ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಹೊಸ ಕಾರ್ ಖರೀದಿಸಲು ಉಚಿತ 4 ಲಕ್ಷ ಹಣ ಸಿಗುತ್ತೆ.! ಈಗಲೇ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ

Spread the love

Swavalambi Sarathi Scheme 2026 Karnataka:ನಿಮ್ಮ ಹತ್ತಿರ ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಗುಡ್‌ನ್ಯೂಸ್.! ಕಾರು ಖರೀದಿಸಲು ಸರ್ಕಾರದಿಂದ ಸಿಗುತ್ತೆ 4 ಲಕ್ಷ ರೂಪಾಯಿ ಉಚಿತ ಸಹಾಯಧನ.! ಹೌದು, ನೀವು ನಾಲ್ಕು ಚಕ್ರದ ವಾಹನ ಖರೀದಿಸಬೇಕು ಅಂತ ಇದ್ದರೆ ಹೊಸ ಕಾರು ಖರೀದಿಸಲು ಸರ್ಕಾರದಿಂದ ನೇರವಾಗಿ 4 ಲಕ್ಷ ರೂಪಾಯಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಈ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಯ ಹೆಸರೇನು.? ಯಾವಾಗ ಹಣ ಬರುತ್ತೆ.? ಯಾವೆಲ್ಲ ಕಾರುಗಳಿಗೆ ಈ ಯೋಜನೆ ಅನ್ವಯಿಸುತ್ತದೆ.? ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ

ಹೌದು ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ಖರೀದಿಗೆ 4 ಲಕ್ಷ ರೂಪಾಯಿ ಸಹಾಯಧನ ಪಡೆಯಲು ರಾಜ್ಯದ ವಿವಿಧ ನಿಗಮಗಳಿಂದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನ ಆಹ್ವಾನಿಸಲಾಗಿದು. ಸ್ವಾವಲಂಬಿ ಸಾರಥಿ ಯೋಜನೆಯಡಿ ಸಬ್ಸಿಡಿಯಲ್ಲಿ ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದ್ದು. ಸ್ವ-ಉದ್ಯೋಗ ಮಾಡಲು ಆಸಕ್ತಿ ಇರುವ ಯುವಕರಿಗೆ ಪ್ರೋತ್ಸಾಹ ನೀಡಲು ರಾಜ್ಯದ ವಿವಿಧ ನಿಗಮದಿಂದ ಸಹಾಯಧನವನ್ನು ಈ ಯೋಜನೆಯಡಿ ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ತೆಗೆದುಕೊಳ್ಳಲು ಸಬ್ಸಿಡಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

Table of Contents

ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆ 2026 | Swavalambi Sarathi Scheme 2026 Karnataka

Swavalambi Sarathi Scheme 2026 Karnataka: ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಹೊಸ ಕಾರ್ ಖರೀದಿಸಲು ಉಚಿತ 4 ಲಕ್ಷ ಹಣ ಸಿಗುತ್ತೆ.! ಈಗಲೇ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ Free

ಹಿಂದೆ ಸಾಲ(loan) ಪಡೆಯಲು ಬ್ಯಾಂಕುಗಳ ಮುಂದೆ ತಿಂಗಳುಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ 2026ರಲ್ಲಿ ಕರ್ನಾಟಕ ಸರ್ಕಾರ ಈ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಿದೆ. ನಿರುದ್ಯೋಗಿ ಯುವಕರು ಇತರರ ಬಳಿ ಕೆಲಸ ಮಾಡುವುದಕ್ಕಿಂತ, ತಾವೇ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂಬುದೇ ‘ಸ್ವಾವಲಂಬಿ ಸಾರಥಿ’ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಮೂಲಕ ನೀವು ಟ್ಯಾಕ್ಸಿ, ಆಟೋರಿಕ್ಷಾ ಅಥವಾ ಸರಕು ಸಾಗಣೆ ವಾಹನಗಳನ್ನು ಖರೀದಿಸಲು ಅವಕಾಶವಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಸರ್ಕಾರ ನೀಡುವ ₹4 ಲಕ್ಷ ಮೊತ್ತವು ಸಾಲವಲ್ಲ — ಅದು ನೇರ ಸಹಾಯಧನ (Subsidy). ಅಂದರೆ ಈ ಹಣವನ್ನು ನೀವು ಸರ್ಕಾರಕ್ಕೆ ಮರಳಿ ಪಾವತಿಸುವ ಅಗತ್ಯವೇ ಇಲ್ಲ.

