ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉನ್ನತ ಶಿಕ್ಷಣಕ್ಕೆ ₹5 ಲಕ್ಷವರೆಗೆ ಸಾಲ! | ಯಾವುದೇ ಗ್ಯಾರಂಟಿ ಇಲ್ಲದೆ Loan ಹಣ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

Spread the love

arivu education loan scheme karnataka 2026:ಇಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಕೂಡ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸರ್ಕಾರವು ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ತುಂಬಾ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಿಂದ ಯಾವೆಲ್ಲಾ ಸಮುದಾಯದ ವಿದ್ಯಾರ್ಥಿಗಳು ಸಾಲ ಪಡೆಯಬಹುದು? ಎಷ್ಟು ಸಾಲ ನೀಡಲಾಗುತ್ತದೆ? ಮರುಪಾವತಿಸುವ ವಿಧಾನ ಹೇಗೆ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲತೆಗಳೇನು? ಎಂಬ ಎಲ್ಲ ಸಂಪೂರ್ಣ ಮಾಹಿತಿಗಳನ್ನು ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ

Table of Contents

ಏನಿದು ಅರಿವು ಶೈಕ್ಷಣಿಕ ಸಾಲ ಯೋಜನೆ? arivu education loan scheme karnataka

arivu education loan scheme karnataka 2026: ಅರಿವು ಶೈಕ್ಷಣಿಕ ಸಾಲ ಯೋಜನೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉನ್ನತ ಶಿಕ್ಷಣಕ್ಕೆ ₹5 ಲಕ್ಷವರೆಗೆ ಸಾಲ! | ಯಾವುದೇ ಗ್ಯಾರಂಟಿ ಇಲ್ಲದೆ Loan ಹಣ ಪಡೆಯಲು ಇಂದೇ ಅರ್ಜಿ ಸಲ್ಲಿಸಿ Free

ಹೌದು ಉನ್ನತ ವ್ಯಾಸಂಗ ಓದಲು ಬಯಸುವ ಹಿಂದುಳಿದ ವರ್ಗದ ಎಲ್ಲಾ ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ 50 ಸಾವಿರದಿಂದ 5 ಲಕ್ಷ ರೂ ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಅರಿವು ವಿದ್ಯಾಭ್ಯಾಸ ಸಾಲ ಯೋಜನೆ ಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೈದ್ಯಕೀಯ, ಅರೆ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ಕೊಡಲಾಗುತ್ತೆ.

ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಹತೆಗಳು ಯಾವುವು?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  • ಈ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದರೆ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈಗ ಯಾರೆಲ್ಲ ಸಿಇಟಿ ಎಕ್ಸಾಮ್ ಗೆ ಆಯ್ಕೆ ಆಗಿದ್ದು ಅಂತ ವಿದ್ಯಾರ್ಥಿಗಳು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಈ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆಗೆ 18 ರಿಂದ 35 ವರ್ಷಗಳು.
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಕುಟುಂಬದ ಆದಾಯ 8.00 ಲಕ್ಷಮೀರಬಾರದು.
  • ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು.
  • ವಿದ್ಯಾರ್ಥಿಗಳಿಗೆ ಸಾಲದ ಮೊತ್ತವನ್ನು ನಿಗಮದಿಂದ ನೇರ ನಗದು ವರ್ಗಾವಣೆಯ ಮೂಲಕ ಕಾಲೇಜಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

Loan Amount & Courses: ಯಾವ ಕೋರ್ಸ್‌ಗಳಿಗೆ ಎಷ್ಟು ಸಾಲ ಸಿಗುತ್ತದೆ?

