PM Kisan 22nd instalment today:ಕರ್ನಾಟಕ ಸೇರಿದಂತೆ ದೇಶದ ಕೋಟ್ಯಾಂತರ ರೈತರು ಕಾತುರದಿಂದ ಎದುರು ನೋಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ(PM-Kisan 22nd instalment release today)ಯ 22ನೇ ಕಂತಿನ ಹಣ ಬಿಡುಗಡೆಗೆ ಕ್ಷಣಗಣನೆ(PM Kisan 22nd instalment today) ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ಸಂಜೆ 5 ಗಂಟೆಗೆ ಈ ಹಣವನ್ನು ವರ್ಗಾವಣೆ ಮಾಡಲಿದ್ದು, ದೇಶದ 9.32 ಕೋಟಿ ಅರ್ಹ ರೈತರ ಬ್ಯಾಂಕ್ ಖಾತೆಗೆ ತಲಾ ₹2,000 ನೇರವಾಗಿ ಜಮಾ ಆಗಲಿದೆ.
ನೀವು ಪಿಎಂ ಕಿಸನ್ 22ನೇ ಕಂತಿನ ಹಣ(PM Kisan 22nd instalment money)ಕ್ಕೆ ಕಾಯುತ್ತಿದ್ದಾರೆ ನೀವು ಪಿಎಂ ಕಿಸಾನ್ ಯೋಜನೆ ಫಲಾನುಭವಿ(PM Kisan Yojana beneficiary)ಗಳಾಗಿದ್ದರೆ. ಈ ಬಾರಿಯೂ ಸಹ ನಿಮ್ಮ ಖಾತೆಗಳಿಗೆ ನೇರವಾಗಿ ₹2,000 ಜಮಾ ಆಗಬೇಕಾದರೆ, ನೀವು PM Kisan Beneficiary List ನಲ್ಲಿ ಹೆಸರು ಇರುವುದು ತುಂಬಾ ಮುಖ್ಯ.
ಯಾಕಂದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ ಮಾತ್ರ 22ನೇ ಕಂತಿನ ಹಣ ಮತ್ತು ಮುಂದಿನ ಕಂತುಗಳ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದರೆ ನಿಮ್ಮ ಖಾತೆಗೆ 22ನೇ ಹಣ ಬರುವುದಿಲ್ಲ ಹಾಗೂ ದಾಖಲೆಗಳಲ್ಲಿನ ಲೋಪದಿಂದಾಗಿ ರೈತರ ಹೆಸರು ಪಟ್ಟಿಯಿಂದ ಕೈ ಬಿಟ್ಟಿರಲಾಗಿರುತ್ತದೆ.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ, ಇಲ್ವಾ ಹೇಗೆ ಚೆಕ್ ಮಾಡುವುದು? ನಿಮ್ಮ ಖಾತೆಗೆ ಹಣ ಬಂದಿದೆಯೇ? ಪಿಎಂ ಕಿಸಾನ್ 22ನೇ ಕಂತಿನ ಸ್ಥಿತಿ ಏನು? ಹೇಗೆ ಪರಿಶೀಲಿಸಬೇಕು? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
Table of Contents
ಪಿಎಂ ಕಿಸಾನ್ ಯೋಜನೆ ಎಂದರೇನು? PM Kisan 22nd instalment today

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯು ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಮತ್ತು ಕ್ರಾಂತಿಕಾರಿ ಯೋಜನೆಯಾಗಿದೆ. ಈ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖಪುರ ದಲ್ಲಿ ಉದ್ಘಾಟಿಸಿದರು. ಈ ಯೋಜನೆಯ ಮೂಲ ಉದ್ದೇಶ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವುದು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವುದಾಗಿದೆ.
ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ದೇಶದ ಒಟ್ಟು ಜನಸಂಖ್ಯೆಯ ಸುಮಾರು 60% ಜನರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಹೆಚ್ಚಿನ ರೈತರು ಸಣ್ಣ ಮತ್ತು ಅತಿ ಸಣ್ಣ ಜಮೀನುಗಳನ್ನು ಹೊಂದಿದ್ದು, ಅವರಿಗೆ ಸಾಕಷ್ಟು ಆದಾಯ ಸಿಗುವುದಿಲ್ಲ. ಬಿತ್ತನೆ ಸಮಯದಲ್ಲಿ ಬೀಜ, ಗೊಬ್ಬರ, ಕೀಟನಾಶಕಗಳನ್ನು ಖರೀದಿಸಲು ಅವರು ಸಾಲ ಮಾಡಬೇಕಾಗುತ್ತದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯು ಕೇಂದ್ರ ಸರ್ಕಾರ(Central Govt)ದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ (ತಲಾ ₹2,000) ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪಿಎಂ ಕಿಸಾನ್ ಯೋಜನೆ 22ನೇ ಕಂತಿನ ವಿಶೇಷತೆ ಏನು? PM Kisan 22nd Installment 2026 Date And Time Live Updates
ಪಿಎಂ ಕಿಸಾನ್ ಯೋಜನೆ 22ನೇ ಕಂತಿನ ಹಣ ಇಂದು ಸಂಜೆ 5 ಗಂಟೆಗೆ ಬಿಡುಗಡೆ: ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಸಂಜೆ 5 ಗಂಟೆಗೆ ಡಿಜಿಟಲ್ ಬಟನ್ ಒತ್ತುವತ ಮೂಲಕ ಪಿಎಂ ಕಿಸಾನ್ 22ನೇ ಕಂತಿನ ಹಣವನ್ನು ಬಿಡುಗಡೆ(PM Kisan 22nd instalment release today) ಮಾಡಲಿದ್ದಾರೆ.
ಈ ಬಾರಿ ಕಂತಿನಲ್ಲಿ ದೇಶದಾದ್ಯಂತ ಒಟ್ಟು 9 ಕೋಟಿ 32 ಲಕ್ಷಕ್ಕೂ ಅಧಿಕ ರೈತರ ಬ್ಯಾಂಕ್ಗಳ ಖಾತೆಗಳಿಗೆ DBT ಮೂಲಕ ₹2,000 ದಂತೆ, ಒಟ್ಟಾರೆ ₹18,640 ಕೋಟಿಗೂ ಅಧಿಕ ಬೃಹತ್ ಮೊತ್ತವನ್ನು ಜಮಾ ಮಾಡಲಾಗುತ್ತಿದೆ.
- ಒಟ್ಟು ಹಣ ವರ್ಗಾವಣೆ: ₹18,000 ಕೋಟಿ
- ಫಲಾನುಭವಿಗಳ ಸಂಖ್ಯೆ: 9.32 ಕೋಟಿ ರೈತರು
- ಪ್ರತಿ ರೈತರಿಗೆ ಸಿಗುವ ಮೊತ್ತ: ₹2,000 DBT ಮೂಲಕ
ಈ ಹಣವು ರೈತರು ಬಿತ್ತನೆ ಸಮಯದಲ್ಲಿ ಬೀಜ, ಗೊಬ್ಬರ, ಕೀಟನಾಶಕಗಳನ್ನು ಖರೀದಿಸಲು ಬಹಳ ಉಪಯೋಗವಾಗಲಿದೆ. ಕರ್ನಾಟಕದ ರೈತರಿಗೆ ಈ ಹಣ ಮುಂಗಾರು ಹಂಗಾಮಿನ ಸಿದ್ಧತೆಗೆ ವರದಾನವಾಗಲಿದೆ.
ಈ ಬಾರಿ 3.8 ಲಕ್ಷ ರೈತರಿಗೆ ಸಿಗಲ್ಲ PM Kisan ಹಣ! PM Modi Release Funds Today
ನಿಮಗೆ ಅಚ್ಚರಿಯಾಗಬಹುದು. ಕಳೆದ ಬಾರಿ 2025ರ ನವೆಂಬರ್ 19ರಂದು ಬಿಡುಗಡೆಗೊಂಡ 21ನೇ ಕಂತಿನ ಪಿಎಂ ಕಿಸಾನ್ ಹಣವನ್ನು ದೇಶದಾದ್ಯಂತ 9,35,79,869 ರೈತರು ಪಡೆದಿದ್ದರು.