ಉಳಿದ ಹಣವನ್ನು ನೀವು ಬ್ಯಾಂಕ್ ಸಾಲದ ಮೂಲಕ ಪಡೆದುಕೊಳ್ಳಬಹುದು. ಮೊದಲು ಈ ಯೋಜನೆಯಲ್ಲಿ ಸಬ್ಸಿಡಿ ಮೊತ್ತ ಕಡಿಮೆ ಇತ್ತು. ಆದರೆ ವಾಹನಗಳ ಬೆಲೆ ಏರಿಕೆ ಮತ್ತು ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈಗ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ.

ಸ್ವಾವಲಂಬಿ ಸಾರಥಿ ಯೋಜನೆ – ಏಕೆ ಉತ್ತಮ ಅವಕಾಶ? Car Subsidy Scheme Karnataka 2026

ಸಾಲದ ಹೊರೆ ಕಡಿಮೆ: ₹6-10 ಲಕ್ಷ ಬೆಲೆಯ ವಾಹನಕ್ಕೆ ₹4 ಲಕ್ಷದವರೆಗೆ ಸಹಾಯಧನ ಸಿಕ್ಕರೆ, ನಿಮ್ಮ ಸಾಲದ ಮೊತ್ತ ಬಹಳಷ್ಟು ಕಡಿಮೆಯಾಗುತ್ತದೆ. ಇದರಿಂದ ಮಾಸಿಕ EMI ಕಡಿಮೆಯಾಗುತ್ತದೆ.

ತಕ್ಷಣದ ಉದ್ಯೋಗ: ವಾಹನ ಸಿಕ್ಕ ದಿನದಿಂದಲೇ ನೀವು ಓಲಾ, ಉಬರ್ ಅಥವಾ ಸ್ಥಳೀಯ ಟ್ಯಾಕ್ಸಿ ಸ್ಟ್ಯಾಂಡ್ ಮೂಲಕ ಗಳಿಸಲು ಪ್ರಾರಂಭಿಸಬಹುದು.

ಸ್ವಾಭಿಮಾನದ ಜೀವನ: ನೀವು ಬೇರೆಯವರಿಗಾಗಿ ಕೆಲಸ ಮಾಡುವವರಲ್ಲ; ನೀವೇ ನಿಮ್ಮ ಸ್ವಂತ ಬಾಸ್. ಇದು ನಿಮಗೆ ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುತ್ತದೆ.

ನಿಜವಾಗಿಯೂ ಬಡವರಿಗಾಗಿ: ಆದಾಯದ ಮಿತಿಯನ್ನು ₹1.5 ಲಕ್ಷ / ₹2 ಲಕ್ಷ ಇರಿಸಿರುವುದರಿಂದ ಈ ಯೋಜನೆಯ ಲಾಭ ನಿಜವಾಗಿಯೂ ಅಗತ್ಯವಿರುವವರಿಗೆ ಮಾತ್ರ ಸಿಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆ 2026 ₹4 ಲಕ್ಷ ಸಬ್ಸಿಡಿ: ಯಾವ ನಿಗಮಗಳಲ್ಲಿ ಅರ್ಜಿ ಸಲ್ಲಿಸಬಹುದು? | Swavalambi Sarathi Scheme 2026 Karnataka Apply

  • ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (OBC) ಅರ್ಜಿ ಸಲ್ಲಿಸಬಹುದು
  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಉಪ್ಪಾರ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಮರಾಠ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ವಿಶ್ವಕರ್ಮ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು
  • ಒಕ್ಕಲಿಗ ಅಭಿವೃದ್ಧಿ ನಿಗಮ, ಅರ್ಜಿ ಸಲ್ಲಿಸಬಹುದು

ಸ್ವಾವಲಂಬಿ ಸಾರಥಿ ಯೋಜನೆ 2026 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ? (Karnataka Auto Taxi Subsidy Scheme 2026 Eligibility Criteria)

  • ನೀವು ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
  • ಅರ್ಜಿ ಸಲಿಸಲು ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರದಲ್ಲಿ ₹1.5 ಲಕ್ಷಕ್ಕಿಂತ ಮಿತಿಯೊಳಗಿರಬೇಕು ಹಾಗೂ ನಗರ ಪ್ರದೇಶದಲ್ಲಿ ಇದರೆ ₹2 ಲಕ್ಷಕ್ಕಿಂತ ಕಡಿಮೆ ಮಿತಿಯೊಳಗಿರಬೇಕು.
  • ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷ ವಯಸ್ಸು ಒಳಗಿರಬೇಕಗುತ್ತೆ .
  • ಈ ಯೋಜನೆಯಡಿ ಆರ್ಥಿಕ ಸಹಾಯ ಧನ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನ(ಡ್ರೈವಿಂಗ್ ಲೈಸೆನ್ಸ್)ಯನ್ನು ಹೊಂದಿರಬೇಕಗುತ್ತೆ.
  • ಅರ್ಜಿದಾರರು ನಿರುದ್ಯೋಗಿಯಾಗಿರಬೇಕಗುತ್ತೆ
  • ಎಲ್ಲೋ ಬೋರ್ಡ್ ವಾಹನ ನೋಂದಾಯಿಸಲು ಒಪ್ಪಿಗೆ ಇರಬೇಕಗುತ್ತೆ .
  • ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಮತ್ತು 3ಬಿ ಈ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
  • ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ಖರೀದಿಗೆ ಶೇಕಡಾ 50% ರಷ್ಟು ಸಬ್ಸಿಡಿಯಲ್ಲಿ 4 ಲಕ್ಷ ರೂಪಾಯಿ ಸಹಾಯಧನವು ಸಹ ನೀಡಲಾಗುತ್ತದೆ.
  • ಹಿಂದಿನ ಸಹಾಯಧನ: ಕಳೆದ 5 ವರ್ಷಗಳಲ್ಲಿ ನೀವು ಅಥವಾ ನಿಮ್ಮ ಕುಟುಂಬದ ಯಾರಾದರೂ KMDCL ಅಥವಾ ಇತರೆ ಸರ್ಕಾರಿ ವಾಹನ ಸಹಾಯಧನ ಯೋಜನೆಯ ಲಾಭವನ್ನು ಪಡೆದಿರಬಾರದು.
  • ಕುಟುಂಬದ ನಿಯಮ: ನಿಮ್ಮ ಕುಟುಂಬದಲ್ಲಿ ಈ ಯೋಜನೆಯ ಲಾಭವನ್ನು ಪಡೆಯುತ್ತಿರುವ ಯಾರೂ ಇರಬಾರದು.