  1. (ಎಂ.ಬಿ.ಬಿ.ಎಸ್, ಎಂ.ಡಿ/ಎಂ.ಎಸ್) ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ.5.00 ಲಕ್ಷದವರೆಗೆ ಸಾಲ ನೀಡಲಾಗುವುದು.
  2. ಬಿಡಿಎಸ್, ಎಂ ಡಿ ಎಸ್ ಕೋರ್ಸ್ ಗಳಲ್ಲಿ ಈಗ ಯಾರೆಲ್ಲಾ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷದವರೆಗೆ ಸಾಲವಾಗಿ ನೀಡಲಾಗುವುದು.
  3. ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ.50,000/- ಗಳನ್ನು ಸಾಲವಾಗಿ ನೀಡಲಾಗುವುದು.
  4. ಯಾರೆಲ್ಲ ವಿದ್ಯಾರ್ಥಿಗಳು ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್. ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
  5. ನಂತರ ವಿದ್ಯಾರ್ಥಿಗಳಿಗೆ ಅಲ್ಲದೆ MBA,MCA, LLB ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.
  6. ಅಷ್ಟೇ ಅಲ್ಲದೆ =ತೋಟಗಾರಿಕೆ, ಕೃಷಿ, ಡೈರಿ ತಂತ್ರಜ್ಞಾನ, ಅರಣ್ಯ, ಪಶುವೈದ್ಯಕೀಯ, ಪ್ರಾಣಿ ವಿಜ್ಞಾನ, ಆಹಾರ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಮೀನುಗಾರಿಕೆ, ರೇಷ್ಮೆ ಕೃಷಿ, ಗೃಹ ಅಥವಾ ಸಮುದಾಯ ವಿಜ್ಞಾನ, ಆಹಾರ ಪೋಷಣೆ ಮತ್ತು ಆಹಾರ) ಪದ್ಧತಿಗೆ ಸಂಬಂಧಿತ ಕೋರ್ಸ್‍ಗಳಿಗೆ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
  7. B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ರೂ.50,000/-ಗಳು ಸಾಲವಾಗಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? Documents Required for Education Loan Scheme

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣ ಪತ್ರ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕು (ನಿವಾಸದ ಪುರಾವೆ)
  • ಈ ಯೋಜನೆಗೆ ಅರ್ಜಿ ಸಲ್ಲಿಸಲು CET ಪ್ರವೇಶ ಪತ್ರ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು NEET ಪ್ರವೇಶ ಪತ್ರ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು SSLC/10 ನೇ ತರಗತಿಯ ಅಂಕಪಟ್ಟಿ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಡಿಪ್ಲೋಮ/ಪಿ.ಯು.ಸಿ ಅಂಕಪಟ್ಟಿ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಇಂಡೆಮ್ನಿಟೀ (ನಷ್ಟ ಪರಿಹಾರ) ಬಾಂಡ್ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ ಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರ ಸ್ವಯಂ ಘೋಷಣೆ ಪತ್ರ ಬೇಕು

ಮರುಪಾವತಿ ಹೇಗೆ? ಅತ್ಯಂತ ಸುಲಭ ನಿಯಮಗಳು! (Repayment: Very Easy Rules!)

ಅರಿವು ಶೈಕ್ಷಣಿಕ ಸಾಲ ಯೋಜನೆ 2026 ನ ಮುಖ್ಯ ವಿಶೇಷತೆಯೆಂದರೆ ಅದರ ಅತ್ಯಂತ ಸುಲಭ ಮತ್ತು ವಿದ್ಯಾರ್ಥಿ ಸ್ನೇಹಿ ಮರುಪಾವತಿ ನಿಯಮಗಳು. ಸಾಮಾನ್ಯ ಸಾಲಗಳಲ್ಲಿ ಮರುಪಾವತಿ ಒತ್ತಡವಾಗಿದ್ದರೆ, ಇಲ್ಲಿ ನಿಮಗೆ ಉಸಿರಾಡಲು ಸಾಕಷ್ಟು ಅವಕಾಶವಿದೆ. ಕೆಳಗಿನ ಸರಳ ಹಂತಗಳು ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಿ:

  • ಎಷ್ಟು ದಿನ? ನಿಮ್ಮ ಶಿಕ್ಷಣ ಪೂರ್ಣಗೊಂಡ 6 ತಿಂಗಳುಗಳವರೆಗೆ ನೀವು ಯಾವುದೇ EMI ಪಾವತಿಸಬೇಕಾಗಿಲ್ಲ.
  • ಈ ಅವಧಿಯಲ್ಲಿ ಏನಾಗುತ್ತದೆ? ಸಾಲದ ಮೇಲೆ ಬಡ್ಡಿ ಸೇರುತ್ತದೆ, ಆದರೆ ತಿಂಗಳಿಗೆ ಸಾವಿರಾರು ರುಪಾಯಿ ಕಟ್ಟುವ ಒತ್ತಡ ಇರುವುದಿಲ್ಲ.
  • ಯಾರಿಗೆ ಅನ್ವಯಿಸುತ್ತದೆ? ಎಲ್ಲಾ ವಿದ್ಯಾರ್ಥಿಗಳಿಗೆ (ಕೋರ್ಸ್ ಪೂರ್ಣಗೊಂಡ 6 ತಿಂಗಳುಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ – ಯಾವುದು ಮೊದಲೋ).