ಆದರೆ ಈ ಬಾರಿ ಫಲಾನುಭವಿಗಳ ಸಂಖ್ಯೆ 9.32 ಕೋಟಿಗೆ ಇಳಿಕೆಯಾಗಿದೆ. ಇದರರ್ಥ, ಸುಮಾರು 3.8 ಲಕ್ಷ ರೈತರು ಈ ಬಾರಿ ಕಂತಿನ ಹಣದಿಂದ ವಂಚಿತರಾಗುವ ಸಾಧ್ಯತೆ ಇದೆ.
ಇನ್ನೂ ಗಮನಾರ್ಹ ವಿಷಯ ಏನೆಂದರೆ, 2022ರ ಏಪ್ರಿಲ್–ಜುಲೈ ಅವಧಿಯ 11ನೇ ಕಂತಿನಿಂದ ಹಿಡಿದು ಇಂದಿನವರೆಗೂ ಒಟ್ಟು 1.17 ಕೋಟಿಗೂ ಹೆಚ್ಚು ರೈತರ ಹೆಸರುಗಳು PM Kisan ಫಲಾನುಭವಿಗಳ ಪಟ್ಟಿ(PM Kisan Beneficiary List)ಯಿಂದ ತೆಗೆದುಹಾಕಲಾಗಿದೆ.
ಸಾಮಾನ್ಯವಾಗಿ e-KYC ಮಾಡದೇ ಇರುವುದು, ಭೂ ದಾಖಲೆ (Land Record) ಪರಿಶೀಲನೆ ಸಮಸ್ಯೆ, Aadhaar–Bank ಖಾತೆ ಲಿಂಕ್ ಆಗಿರದೇ ಇರುವುದು ಇತ್ಯಾದಿ ಕಾರಣಗಳಿಂದ ಹಲವಾರು ರೈತರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.
ಪಿಎಂ ಕಿಸಾನ್ 22ನೇ ಕಂತಿನ ಲಿಸ್ಟ್ನಲ್ಲಿ ನಿಮ್ಮ ಹೆಸರನ್ನು ಹೇಗೆ ಪರಿಶೀಲಿಸುವುದು? | How to Check PM Kisan 22nd Instalment Status & Beneficiary List
ನಿಮ್ಮ ಹೆಸರು ಪಿಎಂ ಕಿಸಾನ್ 22ನೇ ಕಂತಿನ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಲು 3 ಸುಲಭ ವಿಧಾನಗಳಿವೆ:
ವಿಧಾನ 1: ಅಧಿಕೃತ ವೆಬ್ಸೈಟ್ pmkisan.gov.in ಮೂಲಕ PM Kisan Beneficiary List ಪರಿಶೀಲನೆ
- ಮೊದಲು ಅಧಿಕೃತ ವೆಬ್ಸೈಟ್ ಗೆ pmkisan.gov.in ಗೆ ಭೇಟಿ ನೀಡಿ.
- ನಂತರ ಹೋಮ್ ಪೇಜ್ನಲ್ಲಿ “Farmers Corner” ಅಡಿಯಲ್ಲಿ “Beneficiary List” ಆಯ್ಕೆ ಮಾಡಿ.
- ನಂತರ ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಆಯ್ಕೆ ಮಾಡಿ.
- ನಂತರ “Get Report” ಅಥವಾ “Submit” ಕ್ಲಿಕ್ ಮಾಡಿ. ನಿಮ್ಮ ಗ್ರಾಮದ ಎಲ್ಲಾ ರೈತರ ಹೆಸರಿನ ಪಟ್ಟಿ ತೆರೆಯುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿ.
ವಿಧಾನ 2: ಆಧಾರ್ ಕಾರ್ಡ್ ಮೂಲಕ PM Kisan Beneficiary Status ಚೆಕ್ ಮಾಡುವ ವಿಧಾನ
- ಮೊದಲು ಹೋಮ್ ಪೇಜ್ನಲ್ಲಿ “Farmers Corner” ಅಡಿಯಲ್ಲಿ “Beneficiary Status” ಆಯ್ಕೆ ಮಾಡಿ.
