LPG Gas Subsidy Karnataka 2026: ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್(Good news) ರೇಷನ್ ಕಾರ್ಡ್(Ration card) ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರ(Central Govt)ದಿಂದ ಉಚಿತ ಸ್ಟವ್(Free stove) ಮತ್ತು ಉಚಿತ ಗ್ಯಾಸ್ ಸಿಲಿಂಡರ್(Free gas cylinder) ಸಿಗುತ್ತಿದೆ. ಉಚಿತ ಸ್ಟವ್ ಮತ್ತು ಉಚಿತ ಗ್ಯಾಸ್ ಸಿಲಿಂಡರ್(Free stove and free gas cylinder) ಪಡೆದುಕೊಳ್ಳುವುದು ಹೇಗೆ, ಉಚಿತ ಗ್ಯಾಸ್ ಸಿಲಿಂಡರ್(free gas cylinder) ಯಾರಿಗೆ ಸಿಗುತ್ತೆ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ನಾವು ಏನು ಮಾಡಬೇಕು, ಉಚಿತ ಸ್ಟವ್ ಮತ್ತು ಉಚಿತ ಗ್ಯಾಸ್ ಸಿಲಿಂಡರ್ ಗೆ ಅರ್ಜಿ(free stove and free gas cylinder appliction) ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ
ನೀವು ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಒಂದು ಸ್ಟವ್ ಓಲೆಯನ್ನು ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು. ಇನ್ನೂ ಮುಂದೆ ನೀವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಕೂಡ ಅತಿ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ ₹650 ರೂಗೆ ನೀವು ತುಂಬಿಸಿಕೊಳ್ಳಬಹುದು. ಅದ್ದರಿಂದ ನೀವು ಈ ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮತ್ತು ಪ್ರತಿ ತಿಂಗಳು ಅತೀ ಕಡಿಮೆ ಬೆಲೆಗೆ ಗ್ಯಾಸ್ ಖರೀದಿಸಲು ಈ ಯೋಜನೆಯ ಬಗ್ಗೆ ತಿಳಿದುಕೊಂಡು ಈ ಯೋಜನೆಯ ಲಾಭವನ್ನು ಪಡೆಯಬಹುದು.
ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸಬ್ಸಿಡಿ | LPG Subsidy Karnataka 2026

ನಮ್ಮೆಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಯೊಂದು ಕುಟುಂಬದಲ್ಲೂ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ಹಿಂದೆ ಬಳಕೆ ಮಾಡುತ್ತಿದ್ದ ಸೌದೆಗಳು ಈಗ ಸುಲಭವಾಗಿ ಲಭ್ಯವಾಗುವುದಿಲ್ಲ. ಇದಲ್ಲದೆ, ಸೌದೆಗಳಿಂದ ಅಡುಗೆ ಮಾಡುವುದರಿಂದ ಹೊಗೆ ಹೆಚ್ಚಾಗಿ ಉಂಟಾಗಿ, ಮಹಿಳೆಯರ ಆರೋಗ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅದರಿಂದ ಪ್ರತಿಯೊಂದು ಕುಟುಂಬದ ಮಹಿಳೆಯರೂ ಗ್ಯಾಸ್ ಸಿಲಿಂಡರ್ ಬಳಸಿಕೊಂಡು ಅಡುಗೆ ಮಾಡಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿರುವುದರಿಂದ, ಕೆಲವು ಬಡ ಕುಟುಂಬಗಳಿಗೆ ಅದನ್ನು ಖರೀದಿಸುವುದು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯನ್ನು ಗಮನಿಸಿದ ಸರ್ಕಾರವು, ಬಡ ಹಾಗೂ ಹಿಂದುಳಿದ ಕುಟುಂಬಗಳಿಗೂ ಸುಲಭವಾಗಿ ಗ್ಯಾಸ್ ಸೌಲಭ್ಯ ತಲುಪುವಂತೆ ಮಾಡುವ ಉದ್ದೇಶದಿಂದ ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಬಹುದು.
