆಚ್ಚು ನಿಖರವಾಗಿದ್ದು, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಯಾವುದೇ ತೊಂದರೆ ಇಲ್ಲದೆ ಬಳಸಲು ಸಾಧ್ಯವಾಗುತ್ತದೆ.

ಅಪ್‌ಡೇಟ್ ಮಾಡಿಸದಿದ್ದರೆ ಎದುರಾಗುವ ಸಮಸ್ಯೆಗಳು (Problems if Aadhaar is Not Updated)

ಇಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಿ ವಿದ್ಯಾರ್ಥಿ ವೇತನಗಳು (Scholarship) ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿವೆ. ಆದರೆ ಆಧಾರ್ ಕಾರ್ಡ್ ಸರಿಯಾಗಿ ಅಪ್‌ಡೇಟ್ ಆಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರದಿದ್ದರೆ, ಹಣ ಟ್ರಾನ್ಸ್‌ಫರ್ ವಿಫಲವಾಗುವ ಸಾಧ್ಯತೆ ಇದೆ.

ಅದೇ ರೀತಿ, ಹೊಸದಾಗಿ ಶಾಲೆಗೆ ಪ್ರವೇಶ ಪಡೆಯುವಾಗ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ನೋಂದಣಿ ಪ್ರಕ್ರಿಯೆಯಲ್ಲಿ ಆಧಾರ್ ಪರಿಶೀಲನೆ (Aadhaar Verification) ಕಡ್ಡಾಯವಾಗಿರುತ್ತದೆ. ಅಪ್‌ಡೇಟ್ ಮಾಡದ ಆಧಾರ್ ಇದ್ದರೆ ಪ್ರವೇಶ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿ, ಕೆಲ ಸಂದರ್ಭಗಳಲ್ಲಿ ಪ್ರವೇಶ ನಿರಾಕರಿಸುವ ಪರಿಸ್ಥಿತಿಯೂ ಎದುರಾಗಬಹುದು.

ಇನ್ನು ಹಲವು ಉಚಿತ ಯೋಜನೆಗಳು (Free Schemes), ಶಿಕ್ಷಣ ಸೌಲಭ್ಯಗಳು (Education Benefits) ಮತ್ತು ವಿವಿಧ ತರಬೇತಿ ಕಾರ್ಯಕ್ರಮಗಳು (Training Programs) ಈಗ ಆಧಾರ್ ಕಾರ್ಡ್‌ಗೆ ನೇರವಾಗಿ ಲಿಂಕ್ ಆಗಿವೆ. ಆದ್ದರಿಂದ ಆಧಾರ್ ಅಪ್‌ಡೇಟ್ ಮಾಡದಿದ್ದರೆ, ಮಕ್ಕಳು ಮತ್ತು ಫಲಾನುಭವಿಗಳು ಈ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.

ಬಾಲ ಆಧಾರ್ ಕಾರ್ಡ್ ಎಂದರೇನು? | 5 ವರ್ಷದೊಳಗಿನ ಮಕ್ಕಳ ಆಧಾರ್ ವಿವರಗಳು 2026 | What is Baal Aadhaar card?

ಬಾಲ ಆಧಾರ ಕಾರ್ಡ ಎಂದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಾಲ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ ಬಯೋಮೆಟ್ರಿಕ್ ಡೇಟಾವನ್ನು ತೆಗೆದುಕೊಳ್ಳಲಾಗುವುದಿಲ್ಲ, ಇದನ್ನು ಮಗುವಿನ ಫೋಟೋ ಮತ್ತು ಪೋಷಕರ ದಾಖಲೆಗಳ ಆಧಾರದ ಮೇಲೆ ಮಾತ್ರವೆ ಮಾಡಲಾಗುತ್ತದೆ. ಇದು ನೀಲಿ ಬಣ್ಣದ ಥೀಮ್ ಸಹ ಹೊಂದಿರುತ್ತದೆ.

Aadhar card renewal ಆಧಾರ್ ನವೀಕರಣ

  • 5 ವರ್ಷ: ಮೊಟ್ಟಮೊದಲ ಬಯೋಮೆಟ್ರಿಕ್ ಅಪ್‌ಡೇಟ್ (ಫಿಂಗರ್‌ಪ್ರಿಂಟ್ + ಐರಿಸ್ ಸ್ಕ್ಯಾನ್) ಮಾಡಿಸಿಕೊಳ್ಳಬೇಕಗುತ್ತೆ.
  • ಪ್ರತಿ 15 ವರ್ಷ ಕೆ: ಮತ್ತೊಮ್ಮೆ ಬಯೋಮೆಟ್ರಿಕ್ ನವೀಕರಣ ಮಾಡಿಸಬೇಕು ಗುರುತಿನ ನಿಖರತೆಗಾಗಿ ಮಾಡಿಸಿಕೊಳ್ಳಬೇಕು.

Step-by-Step Process for Aadhaar Update (ಆಫ್‌ಲೈನ್ ವಿಧಾನ)

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಧಾರ್ ಸೆವಾ ಕೇಂದ್ರಗಳು (Aadhaar Seva Kendra) ಇವೆ.

