PM Kisan 22ನೇ ಕಂತು: ರೈತರಿಗೆ ಭರ್ಜರಿ ಗುಡ್ ನ್ಯೂಸ್ – ಪಿಎಂ ಕಿಸಾನ್ ₹2000 ಹಣ ಬಿಡುಗಡೆ ದಿನಾಂಕ ಫಿಕ್ಸ್! ಕೇಂದ್ರದಿಂದ ಅಧಿಕೃತ ಘೋಷಣೆ

Spread the love

PM Kisan 22nd Installment Release Date Fix:ಕರ್ನಾಟಕ ಸೇರಿದಂತೆ ದೇಶಾದ್ಯಂತದ ಸುಮಾರು 10 ಕೋಟಿ ರೈತರು ಎದುರು ನೋಡುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM-KISAN Yojana) 22ನೇ ಕಂತಿನ (22nd Installment) ಬಿಡುಗಡೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮೂಲಗಳ ಪ್ರಕಾರ, ಮಾರ್ಚ್ 13, 2026 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಐತಿಹಾಸಿಕ ಕಂತನ್ನು ದೇಶದ ರೈತರಿಗೆ ಅರ್ಪಿಸಲಿದ್ದಾರೆ.

ಈ ಬಾರಿಯ ಕಂತು ವಿಶೇಷವಾಗಿದ್ದು, ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆ ಅಥವಾ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡುತ್ತಿದೆ ಎಂಬ ಮಾತುಗಳ ನಡುವೆ, ಕೃಷಿ ಸಚಿವಾಲಯವು ಅಧಿಕೃತ ಪ್ರಕಟಣೆ ಹೊರಡಿಸಿ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ನೋಡಲ್ ಅಧಿಕಾರಿಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ನೋಂದಾಯಿತ ರೈತರಿದ್ದು, ಈ ಬಾರಿ ರಾಜ್ಯಕ್ಕೆ ಸುಮಾರು 500 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವ ನಿರೀಕ್ಷೆ ಇದೆ.

ಆದರೆ, ಕೇಂದ್ರ ಸರ್ಕಾರ(Central Govt)ವು ಕೆಲವು ನಿಯಮಗಳನ್ನು ಕಡ್ಡಾಯಗೊಳಿಸುವುದರಿಂದ ರೈತರು ಈ ಹಣ ನಿಮ್ಮ ಬ್ಯಾಂಕ್ ಖಾತೆ(Bank account)ಗೆ ಸರಾಗವಾಗಿ ಬರಬೇಕಾದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿ(Beneficiary List)ಯಲ್ಲಿ ಇರಬೇಕು ಹಾಗೂ ನೀವು ಕೆಲವು ಪ್ರಮುಖ ಕೆಲಸಗಳನ್ನು ತಕ್ಷಣವೇ ಮಾಡಿಕೊಳ್ಳಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ, ನಿಮ್ಮ ಹೆಸರು ಅನರ್ಹರ ಪಟ್ಟಿಗೆ (Rejected Beneficiary List) ಸೇರುವ ಸಂಭವವಿದೆ.

ಈ ಲೇಖನದಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಇದಿಯಾ ಎಂದು ನೋಡುವುದು ಹೇಗೆ, ಯಾವೆಲ್ಲ ಕೆಲಸಗಳು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಲೇಖನದಲ್ಲಿ ತಿಳಿಸಿಕೊಡಲಾಗಿದೆ

Table of Contents

PM Kisan 22ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ? | PM Kisan 22nd Installment Release Date Fix

PM Kisan 22nd Installment Release Date Fix: ರೈತರಿಗೆ ಪಿಎಂ ಕಿಸಾನ್ ₹2000 ಹಣ ಬಿಡುಗಡೆ ದಿನಾಂಕ ಫಿಕ್ಸ್! ಕೇಂದ್ರದಿಂದ ಅಧಿಕೃತ ಘೋಷಣೆ