ನಿಮಗೆ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇದ್ದು, ಈವರೆಗೆ ಯಾವುದೇ ಗ್ಯಾಸ್ ಸಿಲಿಂಡರ್ ಯೋಜನೆಯ ಲಾಭ ಪಡೆಯದಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ, ನಿಮ್ಮ ಸಂಬಂಧಿಕರು ಅಥವಾ ಪರಿಚಿತರಿಗೂ ಈ ಸೌಲಭ್ಯ ಅಗತ್ಯವಿದ್ದರೆ, ಈ ಮಾಹಿತಿಯನ್ನು ಅವರಿಗೆ ಹಂಚಿಕೊಳ್ಳಿ. ಇದರಿಂದ ಅವರು ಕೂಡ ಸರ್ಕಾರದ ಈ ಯೋಜನೆಯ ಬಗ್ಗೆ ತಿಳಿದುಕೊಂಡು, ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
Table of Contents
ಉಚಿತ ಗ್ಯಾಸ್ ಸಿಲಿಂಡರ್ | LPG Gas Subsidy Karnataka 2026
ಸರ್ಕಾರ ನೀಡುವತ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ನೀವು ಅರ್ಜಿ ಹಾಕಿ, ನೊಂದಣಿ ಮಾಡಿಕೊಳ್ಳಬೇಕು. ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಬಹುದಲ್ಲದೆ
ಈ ಯೋಜನೆಯ ಮೂಲಕ ನೀವು ಪ್ರತಿಬಾರಿಯು ಅತೀ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ತುಂಬಿಸಬಹುದು ಹಾಗೂ ಈ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ತುಂಬಿಸಿದ್ದಾಗ ಸಬ್ಸಿಡಿ ಹಣ(Subsidy money)ವನ್ನು ಕೂಡ ಸಹ ನೀವು ಪಡೆದುಕೊಳ್ಳಬಹುದು. ಅದ್ದರಿಂದ ಇಷ್ಟೆಲ್ಲಾ ಲಾಭವನ್ನು ಪಡೆದುಕೊಳ್ಳಲು ತಪ್ಪದೆ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ2.0ಗೆ ಅರ್ಜಿಯನ್ನು ಸಲ್ಲಿಸಿ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (PMUY 2.0) 2026: ಉಚಿತ ಗ್ಯಾಸ್ ಸಿಲಿಂಡರ್ | Pradhan Mantri Ujjwala Yojana 2.0 2026 LPG Subsidy
ಪ್ರಧಾನ ಮಂತ್ರಿ ಉಜ್ವಲ ಯೋಜನ 2.0 ಅನ್ನು 2016ರಲ್ಲಿ ಕೇಂದ್ರ ಸರ್ಕಾರವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದಿತು. ಈ ಯೋಜನೆಯ ಮುಖ್ಯ ಉದ್ದೇಶ ದೇಶದ ಬಡ ಕುಟುಂಬಗಳಿಗೆ ಅಡುಗೆ ಗ್ಯಾಸ್ ಸೌಲಭ್ಯವನ್ನು ಸುಲಭವಾಗಿ ಒದಗಿಸುವುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಮಹಿಳೆಯರು ಕಟ್ಟಿಗೆ ಒಲೆಗಳನ್ನು ಬಳಸಿಕೊಂಡು ಅಡುಗೆ ಮಾಡುವುದರಿಂದ ಉಂಟಾಗುವ ಹೊಗೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಬಡ ಕುಟುಂಬಗಳ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಯಲು ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಈಗಾಗಲೇ ಕೋಟ್ಯಾಂತರ ಕುಟುಂಬಗಳು ಲಾಭ ಪಡೆದುಕೊಂಡಿದ್ದು, ಲಕ್ಷಾಂತರ ಮಹಿಳೆಯರು ಸುರಕ್ಷಿತ ಹಾಗೂ ಆರೋಗ್ಯಕರ ಅಡುಗೆ ವಿಧಾನಕ್ಕೆ ಬದಲಾಗಿದ್ದಾರೆ. ಜೊತೆಗೆ, ಗ್ಯಾಸ್ ಸಿಲಿಂಡರ್ ರಿಫಿಲ್ ಮಾಡಿದಾಗ ಸಬ್ಸಿಡಿ ಹಣವನ್ನು ಕೂಡ ಸರ್ಕಾರದಿಂದ ಪಡೆಯುವ ಸೌಲಭ್ಯವನ್ನು ಈ ಯೋಜನೆ ಒದಗಿಸುತ್ತದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ಇಲ್ಲಿಯವರೆಗೆ ಸುಮಾರು 10 ಮಿಲಿಯನ್ ಅಷ್ಟು ಜನರು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಪಡೆದುಕೊಂಡಿದ್ದಾರೆ ಮತ್ತು ಗ್ಯಾಸ್ ಸಬ್ಸಿಡಿ ಹಣವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ.