  • ಹತ್ತಿರದ ಆಧಾರ್ ಸೆವಾ ಕೇಂದ್ರ ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಿ.
  • ಮಗುವನ್ನು ಮತ್ತು ಪೋಷಕರನ್ನು ಕರೆದುಕೊಂಡು ಹೋಗಿ.
  • ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ (Correction/Update Form).
  • ಡಾಕ್ಯುಮೆಂಟ್‌ಗಳ ಜೆರಾಕ್ಸ್ ಜೊತೆಗೆ ಮೂಲ ಪ್ರತಿಗಳನ್ನು ತೋರಿಸಿ.
  • ಮಗುವಿನ ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ಮಾಡಿಸಿ.
  • ಅಧಿಕಾರಿಗಳು ಮಗುವಿನ ಫೋಟೋ ತೆಗೆಯುತ್ತಾರೆ.
  • ಸ್ಲಿಪ್ ಪಡೆಯಿರಿ. ಇದರಲ್ಲಿ Update Request Number (URN) ಇರುತ್ತದೆ.
  • ಶುಲ್ಕ: free
  • ಬಯೋಮೆಟ್ರಿಕ್ ಅಪ್‌ಡೇಟ್ ಉಚಿತ(Biometric update is free), ಆದರೆ ಡಾಕ್ಯುಮೆಂಟ್ ಬದಲಾವಣೆಗೆ ಶುಲ್ಕವಿದೆ).

ಮಕ್ಕಳಿಗಾಗಿ ಆಧಾರ್ ಕಾರ್ಡ್ ಮಾಡಲು ಈ ಪ್ರಮುಖ ದಾಖಲೆಗಳು ಅಗತ್ಯವಿದೆ

  1. ಮಗುವಿನ ಜನನ ಪ್ರಮಾಣಪತ್ರ ಬೇಕು
  2. ಪೋಷಕರಲ್ಲಿ ಯಾರಾದರೊಬ್ಬರ ಆಧಾರ್ ಕಾರ್ಡ್ (ಮಗುವಿನ ಆಧಾರ್ ಅನ್ನು ಅದರ ಆಧಾರದ ಮೇಲೆ ಮಾಡಲಾಗುತ್ತದೆ)
  3. ಅಡ್ರೆಸ್ ಪ್ರೂಫ್ (ವಿದ್ಯುತ್ ಬಿಲ್, ಪಡಿತರ ಚೀಟಿ, ಬ್ಯಾಂಕ್ ಸ್ಟೇಟ್‌ಮೆಂಟ್ ಇತ್ಯಾದಿ) ಕೊಡಬೇಕಾಗುತ್ತೆ

ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ಆನ್‌ಲೈನ್ ಪ್ರಕ್ರಿಯೆ

  • ಹಂತ 1: ಮೊದಲು UIDAI ವೆಬ್‌ಸೈಟ್‌ಗೆ ಭೇಟಿ ನೀಡಬೇಕು (https://uidai.gov.in).
  • ಹಂತ 2: ನಂತರ “ಬುಕ್ ಆಧಾರ್ ಅಪಾಯಿಂಟ್ಮೆಂಟ್” ವಿಭಾಗದಿಂದ ಹತ್ತಿರದ ಆಧಾರ್ ಕೇಂದ್ರವನ್ನು ಆಯ್ಕೆಮಾಡಿಕೊಳ್ಳಿ.
  • ಹಂತ 3: ನಂತರ ಮಗು ಮತ್ತು ಪೋಷಕರ ದಾಖಲೆಗಳೊಂದಿಗೆ ಕೇಂದ್ರಕ್ಕೆ ಹೋಗಿ.
  • ಹಂತ 4: ನಂತರ ಮಗುವಿನ ಫೋಟೋ ತೆಗೆಯಲಾಗುತ್ತದೆ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುವುದಿಲ್ಲ).
  • ಹಂತ 5: ನಂತರ ಕೆಲವೇ ದಿನಗಳಲ್ಲಿ, ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ನೀವು ಅಂಚೆ ಮೂಲಕ ನಿಮಗೆ ಸಿಗುತ್ತೆ ಅಥವಾ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ಮೂಲಕ ಸ್ವೀಕರಿಸಬಹುದು.

5 ವರ್ಷ ಮತ್ತು 15 ವರ್ಷಗಳ ನಂತರ ಮತ್ತೆ ಆಧಾರ್ ಅನ್ನು ನವೀಕರಿಸುವುದು ಅವಶ್ಯಕ.

5 ವರ್ಷದ ನಂತರ: ಮಗುವಿನ ಬೆರಳಚ್ಚುಗಳು ಮತ್ತು ಕಣ್ಣಿನ ಸ್ಕ್ಯಾನಿಂಗ್ ಅನ್ನು ತೆಗೆದುಕೊಳ್ಳಲಾಗುತ್ತದೆ.

15 ನೇ ವಯಸ್ಸಿನಲ್ಲಿ: ಗುರುತಿಸುವಿಕೆ ನಿಖರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್‌ಗಳನ್ನು ಮತ್ತೆ ನವೀಕರಿಸಲಾಗುತ್ತದೆ.