ಕೇಂದ್ರ ಕೃಷಿ ಸಚಿವಾಲಯದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ 22ನೇ ಕಂತನ್ನು ಮಾರ್ಚ್ 13 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಂತನ್ನು ದೇಶದ ರೈತರಿಗೆ ಅರ್ಪಿಸಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 22ನೇ ಕಂತು: ಏನಿದು ಅಧಿಕೃತ ಸರ್ಕಾರಿ ಆದೇಶ? (Official Circular Details)

ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವೊಂದನ್ನು ರವಾನಿಸಿದೆ. ಈ ಪತ್ರದಲ್ಲಿ, ಮಾರ್ಚ್ 13, 2026 ರಂದು 22ನೇ ಕಂತನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಈ ಹಿಂದಿನ ಕಂತುಗಳಲ್ಲಿ ಹಣ ವರ್ಗಾವಣೆ (DBT Failure) ವಿಫಲವಾದ ರೈತರ ಪಟ್ಟಿಯನ್ನು ಪ್ರತ್ಯೇಕವಾಗಿ ಗುರುತಿಸಿ, ಅವರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವೊಂದನ್ನು ರವಾನಿಸಿದೆ. ಈ ಪತ್ರದಲ್ಲಿ, ಮಾರ್ಚ್ 13, 2026 ರಂದು 22ನೇ ಕಂತನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಈ ಹಿಂದಿನ ಕಂತುಗಳಲ್ಲಿ ಹಣ ವರ್ಗಾವಣೆ (DBT Failure) ವಿಫಲವಾದ ರೈತರ ಪಟ್ಟಿಯನ್ನು ಪ್ರತ್ಯೇಕವಾಗಿ ಗುರುತಿಸಿ, ಅವರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪಿಎಂ ಕಿಸಾನ್ 22ನೇ ಕಂತು ₹2000 ಹಣ ರೈತರಿಗೆ ಈ ಕಂತು ಏಕೆ ಮಹತ್ವದ್ದು? | PM Kisan 22th Installment Release Date

ಕರ್ನಾಟಕವು ಕೃಷಿ-ಹವಾಮಾನ ವೈವಿಧ್ಯತೆ ಹೊಂದಿರುವ ರಾಜ್ಯ. ಉತ್ತರ ಕರ್ನಾಟಕದ ಒಣ ಪ್ರದೇಶದಿಂದ ಹಿಡಿದು ದಕ್ಷಿಣ ಕರ್ನಾಟಕದ ತೇವಾಂಶ ಪ್ರದೇಶದವರೆಗೆ, ಪ್ರತಿ ಜಿಲ್ಲೆಯ ರೈತರು ಈ ಹಣವನ್ನು ಬಹು ನಿರೀಕ್ಷೆಯಿಂದ ಕಾಯುತ್ತಾರೆ.

ಬೇಸಿಗೆ ಪೂರ್ವ ಸಿದ್ಧತೆ: ಮಾರ್ಚ್ ತಿಂಗಳು ಬೇಸಿಗೆಯ ಆರಂಭವನ್ನು ಸೂಚಿಸುತ್ತದೆ. ಮುಂದಿನ ಮುಂಗಾರು (ಖಾರಿಫ್) ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಲು ರೈತರು ಈ ಹಣವನ್ನು ಬಂಡವಾಳವಾಗಿ ಬಳಸಿಕೊಳ್ಳಬಹುದು.

ತೋಟಗಾರಿಕೆ ಬೆಳೆಗಾರರಿಗೆ ಆಸರೆ: ಕರ್ನಾಟಕದಲ್ಲಿ ಕಾಫಿ, ಅಡಕೆ, ಮೆಣಸು, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳಿಗೆ ಬೇಸಿಗೆಯಲ್ಲಿ ಹೆಚ್ಚುವರಿ ನೀರಾವರಿ ಅಗತ್ಯವಿರುತ್ತದೆ. ಡೀಸೆಲ್ ಜನರೇಟರ್ ಮತ್ತು ಪಂಪ್ಸೆಟ್ ನಿರ್ವಹಣೆಗೆ ಬೇಕಾದ ವೆಚ್ಚವನ್ನು ಈ 2000 ರೂಪಾಯಿಗಳು ಸ್ವಲ್ಪ ಮಟ್ಟಿಗೆ ನೀಗಿಸುತ್ತವೆ.