ಉದಾಹರಣೆ: ನೀವು 2026 ಮೇ ತಿಂಗಳಲ್ಲಿ BE ಮುಗಿಸಿದಿರಿ. ಆಗ 6 ತಿಂಗಳುಗಳವರೆಗೆ ನೀವು ಒಂದು ಪೈಸೆಯೂ ಕಟ್ಟುವ ಅಗತ್ಯವಿಲ್ಲ. 6 ತಿಂಗಳುಗಳವರೆಗೆ ನಿಂದ ನಿಮ್ಮ EMI ಪ್ರಾರಂಭವಾಗುತ್ತದೆ.

ಅರಿವು ಶೈಕ್ಷಣಿಕ ಸಾಲ ಯೋಜನೆ 2026 EMI ಎಷ್ಟು? (ಅಂದಾಜು ಪಟ್ಟಿ)

ಅರಿವು ಶೈಕ್ಷಣಿಕ ಸಾಲ ಯೋಜನೆ 2026 ಅಡಿಯಲ್ಲಿ ₹5 ಲಕ್ಷ ಸಾಲಕ್ಕೆ ಮಾಸಿಕ EMI ಎಷ್ಟಿರುತ್ತದೆ ಎಂಬುದನ್ನು ಇಲ್ಲಿ ನೋಡಿ (ಬಡ್ಡಿ 4% ರಿಂದ 7% ನಡುವೆ):

ಸಾಲದ ಮೊತ್ತಬಡ್ಡಿ ದರಮರುಪಾವತಿ ಅವಧಿಅಂದಾಜು ಮಾಸಿಕ EMI
₹1 ಲಕ್ಷ4%10 ವರ್ಷಗಳುಸುಮಾರು ₹1,012
₹3 ಲಕ್ಷ5%10 ವರ್ಷಗಳುಸುಮಾರು ₹3,180
₹5 ಲಕ್ಷ6%10 ವರ್ಷಗಳುಸುಮಾರು ₹5,550
₹5 ಲಕ್ಷ4%10 ವರ್ಷಗಳುಸುಮಾರು ₹5,060

ಗಮನಿಸಿ: ಇದು ಅಂದಾಜು ಮಾತ್ರ. ನಿಖರ EMI ನಿಮ್ಮ ಬ್ಯಾಂಕ್ ಮತ್ತು ಕೋರ್ಸ್ ಅವಧಿಯನ್ನು ಅವಲಂಬಿಸಿದೆ. ನೆನಪಿಡಿ: ನೀವು ಬೇಗನೆ ಸಾಲ ತೀರಿಸಿದರೆ, ಕಡಿಮೆ ಬಡ್ಡಿ ಕಟ್ಟಬೇಕಾಗುತ್ತದೆ.

ಮರುಪಾವತಿಯ ಸುಲಭ ನಿಯಮಗಳು (Easy Rules)