ಉಜ್ವಲ ಯೋಜನೆಗೆ ಅರ್ಜಿ ಹಾಕಲು ಅರ್ಹತೆಗಳು (Eligibility for Pradhan Mantri Ujjwala Yojana)
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಪಡೆಯಲು ಕೇಂದ್ರ ಸರ್ಕಾರವು ಕೆಲವು ಮುಖ್ಯ ಅರ್ಹತೆಗಳನ್ನು ನಿಗದಿಪಡಿಸಿದೆ. ಈ ಅರ್ಹತೆಗಳನ್ನು ಪೂರೈಸುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಹಾಕಲು ಅವಕಾಶವಿದೆ.
- ಅರ್ಜಿ ಹಾಕುವ ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು.
- ಕುಟುಂಬದಲ್ಲಿ ಬೇರೆ ಯಾವುದೇ ಎಲ್ಪಿಜಿ ಸಂಪರ್ಕ ಇರಬಾರದು.
- ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯವಾಗಿರಬೇಕು.
- ಗುಡ್ಡ, ಕಾಡು ಪ್ರದೇಶಗಳು ಹಾಗೂ ದ್ವೀಪಗಳಲ್ಲಿ ವಾಸಿಸುವ ಕುಟುಂಬಗಳ ಮಹಿಳೆಯರು ಕೂಡ ಅರ್ಜಿ ಹಾಕಬಹುದು.
- SC/ST, OBC ಹಾಗೂ ಅಲ್ಪಸಂಖ್ಯಾತರು, ಒಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸೇರಿದವರು ಅರ್ಹರು.
ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು | Pradhan Mantri Ujjwala Yojana Documents Required (Full Guide)
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಮುಖ್ಯ ದಾಖಲೆಗಳು ಅಗತ್ಯವಿರುತ್ತವೆ:
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್: ನೋಂದಣಿ ಪ್ರಕ್ರಿಯೆಗೆ ಸಕ್ರಿಯ ಮೊಬೈಲ್ ಸಂಖ್ಯೆ ಕಡ್ಡಾಯ. OTP ಪರಿಶೀಲನೆಗಾಗಿ ಇದು ಬಳಸಲಾಗುತ್ತದೆ.
- ಆಧಾರ್ ಕಾರ್ಡ್: ಅರ್ಜಿ ಹಾಕುವ ಮಹಿಳೆಯ ಆಧಾರ್ ಸಂಖ್ಯೆ ಬೇಕಾಗುತ್ತದೆ. ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
- ರೇಷನ್ ಕಾರ್ಡ್: ಬಡತನ ರೇಖೆ (BPL) ಅಥವಾ ಅರ್ಹ ಕುಟುಂಬ ಎಂದು ದೃಢೀಕರಿಸಲು ರೇಷನ್ ಕಾರ್ಡ್ ಅಗತ್ಯ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ:ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಯೋಜನೆ ಸೌಲಭ್ಯ ಸಿಗುವುದರಿಂದ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು.
- ಬ್ಯಾಂಕ್ ಪಾಸ್‌ಬುಕ್ / ಬ್ಯಾಂಕ್ ಖಾತೆ ವಿವರಗಳು:ಗ್ಯಾಸ್ ಸಿಲಿಂಡರ್ ರಿಫಿಲ್ ಮಾಡಿದಾಗ ಸರ್ಕಾರ ನೀಡುವ ಸಬ್ಸಿಡಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ಅರ್ಜಿದಾರರ ಬ್ಯಾಂಕ್ ವಿವರಗಳು ಕಡ್ಡಾಯ.
ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿದರೆ, ಯೋಜನೆಯ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಹೇಗೆ ಅರ್ಜಿ ಹಾಕುವುದು? (How to Apply for Pradhan Mantri Ujjwala Yojana 2.0 2026)
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಮಹಿಳೆಯರಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಲು ಬಯಸುವತ ಮಹಿಳೆಯರು ಈ ಮೇಲೆ ತಿಳಿಸಲಾದ ಅರ್ಹತೆಗಳನ್ನು ಹಾಗೂ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
ಈ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲೆಗಳನ್ನು ನೀವು ಬಂದಿದ್ದರೆ, ಈ ಕೆಳಗೆ ನೀಡಿದ ಉಜ್ವಲ ಯೋಜನೆಗೆ ಅರ್ಜಿ ಹಾಕುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.
ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.
- ಮೊದಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ವೆಬ್‌ಸೈಟ್‌ನಲ್ಲಿ “Apply Now” ಅಥವಾ “New Registration” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ) ಸರಿಯಾಗಿ ಭರ್ತಿ ಮಾಡಿ.
- ಕೇಳಲಾಗುವ ದಾಖಲೆಗಳು (ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ವಿವರಗಳು ಮುಂತಾದವು) ಅಪ್ಲೋಡ್ ಮಾಡಿ.
- ಅಲ್ಲಿ ನಿಮಗೆ ಬೇಕಾಗುವ ಏಜೆನ್ಸಿಯ ಆಯ್ಕೆ ಮಾಡಿಕೊಂಡು, ಎಲ್ಲಾ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ.
- ನಂತರ “Submit” ಅಥವಾ “Apply” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಯಶಸ್ವಿಯಾಗಿ ಸಲ್ಲಿಸಿದ ನಂತರ, ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮಗೆ ಗ್ಯಾಸ್ ಕನೆಕ್ಷನ್ ಮಂಜೂರು ಮಾಡಲಾಗುತ್ತದೆ. ಇದರ ಮೂಲಕ ನೀವು ಉಚಿತ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಸಬ್ಸಿಡಿ ಸೌಲಭ್ಯಗಳನ್ನು ಪಡೆಯಬಹುದು.
ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ತಿಳಿಯುತ್ತಿಲ್ಲ ಅಂದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
₹650ಕ್ಕೆ LPG ಗ್ಯಾಸ್ ಸಿಲಿಂಡರ್ ಹೇಗೆ ಪಡೆಯುವುದು? LPG gas cylinder Subsidy Karnataka 2026 & ₹300 Subsidy
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನೀವು ₹650 ಗೆ ನೀವು ಪ್ರತಿ ತಿಂಗಳು ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder Subsidy Karnataka 2026)ಪಡೆಯಬಹುದು ಹೇಗೆ ಎಂದು ನಾವು ಈ ಕೆಳಗೆ ತಿಳಿಸಿದ್ದೇವೆ.
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗೆ ಅರ್ಜಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರ ಕಡೆಯಿಂದ ನಿಮಗೆ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿಗೆ ಅಥವಾ ನಿರ್ದಿಷ್ಟ ಗ್ಯಾಸ್ ಸಿಲೆಂಡರ್ ಖರೀದಿಗೆ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ.300 ಸಬ್ಸಿಡಿಯ ಹಣವನ್ನು ನೀಡಲಾಗುತ್ತದೆ ಇದರಿಂದ ನೀವು ಕೇವಲ 650 ರೂಪಾಯಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್(LPG gas cylinder) ಪಡೆಯಬಹುದು.
ಪ್ರಸ್ತುತ ದಿನದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ₹950 ಆಗಿದೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ನಿಮಗೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿ ಮೇಲೆ ₹300 ಸಬ್ಸಿಡಿ ನೀಡಲಾಗುತ್ತದೆ
ಪ್ರಸ್ತುತ ದಿನದಲ್ಲಿ ₹950 ಒಂದು ಗ್ಯಾಸ್ ಸಿಲಿಂಡರ್ ಬೆಲೆ ಆಗಿದೆ ಇದರಲ್ಲಿ ಕೇಂದ್ರ ಸರಕಾರ ನೀಡುವ ₹300 ಹಣ ತೆಗೆದರೆ ನಿಮಗೆ ಕೇವಲ 650 ಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸಿಗುತ್ತೆ.