ಹಬ್ಬದ ಸಂಭ್ರಮ: ಮಾರ್ಚ್ ತಿಂಗಳಲ್ಲಿ ಯುಗಾದಿ (Ugadi) ಹಬ್ಬವು ಬರಲಿದ್ದು, ಹಬ್ಬದ ಖರ್ಚಿಗೆ ಈ ಹಣವು ರೈತ ಕುಟುಂಬಗಳಿಗೆ ವರದಾನವಾಗಲಿದೆ.

Beneficiary List Check ಮಾಡುವ ವಿಧಾನ | how to check beneficiary list in pm kisan

ಹಣ ಬಿಡುಗಡೆ(funds Release) ದಿನಾಂಕ ಘೋಷಣೆ(PM KISAN money release date Announcement)ಯಾದ ತಕ್ಷಣ, ರೈತರು ಮಾಡಬೇಕಾದ ಮೊದಲ ಕೆಲಸವೆಂದರೆ ತಮ್ಮ ಹೆಸರು ಫಲಾನುಭವಿ ಪಟ್ಟಿಯಲ್ಲಿದೆಯೇ ಎಂದು ಖಾತರಿಪಡಿಸಿಕೊಳ್ಳುವುದು. ಕಳೆದ ಕಂತುಗಳಲ್ಲಿ ಹಲವು ರೈತರ ಹೆಸರು ತಾಂತ್ರಿಕ ದೋಷ, ಆಧಾರ್ ಲಿಂಕ್ ಸಮಸ್ಯೆ ಅಥವಾ ಬ್ಯಾಂಕ್ ಖಾತೆ ಸೀಡಿಂಗ್ (Seeding) ಆಗದ ಕಾರಣ ಪಟ್ಟಿಯಿಂದ ಕೈಬಿಟ್ಟಿತ್ತು.

ಆನ್ಲೈನ್ನಲ್ಲಿ ಹೆಸರು ಪರಿಶೀಲಿಸುವ ವಿಧಾನ

  • ಮೊದಲು ಸರ್ಕಾರದ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.
  • ನಂತರ ಮುಖಪುಟದಲ್ಲಿರುವ ‘Farmers Corner‘ ವಿಭಾಗಕ್ಕೆ ಹೋಗಿ.
  • ನಂತರ ಅಲ್ಲಿ ‘Beneficiary List‘ ಆಯ್ಕೆ ಮಾಡಿ.
  • ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
  • ನಂತರ ‘Get Report‘ ಅಥವಾ ‘ವರದಿ ಪಡೆಯಿರಿ’ ಕ್ಲಿಕ್ ಮಾಡಿದೊಡನೆ ನಿಮ್ಮ ಗ್ರಾಮದ ಪಿಡಿಎಫ್ (PDF) ಪಟ್ಟಿ ಮುಂದೆ ಬರುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಚೆಕ್ ಮಾಡಿ ನೋಡಿ.

ತ್ವರಿತ ಪರಿಶೀಲನೆ (Quick Status Check):ಅದೇ ‘Farmers Corner‘ ನಲ್ಲಿ ‘Know Your Status‘ ಆಯ್ಕೆ ಇದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ. ನಿಮ್ಮ ಹೆಸರು, ಫೋಟೋ ಮತ್ತು ಇತ್ತೀಚಿನ ಕಂತಿನ ಸ್ಥಿತಿ (Latest Payment Status) ತಕ್ಷಣ ತೆರೆಯ ಮೇಲೆ ಕಾಣಿಸುತ್ತದೆ.