ಸ್ವಾವಲಂಬಿ ಸಾರಥಿ ಯೋಜನೆ 2026 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು? | Swavalambi Sarathi Scheme 2026 Karnataka Required Documents

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ್
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್ (ಸಾರಿಗೆ ವಾಹನಕ್ಕೆ – Transport LMV)
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ನ ಪ್ರತಿ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಮೊಬೈಲ್ ಸಂಖ್ಯೆ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ವಾಹನದ ಅಂದಾಜು ಪಟ್ಟಿ (ವಾಹನ ಡೀಲರ್ ನಿಂದ ಪಡೆದ ದರಪಟ್ಟಿ)

ಸ್ವಾವಲಂಬಿ ಸಾರಥಿ ಯೋಜನೆ 2026 ಸಹಾಯಧನದ ಮೊತ್ತ: ಎಷ್ಟು ಹಣ ಸಿಗುತ್ತದೆ? (₹4 ಲಕ್ಷ Subsidy Details)

ಯೋಜನೆಯಡಿಯಲ್ಲಿ ಅರ್ಹ ವ್ಯಕ್ತಿಗಳಿಗೆ ವಾಹನದ ಬೆಲೆಯ ಶೇಕಡಾವಾರು ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತದೆ.

ಸಮುದಾಯಸಹಾಯಧನದ ಶೇಕಡಾವಾರುಗರಿಷ್ಠ ಮೊತ್ತ
ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST)ವಾಹನ ಬೆಲೆಯ 75%₹4,00,000 (ನಾಲ್ಕು ಲಕ್ಷ)
ಹಿಂದುಳಿದ ವರ್ಗಗಳು (OBC) / ಅಲ್ಪಸಂಖ್ಯಾತರುವಾಹನ ಬೆಲೆಯ 50%₹3,00,000 (ಮೂರು ಲಕ್ಷ)
ಪ್ಯಾಸೆಂಜರ್ ಆಟೋರಿಕ್ಷಾ (ಎಲ್ಲರಿಗೂ)ನಿಗದಿತ ಮೊತ್ತ₹75,000 (ಎಪ್ಪತ್ತೈದು ಸಾವಿರ)

ಸೂಚನೆ: ಉಳಿದ ಮೊತ್ತವನ್ನು ಅರ್ಜಿದಾರರು ಬ್ಯಾಂಕ್ ಸಾಲದ ಮೂಲಕ ಪೂರೈಸಬೇಕಾಗುತ್ತದೆ. ಸರ್ಕಾರದ ಸಹಾಯಧನದಿಂದಾಗಿ ಬ್ಯಾಂಕ್ ಸಾಲ ಪಡೆಯುವುದು ಸುಲಭವಾಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆ 2026 ಅರ್ಜಿ ಸಲ್ಲಿಸುವುದು ಹೇಗೆ? (Step-by-Step Apply Online Process)

ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು.

ವಿಧಾನ 1: ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (Seva Sindhu Online Apply)

  • ಮೊದಲು ಸೇವಾಸಿಂಧು ಅಧಿಕೃತ ವೆಬ್ಸೈಟ್ https://sevasindhu.karnataka.gov.in ಗೆ ಭೇಟಿ ನೀಡಿ.
  • ನಂತರ ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳಿ.
  • ನಂತರ Search ಬಾರ್ನಲ್ಲಿ “ಸ್ವಾವಲಂಬಿ ಸಾರಥಿ” ಎಂದು ಟೈಪ್ ಮಾಡಿ ಅಥವಾ ಸಮಾಜ ಕಲ್ಯಾಣ / ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ನೋಡಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ OTP ಮೂಲಕ ಲಾಗಿನ್ ಆಗಿ.
  • ನಂತರ ನಿಮ್ಮ ವೈಯಕ್ತಿಕ ಮಾಹಿತಿ, ಆದಾಯ, ವಿಳಾಸ ಮತ್ತು ನೀವು ಖರೀದಿಸಲು ಇಚ್ಛಿಸುವ ವಾಹನದ ವಿವರಗಳನ್ನು ನಮೂದಿಸಿ.
  • ನಂತರ ಮೇಲೆ ನಮೂದಿಸಿದ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ‘Submit’ ಕ್ಲಿಕ್ ಮಾಡಿ. ನಿಮಗೆ ಒಂದು ಅಕ್ನಾಲೆಜ್ಮೆಂಟ್ ಸಂಖ್ಯೆ ದೊರೆಯುತ್ತದೆ. ಅದನ್ನು ಭದ್ರವಾಗಿ ಇಟ್ಟುಕೊಳ್ಳಿ.