ತೀರ್ಮಾನ (Conclusion)

ಮಕ್ಕಳ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅಪ್‌ಡೇಟ್(Children Aadhaar Card Biometric Update) ಸಮಯಕ್ಕೆ ಮಾಡುವುದು ಈಗ ಅತ್ಯಂತ ಅಗತ್ಯವಾಗಿದೆ. 5 ವರ್ಷ ಮತ್ತು 17 ವರ್ಷದಲ್ಲಿ ಕಡ್ಡಾಯವಾಗಿ ಅಪ್‌ಡೇಟ್ ಮಾಡಿಸಿದರೆ ಮಾತ್ರ ಆಧಾರ್ ಕಾರ್ಡ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರ್ಕಾರಿ ಯೋಜನೆಗಳು, ವಿದ್ಯಾರ್ಥಿ ವೇತನ, ಶಾಲಾ ಪ್ರವೇಶ ಹಾಗೂ ಇತರೆ ಸೌಲಭ್ಯಗಳನ್ನು ಯಾವುದೇ ತೊಂದರೆ ಇಲ್ಲದೆ ಪಡೆಯಬಹುದು.

ಆದರೆ ಈ ಅಪ್‌ಡೇಟ್ ಮಾಡದೇ ಇದ್ದರೆ ಆಧಾರ್ ಪರಿಶೀಲನೆ ವಿಫಲವಾಗುವ ಸಾಧ್ಯತೆ ಇದೆ ಮತ್ತು ಹಲವಾರು ಸರ್ಕಾರಿ ಸೇವೆಗಳ ಲಾಭದಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಪೋಷಕರು ಸಮಯಕ್ಕೆ ಸರಿಯಾಗಿ ಹತ್ತಿರದ ಆಧಾರ್ ಸೆವಾ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆಧಾರ್ ಅಪ್‌ಡೇಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

Back To Home Page: Click here

FAQ – Children Aadhaar Card Update 2026 Karnataka

ಮಕ್ಕಳ ಆಧಾರ್ ಕಾರ್ಡ್ ಯಾಕೆ ಅಪ್‌ಡೇಟ್ ಮಾಡಬೇಕು?

ಮಗು ಬೆಳೆಯುವಾಗ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಬದಲಾವಣೆ ಆಗುತ್ತದೆ. ಆದ್ದರಿಂದ ಸರಿಯಾದ ಗುರುತಿಗಾಗಿ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯವಾಗಿದೆ

ಯಾವ ವಯಸ್ಸಿನಲ್ಲಿ ಆಧಾರ್ ಅಪ್‌ಡೇಟ್ ಮಾಡಬೇಕು?

5 ವರ್ಷಕ್ಕೆ ಮೊದಲ ಬಯೋಮೆಟ್ರಿಕ್ ಅಪ್‌ಡೇಟ್
15 ವರ್ಷಕ್ಕೆ ಎರಡನೇ ಬಯೋಮೆಟ್ರಿಕ್ ಅಪ್‌ಡೇಟ್

ಮಕ್ಕಳ ಆಧಾರ್ ಅಪ್‌ಡೇಟ್ ಮಾಡದಿದ್ದರೆ ಏನು ಆಗುತ್ತದೆ?

ಆಧಾರ್ ನಿಷ್ಕ್ರಿಯವಾಗಬಹುದು
ವಿದ್ಯಾರ್ಥಿ ವೇತನ ವಿಫಲವಾಗಬಹುದು
ಶಾಲಾ ಪ್ರವೇಶದಲ್ಲಿ ತೊಂದರೆ ಉಂಟಾಗಬಹುದು
ಸರ್ಕಾರಿ ಯೋಜನೆಗಳ ಲಾಭ ಸಿಗದೇ ಇರಬಹುದು

ಮಕ್ಕಳ ಆಧಾರ್ ಅಪ್‌ಡೇಟ್ ಉಚಿತವೇ?

ಹೌದು, 5 ರಿಂದ 15 ವರ್ಷದೊಳಗಿನ ಬಯೋಮೆಟ್ರಿಕ್ ಅಪ್‌ಡೇಟ್ ಸಾಮಾನ್ಯವಾಗಿ ಉಚಿತವಾಗಿದೆ.

ಅಪ್‌ಡೇಟ್ ಮಾಡಲು ಯಾವ ದಾಖಲೆಗಳು ಬೇಕು?

ಮಗುವಿನ ಜನನ ಪ್ರಮಾಣಪತ್ರ
ಪೋಷಕರ ಆಧಾರ್ ಕಾರ್ಡ್
ವಿಳಾಸ ಪ್ರಮಾಣ (Address Proof)

ಆಧಾರ್ ಅಪ್‌ಡೇಟ್ ಎಲ್ಲಿಗೆ ಮಾಡಬಹುದು?

ಹತ್ತಿರದ Aadhaar Seva Kendra ಅಥವಾ ಬ್ಯಾಂಕ್ ಆಧಾರ್ ಕೇಂದ್ರಗಳಲ್ಲಿ ಮಾಡಬಹುದು.

Leave a Comment