- ನಂತರ ನಿಮ್ಮ ಆಧಾರ್ ನಂಬರ್, ಖಾತೆ ಸಂಖ್ಯೆ ಅಥವಾ ಮೊಬೈಲ್ ನಂಬರ್ ಹಾಕಿ.
- ನಂತರ ಕ್ಯಾಪ್ಚಾ ಕೋಡ್ ನಮೂದಿಸಿ “Get Data” ಕ್ಲಿಕ್ ಮಾಡಿ.
- ನಿಮ್ಮ ಪಿಎಂ ಕಿಸಾನ್ 22ನೇ ಕಂತಿನ ಸ್ಥಿತಿ(PM Kisan Beneficiary Status) ತೆರೆಯ ಮೇಲೆ ಕಾಣಿಸುತ್ತದೆ. ಹಣ ಜಮಾ ಆಗಿದ್ದರೆ “Second Instalment” ಮತ್ತು ವರ್ಗಾವಣೆ ದಿನಾಂಕ ತೋರಿಸುತ್ತದೆ.
ವಿಧಾನ 3: ಮೊಬೈಲ್ ಆಪ್ ಮೂಲಕ PM Kisan 22ನೇ ಕಂತಿನ ಸ್ಟೇಟಸ್ ಚೆಕ್ ಮಾಡುವ ವಿಧಾನ
ಪಿಎಂ ಕಿಸಾನ್ ಯೋಜನೆಯ ಅಧಿಕೃತ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಆಪ್ ಮೂಲಕವೂ ಪಿಎಂ ಕಿಸಾನ್ 22ನೇ ಕಂತಿನ ಸ್ಥಿತಿ(PM Kisan 22nd installment status) ತಿಳಿದುಕೊಳ್ಳಬಹುದು.
PM Kisan 22ನೇ ಕಂತಿನ ಹಣ ಬರದಿದ್ದರೆ ಕಾರಣವೇನು? | Why PM Kisan 22nd Instalment Not Credited?
ಕೆಲವು ರೈತರಿಗೆ ಪಿಎಂ ಕಿಸಾನ್ 22ನೇ ಕಂತಿನ ಹಣ ಬಂದಿಲ್ಲದಿರಬಹುದು ಇದಕ್ಕೆ ಮುಖ್ಯ ಕಾರಣಗಳು:
- ಇ-ಕೆವೈಸಿ ಬಾಕಿ: ಸರ್ಕಾರವು ಎಲ್ಲಾ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯ(E-KYC mandatory) ಮಾಡಿದೆ. ನಿಮ್ಮ ಇ-ಕೆವೈಸಿ ಆಗಿಲ್ಲದಿದ್ದರೆ 22ನೇ ಕಂತಿನ ಹಣ ಬರುವುದಿಲ್ಲ.
- ಭೂಮಿ ದಾಖಲೆ ಸಮಸ್ಯೆ: ನಿಮ್ಮ ಭೂಮಿಯ ದಾಖಲೆಗಳಲ್ಲಿ ತಪ್ಪು ಇದ್ದರೆ ಅಥವಾ ಅಪ್ಡೇಟ್ ಆಗಿಲ್ಲದಿದ್ದರೆ ಹಣ ಬರುವುದಿಲ್ಲ.
- ಬ್ಯಾಂಕ್ ಖಾತೆ ಸಮಸ್ಯೆ: ನಿಮ್ಮ ಬ್ಯಾಂಕ್ ಖಾತೆ ಆಧಾರ ಕಾರ್ಡ್ ಗೆ ಲಿಂಕ್ ಆಗಿಲ್ಲದಿದ್ದರೆ, ಖಾತೆ ನಿಷ್ಕ್ರಿಯವಾಗಿದ್ದರೆ ಅಥವಾ ಮುಚ್ಚಿದ್ದರೆ ಹಣ ವರ್ಗಾವಣೆ ವಿಫಲವಾಗುತ್ತದೆ(Money transfer failed).