  • ಯಾವುದೇ ಮುಂಗಡ ದಂಡವಿಲ್ಲ (No Prepayment Penalty): ನೀವು 5ನೇ ವರ್ಷದಲ್ಲೇ ಪೂರ್ತಿ ಸಾಲ ತೀರಿಸಬಹುದು. ಬ್ಯಾಂಕ್ ನಿಮ್ಮಿಂದ ಒಂದು ರುಪಾಯಿ ದಂಡ ವಿಧಿಸುವುದಿಲ್ಲ.
  • ಹಂತ-ಹಂತದ EMI (Step-up EMI): ಮೊದಲ 2 ವರ್ಷ ಕಡಿಮೆ EMI, ನಂತರ ಕ್ರಮೇಣ ಹೆಚ್ಚಿಸಿಕೊಳ್ಳಬಹುದು.
  • ಆನ್‌ಲೈನ್ ಪಾವತಿ: ಬ್ಯಾಂಕ್ ಅಪ್ಲಿಕೇಶನ್, Google Pay, PhonePe ಮೂಲಕವೇ EMI ಪಾವತಿಸಬಹುದು. ಪ್ರತಿ ತಿಂಗಳು ಬ್ಯಾಂಕ್ ಶಾಖೆಗೆ ಹೋಗಬೇಕಿಲ್ಲ.
  • ಸಾಲದ ಮರುಹೊಂದಾಣಿಕೆ (Loan Restructuring): ಕಾರಣಾಂತರದಿಂದ ನಿಮಗೆ ಉದ್ಯೋಗ ಸಿಗದಿದ್ದರೆ (6 ತಿಂಗಳಿಗಿಂತ ಹೆಚ್ಚು), ನೀವು ಬ್ಯಾಂಕಿಗೆ ಮನವಿ ಮಾಡಬಹುದು. ಬ್ಯಾಂಕ್ ನಿಮ್ಮ ಸಾಲದ ಅವಧಿಯನ್ನು 15 ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು EMI ಕಡಿಮೆ ಮಾಡಬಹುದು.
  • ಭರವಸೆದಾರರ ಅಗತ್ಯವಿಲ್ಲ: ₹5 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಅಥವಾ ಜಾಮೀನು ಅಗತ್ಯವಿಲ್ಲ. ನಿಮ್ಮ ಭವಿಷ್ಯವೇ ಭರವಸೆ.

ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? How to Apply for Arivu Education Loan Scheme

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
  • https://kmdconline.karnataka.gov.in/Portal/home
  • ನಂತರ “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ” ಮೇಲೆ ಕ್ಲಿಕ್ ಮಾಡಿ ಮತ್ತು “ಮೊಬೈಲ್ ಸಂಖ್ಯೆ” ಮತ್ತು “ಸಲ್ಲಿಸಿ” ಅನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ “ಆಧಾರ್ ಸಂಖ್ಯೆ” ಅನ್ನು ನಮೂದಿಸಿ “ಕ್ಯಾಪ್ಚಾ” ಅನ್ನು ಭರ್ತಿ ಮಾಡಿ ಮತ್ತು “ಮುಂದೆ” ಬಟನ್ ಮೇಲೆ ಕ್ಲಿಕ್ ಮಾಡಿ.
  • ನಂತರ ಅರ್ಜಿದಾರರು ಅವನ/ಅವಳ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯಲ್ಲಿ OTP ಬರುತ್ತೆ
  • ನಂತರ “OTP” ಅನ್ನು ಹಾಕಿ ಮತ್ತು “ಮುಂದುವರಿಸಿ” ಆಯ್ಕೆಮಾಡಿ, ಅದರ ನಂತರ ಅಧಿಕೃತ ಸೂಚನೆಯನ್ನು ಅನುಮತಿಸಿ.
  • ನಂತರ ಆಧಾರ್ ಅನ್ನು ಪರಿಶೀಲಿಸಿದ ನಂತರ ಮತ್ತೊಮ್ಮೆ “OTP” ಅನ್ನು ಹಾಕಿ ಮತ್ತು ಸಲ್ಲಿಸಿ.
  • ನಂತರ ಯೋಜನೆಯನ್ನು ಆಯ್ಕೆಮಾಡಿ ಮತ್ತು ತಂದೆಯ ಹೆಸರು, ಲಿಂಗ, ಅರ್ಹತೆಯ ವಿವರವನ್ನು ಭರ್ತಿ ಮಾಡಿ
  • ನಂತರ “ಮುಂದುವರಿಸಿ” ಮೇಲೆ ಕ್ಲಿಕ್‌ ಮಾಡಿ, ವಿಳಾಸದ ವಿವರವನ್ನು ಹಾಕಿ ಮತ್ತು ಮತ್ತೆ “ಮುಂದುವರಿಸಿ” ಆಯ್ಕೆಮಾಡಿ.
  • ನಂತರ ಮೇಲೆ ತಿಳಿಸಿದ ಅಗತ್ಯವಿರುವ ದಾಖಲೆ ಪಾಸ್‌ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆ, ಆದಾಯ ಪ್ರಮಾಣಪತ್ರ ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿ.
  • ನಂತರ “ಮುಂದುವರಿಯಿರಿ” ಕ್ಲಿಕ್ ಮಾಡಿ ಮತ್ತು “ಅರ್ಜಿ ಸಲ್ಲಿಸಿ” ಆಯ್ಕೆಮಾಡಿ ಮತ್ತು ಅರ್ಜಿ ಐಡಿ ಪಡೆದುಕೊಳ್ಳಿ.