ಹಣ ಖಾತೆಗೆ ಜಮಾ ಆಗದಿದ್ದರೆ ಈ ಕಾರಣಗಳಿರಬಹುದು (Reasons for Payment Failure)

ನಿಮ್ಮ ಹೆಸರು ಪಟ್ಟಿಯಲ್ಲಿದ್ದರೂ ಹಣ ಬರದಿದ್ದರೆ, ಕೆಳಗಿನ ಅಂಶಗಳನ್ನು ಪರಿಶೀಲಿಸಿ:

  • ಆಧಾರ್ ಸೀಡಿಂಗ್ (Aadhaar Seeding): ನಿಮ್ಮ ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು. ಇದನ್ನು ಬ್ಯಾಂಕ್ ಪಾಸ್ಬುಕ್ ನಲ್ಲಿ ಪ್ರಿಂಟ್ ಮಾಡಿಸಿ ಪರಿಶೀಲಿಸಬಹುದು.
  • ಇ-ಕೆವೈಸಿ (e-KYC) ಸ್ಥಿತಿ: PM KISAN ಪೋರ್ಟಲ್ನಲ್ಲಿ ನಿಮ್ಮ ಇ-ಕೆವೈಸಿ ಪೆಂಡಿಂಗ್ ಇದ್ದರೆ, ಹಣ ಬಿಡುಗಡೆಯಾಗುವುದಿಲ್ಲ. ಇದನ್ನು CSC (Common Service Centre) ಅಥವಾ ನಿಮ್ಮ ಮೊಬೈಲ್ ಮೂಲಕ ಪೂರ್ಣಗೊಳಿಸಿ.
  • ಹೆಸರು ಹೊಂದಾಣಿಕೆ: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಮತ್ತು PM KISAN ನಲ್ಲಿ ನೋಂದಾಯಿಸಿರುವ ಹೆಸರು ಒಂದೇ ಆಗಿರಬೇಕು. (ಉದಾ: ರಾಮಪ್ಪ – ರಾಮಪ್ಪ ಎಂದೇ ಇರಬೇಕು, ರಾಮಯ್ಯ ಅಲ್ಲ)
  • ಜಮೀನು ದಾಖಲೆ: ನಿಮ್ಮ ಹೆಸರಿನಲ್ಲಿ ಕೃಷಿ ಭೂಮಿ ಇದೆಯೇ ಎಂಬುದು ರಾಜಸ್ವ ಇಲಾಖೆಯ ದಾಖಲೆಗಳಲ್ಲಿ (RTC) ನವೀಕೃತವಾಗಿರಬೇಕು.

ಪಿಎಂ ಕಿಸಾನ್ 22ನೇ ಕಂತು ₹2000 ಹಣ ಪಡೆಯಲು ತಕ್ಷಣ ಮಾಡಬೇಕಾದ ಕೆಲಸಗಳು | PM Kisan 22nd Installment Date 2026

ನಿಮ್ಮ ಖಾತೆಗೆ ಹಣ ಜಮೆಯಾಗುವ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆ ಆಗಬಾರದು ಅಂದರೆ, ಈ ಕೆಳಗಿನ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ.

1.ತಕ್ಷಣವೇ ಇ-ಕೆವೈಸಿ (eKYC) ಪೂರ್ಣಗೊಳಿಸಿ

    PM Kisan ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ನೀವು ಈವರೆಗೆ ಇ-ಕೆವೈಸಿ ಮಾಡಿಲ್ಲದಿದ್ದರೆ, ನಿಮ್ಮ ಹೆಸರನ್ನು 22ನೇ ಕಂತಿನ ಪಾವತಿ ಪಟ್ಟಿಯಿಂದ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುವುದು.

    ಆನ್ಲೈನ್ ವಿಧಾನ: ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಬಹುದು.

    ಆಫ್‌ಲೈನ್ ವಿಧಾನ: ನಿಮಗೆ ಆನ್‌ಲೈನ್ ಪ್ರಕ್ರಿಯೆ ಕಷ್ಟವೆನಿಸಿದರೆ, ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಸಣ್ಣ ಶುಲ್ಕ ನೀಡಿ ನಿಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

    2.ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ (Aadhaar Seeding)

    ಸರ್ಕಾರದಿಂದ ಬರುವ ಎಲ್ಲಾ ಹಣವೂ (DBT) ಮೂಲಕ ಬರುತ್ತೆ ನಿಮ್ಮ ಬ್ಯಾಂಕ್ ಖಾತೆಯನ್ನು ತಲುಪಬೇಕಾದರೆ, ಅದು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಲೇಬೇಕು. ನೀವು PM Kisan ಯೋಜನೆಗೆ ಅರ್ಜಿ ಸಲ್ಲಿಸಿದಾಗ ನೀಡಿದ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಆಧಾರ್ ಸೀಡಿಂಗ್ (Aadhaar Seeding) ಲಿಂಕ್ ಆಗಿಲ್ಲ ಎಂದರೆ

    ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಆಧಾರ್ ಸೀಡಿಂಗ್ ಫಾರ್ಮ್ ಭರ್ತಿ ಮಾಡಿ. ಕೆಲವು ಬ್ಯಾಂಕ್‌ಗಳ ಮೊಬೈಲ್ ಆ್ಯಪ್ ಮೂಲಕವೂ ಇದನ್ನು ಮಾಡಬಹುದು.

    3. ಭೂಮಿ ದಾಖಲೆಗಳು (RTC/ಪಹಣಿ) ನವೀಕೃತವಾಗಿವೆಯೇ?

    PM Kisan ಯೋಜನೆಯು ಭೂಮಿ ಹೊಂದಿರುವ ರೈತರಿಗೆ ಮಾತ್ರ ಅನ್ವಯಿಸುತ್ತದೆ. ತಂದೆಯಿಂದ ಮಗನಿಗೆ ಭೂಮಿ ವರ್ಗಾವಣೆ ಆದಾಗ, ಭೂಮಿ ಖರೀದಿ ಅಥವಾ ಮಾರಾಟ ಮಾಡಿದಾಗ ಅಥವಾ ಹಂಚಿಕೆ ಮಾಡಿದಾಗ ದಾಖಲೆಗಳನ್ನು ತಾಲೂಕು ಕಚೇರಿಯಲ್ಲಿ ಕೂಡಲೇ ನವೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ, ನೀವು ಭೂಮಾಲೀಕರಾಗಿದ್ದರೂ ಸಹ PM Kisan ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಬರುವುದಿಲ್ಲ.

    4.ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ?

    ನಿಮ್ಮ PM Kisan ಪ್ರೊಫೈಲ್‌ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಯು ನಿಮ್ಮ ಬಳಕೆಯಲ್ಲಿರುವ ಸಕ್ರಿಯ ಸಂಖ್ಯೆಯಾಗಿರಬೇಕು. ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಅದನ್ನು PM Kisan ಪೋರ್ಟಲ್ ಮೂಲಕ ಅಥವಾ CSC ಕೇಂದ್ರದ ಮೂಲಕ ಅಪ್ಡೇಟ್ ಮಾಡಿಸಿ.

    ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ | PM Kisan 22th Installment date

    • PM KISAN ಹಣ(PM KISAN money) ಪಡೆಯಲು ಯಾವುದೇ ಶುಲ್ಕವಿಲ್ಲ.
    • ಯಾವುದೇ ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ ಅಥವಾ ಯಾವುದೇ OTP ಹಂಚಿಕೊಳ್ಳಬೇಡಿ.
    • ಯಾವುದೇ ಸಮಸ್ಯೆಗೆ ಅಧಿಕೃತ ಹೆಲ್ಪ್ಲೈನ್ 1800-180-1551 ಅಥವಾ ತಮ್ಮ ಗ್ರಾಮದ ಕಂದಾಯ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಿ.

    ಕರ್ನಾಟಕದಲ್ಲಿ ಪಿಎಂ ಕಿಸಾನ್ ಯೋಜನೆಯ ಪ್ರಗತಿ | pm kisan 22th installment release date 2026

    ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಗುರುತಿಸಲ್ಪಟ್ಟಿರುವ ಒಟ್ಟು ರೈತರ ಪೈಕಿ ಶೇಕಡಾ 90ಕ್ಕೂ ಹೆಚ್ಚು ಮಂದಿ ಪಿಎಂ ಕಿಸಾನ್ ಯೋಜನೆಯ ವ್ಯಾಪ್ತಿಗೆ ಬಂದಿದ್ದಾರೆ. ಬೆಳಗಾವಿ, ಮೈಸೂರು, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿದ್ದಾರೆ.