Conclusion – LPG gas cylinder Subsidy Karnataka 2026
Pradhan Mantri Ujjwala Yojana ಯೋಜನೆ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಬಹಳ ಉಪಯುಕ್ತವಾಗಿದೆ. ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಸೌಲಭ್ಯದಿಂದ ಸುರಕ್ಷಿತ ಹಾಗೂ ಆರೋಗ್ಯಕರ ಅಡುಗೆ ಸಾಧ್ಯವಾಗುತ್ತದೆ.
ಅದರ ಜೊತೆಗೆ ₹300 ಸಬ್ಸಿಡಿಯಿಂದ LPG ಸಿಲಿಂಡರ್ ಅನ್ನು ಕಡಿಮೆ ಬೆಲೆಗೆ ಪಡೆಯುವ ಅವಕಾಶ ಕೂಡ ಲಭ್ಯವಿದೆ. ಆದರೆ, ಈ ಸೌಲಭ್ಯ ಪಡೆಯಲು ಸರ್ಕಾರ ನಿಗದಿಪಡಿಸಿದ ಅರ್ಹತೆಗಳನ್ನು ಪೂರೈಸಬೇಕು ಮತ್ತು ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು.
ಹೀಗಾಗಿ, ನೀವು ಅರ್ಹರಾಗಿದ್ದರೆ ತಡಮಾಡದೇ ಅರ್ಜಿ ಹಾಕಿ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ. ನಿಮ್ಮ ಪರಿಚಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ
Back To Home Page: Click here
FAQ – LPG Gas Subsidy Karnataka 2026
ಉಚಿತ ಗ್ಯಾಸ್ ಸಿಲಿಂಡರ್ ಯಾರಿಗೆ ಸಿಗುತ್ತದೆ?
Pradhan Mantri Ujjwala Yojana ಯೋಜನೆಯಡಿ BPL / ಬಡ ಕುಟುಂಬಗಳ ಮಹಿಳೆಯರಿಗೆ ಮಾತ್ರ ಉಚಿತ ಗ್ಯಾಸ್ ಕನೆಕ್ಷನ್ ಸಿಗುತ್ತದೆ.
ಸ್ಟವ್ ಕೂಡ ಉಚಿತವಾಗಿ ಸಿಗುತ್ತದೆಯೇ?
ಹೌದು, ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಜೊತೆಗೆ ಸ್ಟವ್ ಸಹ ನೀಡಲಾಗುತ್ತದೆ
₹650ಕ್ಕೆ ಗ್ಯಾಸ್ ಸಿಲಿಂಡರ್ ಹೇಗೆ ಸಿಗುತ್ತದೆ?
ಸರ್ಕಾರದಿಂದ ₹300 ಸಬ್ಸಿಡಿ ಸಿಗುತ್ತದೆ. ಇದರಿಂದ ಮಾರುಕಟ್ಟೆ ಬೆಲೆಯಿಂದ ಕಡಿಮೆ ದರದಲ್ಲಿ (ಸುಮಾರು ₹650) ಸಿಲಿಂಡರ್ ಸಿಗುತ್ತದೆ.
ಈ ಯೋಜನೆಗೆ ಪುರುಷರು ಅರ್ಜಿ ಹಾಕಬಹುದೇ?
ಇಲ್ಲ, ಈ ಯೋಜನೆ ಮಹಿಳೆಯರಿಗಾಗಿ ಮಾತ್ರವಾಗಿದೆ.
ಈಗಾಗಲೇ LPG ಸಂಪರ್ಕ ಇದ್ದರೆ ಅರ್ಜಿ ಹಾಕಬಹುದೇ?
ಇಲ್ಲ, ಮನೆಯಲ್ಲೇ ಈಗಾಗಲೇ LPG ಕನೆಕ್ಷನ್ ಇದ್ದರೆ ಈ ಯೋಜನೆಗೆ ಅರ್ಹತೆ ಇರುವುದಿಲ್ಲ.
ಸಬ್ಸಿಡಿ ಹಣ ಹೇಗೆ ಸಿಗುತ್ತದೆ?
ಸಿಲಿಂಡರ್ ರಿಫಿಲ್ ಮಾಡಿದ ನಂತರ ಸಬ್ಸಿಡಿ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.