ತೀರ್ಮಾನ (Conclusion)

ಅರಿವು ಶೈಕ್ಷಣಿಕ ಸಾಲ ಯೋಜನೆ 2026 ಬಡ ವಿದ್ಯಾರ್ಥಿಗಳ ಪಾಲಿಗೆ ಒಂದು ವರದಾನವಾಗಿದೆ. ₹5 ಲಕ್ಷದವರೆಗೆ ಸುಲಭವಾಗಿ ಸಿಗುವ ಈ ಸಾಲ, ಹೆಚ್ಚಿನ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯಕವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸೇವಾ ಸಿಂಧು ಪೋರ್ಟಲ್ನಲ್ಲಿನ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ. ನಿಮ್ಮ ಎಲ್ಲಾ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ಯಾವುದೇ ದಲ್ಲಾಳಿಗಳ ಮಾತು ಕೇಳಿ ಮೋಸ ಹೋಗಬೇಡಿ.

Back To Home Page: Click here

ಪ್ರಮುಖ ಸೂಚನೆ: ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವು ತಾಲೂಕು ಮತ್ತು ಬ್ಯಾಂಕ್ ಶಾಖೆಗೆ ಅನುಗುಣವಾಗಿ ಬದಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಬ್ಯಾಂಕ್ ಶಾಖೆ ಅಥವಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) / ಸಮಾಜ ಕಲ್ಯಾಣ ಇಲಾಖೆ ಯನ್ನು ಸಂಪರ್ಕಿಸಿ.

FAQ – arivu education loan scheme karnataka 2026

ಈ ಯೋಜನೆಯಡಿ ಎಷ್ಟು ಸಾಲ ಸಿಗುತ್ತದೆ?

ಈ ಯೋಜನೆಯಡಿ ₹50,000 ರಿಂದ ₹5 ಲಕ್ಷದವರೆಗೆ ಸಾಲ ಸಿಗುತ್ತದೆ. ಕೋರ್ಸ್‌ನ ಪ್ರಕಾರ ಮೊತ್ತ ಬದಲಾಗುತ್ತದೆ.

ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

CET / NEET ಮೂಲಕ ಆಯ್ಕೆಯಾದ, ಕರ್ನಾಟಕದ ನಿವಾಸಿ ಮತ್ತು ಆದಾಯ ಮಿತಿಯೊಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

EMI ಯಾವಾಗ ಆರಂಭವಾಗುತ್ತದೆ?

ಕೋರ್ಸ್ ಪೂರ್ಣಗೊಂಡ 6 ತಿಂಗಳ ನಂತರ EMI ಆರಂಭವಾಗುತ್ತದೆ.

ಗ್ಯಾರಂಟಿ ಅಥವಾ ಜಾಮೀನು ಬೇಕಾ?

₹5 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಅಥವಾ ಜಾಮೀನು ಅಗತ್ಯವಿಲ್ಲ.

ಯಾವ ಯಾವ ಕೋರ್ಸ್‌ಗಳಿಗೆ ಸಾಲ ಸಿಗುತ್ತದೆ?

Medical, Engineering, MBA, MCA, LLB ಸೇರಿದಂತೆ ವಿವಿಧ professional ಕೋರ್ಸ್‌ಗಳಿಗೆ ಸಾಲ ಸಿಗುತ್ತದೆ.

ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, CET/NEET ಪ್ರವೇಶ ಪತ್ರ, ಅಂಕಪಟ್ಟಿ ಸೇರಿದಂತೆ ಪ್ರಮುಖ ದಾಖಲೆಗಳು ಬೇಕಾಗುತ್ತವೆ.

ಸಾಲವನ್ನು ಬೇಗ ತೀರಿಸಿದರೆ ದಂಡವಿದೆಯೇ?

ಇಲ್ಲ, ಯಾವುದೇ prepayment penalty ಇರುವುದಿಲ್ಲ.

Leave a Comment