- ಅನರ್ಹ ವರ್ಗ: ನೀವು ಸರ್ಕಾರಿ ನೌಕರರಾಗಿದ್ದರೆ, ಐಟಿ ರಿಟರ್ನ್ ಸಲ್ಲಿಸುವವರಾಗಿದ್ದರೆ ಅಥವಾ ಇತರ ಅನರ್ಹ ವರ್ಗಕ್ಕೆ ಸೇರಿದ್ದರೆ ಈ ಯೋಜನೆಗೆ ಅರ್ಹರಲ್ಲ.
ಪಿಎಂ ಕಿಸಾನ್ 22ನೇ ಕಂತು: ಯಾವಾಗ, ಯಾರಿಗೆ ಸಿಗಲಿದೆ? | PM Kisan 22nd Instalment Release Date & Eligibility
ಬಿಡುಗಡೆಯಾದ ತಕ್ಷಣವೇ, ಅರ್ಹ ರೈತರ ಪಟ್ಟಿಯಲ್ಲಿರುವ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ. ನೀವು ಈ ಹಿಂದೆ ಯೋಜನೆಯ ಪ್ರಯೋಜನ ಪಡೆದಿದ್ದರೆ ಮತ್ತು ನಿಮ್ಮ ದಾಖಲಾತಿ (e-KYC) ಪೂರ್ಣಗೊಂಡಿದ್ದರೆ, ನಿಮ್ಮ ಖಾತೆಗೆ ಸ್ವಯಂಚಾಲಿತವಾಗಿ ಹಣ ಜಮಾ ಆಗುತ್ತದೆ. ಆದರೆ, ಕೆಲವು ಕಾರಣಗಳಿಂದಾಗಿ ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಿಂದ (Beneficiary List) ತೆರವುಗೊಂಡಿದ್ದರೆ, ನೀವು ಈ ಕಂತನ್ನು ಪಡೆಯಲು ಸಾಧ್ಯವಾಗುವುದಿಲ್ಲ.
Conclusion
ಪಿಎಂ ಕಿಸಾನ್ 22ನೇ ಕಂತಿನ ಹಣ ಇಂದು ಸಂಜೆ 5 ಗಂಟೆಯಿಂದ ರೈತರ ಖಾತೆಗೆ ಜಮಾ ಆಗಲಿದೆ. 9.32 ಕೋಟಿ ರೈತರಿಗೆ ಈ ಮೊತ್ತ ತಲುಪುವ ಮೂಲಕ ಸರ್ಕಾರವು ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದೆ ಎಂಬುದು ಸ್ಪಷ್ಟವಾಗಿದೆ.
ಕರ್ನಾಟಕದ ರೈತರು ತಮ್ಮ ಪಿಎಂ ಕಿಸಾನ್ 22ನೇ ಕಂತಿನ ಸ್ಥಿತಿ ಯನ್ನು ಅಧಿಕೃತ ವೆಬ್ಸೈಟ್ pmkisan.gov.in ಮೂಲಕ ಪರಿಶೀಲಿಸಬಹುದು. ಹಣ ಬರದಿದ್ದರೆ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸರಿಯಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಿ.
Back To Home Page: Click here
FAQ – PM Kisan 22nd Installment 2026 Date And Time Live Updates: PM Modi Release Funds Today: Re-KYC Removes Millions Of Beneficiaries
PM Kisan 22ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ?
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಇಂದು ಸಂಜೆ ಸುಮಾರು 5 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಅರ್ಹ ರೈತರ ಬ್ಯಾಂಕ್ ಖಾತೆಗೆ ₹2,000 DBT ಮೂಲಕ ನೇರವಾಗಿ ಜಮಾ ಆಗಲಿದೆ.
PM Kisan 22ನೇ ಕಂತಿನ ಹಣ ಎಷ್ಟು ಸಿಗುತ್ತದೆ?
ಈ ಯೋಜನೆಯಡಿ ಪ್ರತಿ ರೈತರಿಗೆ ಪ್ರತಿ ಕಂತಿನಲ್ಲಿ ₹2,000 ಹಣ ಸಿಗುತ್ತದೆ. ವರ್ಷಕ್ಕೆ ಒಟ್ಟು ₹6,000 ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.