    ರಾಜ್ಯದಲ್ಲಿ ಈವರೆಗೆ 21 ಕಂತುಗಳ ಮೂಲಕ ಸುಮಾರು 15,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. 22ನೇ ಕಂತು ಈ ಮೊತ್ತಕ್ಕೆ ಮತ್ತಷ್ಟು ಸೇರ್ಪಡೆಯಾಗಲಿದೆ.

    Conclusion – PM Kisan 22th Installment

    ಕೇಂದ್ರ ಸರ್ಕಾರದ ಅಧಿಕೃತ ಘೋಷಣೆಯೊಂದಿಗೆ, ಪಿಎಂ ಕಿಸಾನ್ 22ನೇ ಕಂತಿನ ಅನುಮಾನಗಳಿಗೆ ತೆರೆ ಬಿದ್ದಿದೆ. ಮಾರ್ಚ್ 13, 2026 ರಂದು ನಿಮ್ಮ ಖಾತೆಯಲ್ಲಿ 2000 ರೂ. ಜಮಾ ಆಗಬೇಕಾದರೆ, ಇಂದಿನಿಂದಲೇ ನಿಮ್ಮ ದಾಖಲಾತಿಗಳನ್ನು (Documents) ಪರಿಶೀಲಿಸಿಕೊಳ್ಳಿ. ಹಳೆಯ ದಾಖಲೆಗಳಲ್ಲಿ ತಪ್ಪಿದ್ದರೆ ತಕ್ಷಣ ಸರಿಪಡಿಸಿ, ಇ-ಕೆವೈಸಿ ಮಾಡಿಸಿ.

    ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ನೆರೆಯ ರೈತರಿಗೆ ಈ ಮಾಹಿತಿಯನ್ನು ತಲುಪಿಸಿ. ಅವರೂ ಸಹ ತಮ್ಮ ಹೆಸರು ಪರಿಶೀಲಿಸಿಕೊಳ್ಳಲಿ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (Raita Samparka Kendra) ಅಥವಾ ಗ್ರಾಮ ಒನ್ (Gram One) ಸೇವಾ ಕೇಂದ್ರಕ್ಕೆ ಭೇಟಿ ನೀಡಿ.

    Back To Home Page: Click here

    FAQ- PM Kisan 22nd Installment Release Date Fix

    PM Kisan 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ?

    PM Kisan ಯೋಜನೆಯ 22ನೇ ಕಂತಿನ ₹2000 ಹಣವನ್ನು ಮಾರ್ಚ್ 13, 2026 ರಂದು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ನಿರೀಕ್ಷೆಯಿದೆ.

    PM Kisan 22ನೇ ಕಂತಿನ ಹಣ ಎಷ್ಟು ಸಿಗುತ್ತದೆ?

    PM Kisan ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ಕಂತಿನಲ್ಲಿ ₹2000 ಹಣ DBT (Direct Benefit Transfer) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

    PM Kisan ಹಣ ಖಾತೆಗೆ ಬರದಿದ್ದರೆ ಏನು ಮಾಡಬೇಕು?

    ಹಣ ಖಾತೆಗೆ ಬರದಿದ್ದರೆ ಈ ವಿಷಯಗಳನ್ನು ಪರಿಶೀಲಿಸಬೇಕು:
    e-KYC ಪೂರ್ಣಗೊಂಡಿದೆಯೇ
    ಬ್ಯಾಂಕ್ ಖಾತೆ Aadhaar ಗೆ ಲಿಂಕ್ ಆಗಿದೆಯೇ
    PM Kisan ನಲ್ಲಿ ಹೆಸರು ಸರಿಯಾಗಿದೆಯೇ
    ಭೂಮಿ ದಾಖಲೆಗಳು (RTC) ನವೀಕರಿಸಲ್ಪಟ್ಟಿದೆಯೇ

    PM Kisan ಯೋಜನೆಗೆ e-KYC ಕಡ್ಡಾಯವೇ?

    ಹೌದು. PM Kisan ಯೋಜನೆಯಡಿ ಹಣ ಪಡೆಯಲು e-KYC ಕಡ್ಡಾಯವಾಗಿದೆ. e-KYC ಮಾಡದಿದ್ದರೆ ಮುಂದಿನ ಕಂತಿನ ಹಣ ಸಿಗುವುದಿಲ್ಲ.

    Leave a Comment