ವಿಧಾನ 2: ಗ್ರಾಮ ಒನ್ / ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (Offline Apply Process)

  • ನಿಮ್ಮ ಹತ್ತಿರದ ಗ್ರಾಮ ಒನ್ (ಗ್ರಾಮೀಣ) ಅಥವಾ ಬೆಂಗಳೂರು ಒನ್ (ನಗರ) ಕೇಂದ್ರಕ್ಕೆ ಭೇಟಿ ನೀಡಿ.
  • ಫಾರ್ಮ್ ಪಡೆಯಿರಿ: “ಸ್ವಾವಲಂಬಿ ಸಾರಥಿ ಯೋಜನೆ”ಗಾಗಿ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
  • ಫಾರ್ಮ್ ಭರ್ತಿ ಮಾಡಿ: ನಿಮ್ಮ ಕೈಬರಹದಲ್ಲಿ ಎಲ್ಲಾ ಮಾಹಿತಿ ಭರ್ತಿ ಮಾಡಿ.
  • ದಾಖಲೆಗಳನ್ನು ಲಗತ್ತಿಸಿ: ಎಲ್ಲಾ ದಾಖಲೆಗಳ ಸ್ವಯಂ ದೃಢೀಕರಣ (self-attested) ಪ್ರತಿಗಳನ್ನು ಫಾರ್ಮ್‌ಗೆ ಅಂಟಿಸಿ.
  • ಶುಲ್ಕ ಪಾವತಿಸಿ: ನಿಗದಿತ ಸೇವಾ ಶುಲ್ಕ (₹10-30) ಪಾವತಿಸಿ.
  • ಸಲ್ಲಿಸಿ: ಕೇಂದ್ರದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ಗೆ ಅಪ್‌ಲೋಡ್ ಮಾಡಿ ನಿಮಗೆ ರಶೀದಿ ನೀಡುತ್ತಾರೆ.

ಸ್ವಾವಲಂಬಿ ಸಾರಥಿ ಯೋಜನೆ 2026 ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ? (Application Status Check)

  1. ಆನ್‌ಲೈನ್: ಸೇವಾಸಿಂಧು ಪೋರ್ಟಲ್‌ನಲ್ಲಿ “Application Status” ಕ್ಲಿಕ್ ಮಾಡಿ, ನಿಮ್ಮ ಅಕ್ನಾಲೆಜ್ಮೆಂಟ್ ಸಂಖ್ಯೆ ನಮೂದಿಸಿ ನಿಮ್ಮ ಅಜ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು.
  2. ಎಸ್‌ಎಂಎಸ್ ಮೂಲಕ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸರ್ಕಾರದಿಂದ ಎಸ್‌ಎಂಎಸ್ ಬರುತ್ತದೆ.
  3. ಕೇಂದ್ರಕ್ಕೆ ಭೇಟಿ: ನೀವು ಅರ್ಜಿ ಸಲ್ಲಿಸಿದ ಗ್ರಾಮ ಒನ್ / ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು.

ಸ್ವಾವಲಂಬಿ ಸಾರಥಿ ಯೋಜನೆ 2026 ಷರತ್ತುಗಳು ಮತ್ತು ನಿಯಮಗಳು (Terms & Conditions)

ಯೋಜನೆಯ ಪ್ರಯೋಜನ ಪಡೆಯುವ ಮೊದಲು ಈ ಕೆಳಗಿನ ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ:

ವಾಣಿಜ್ಯ ಬಳಕೆ ಮಾತ್ರ: ಖರೀದಿಸಿದ ವಾಹನವನ್ನು (ಹಳದಿ ಬೋರ್ಡ್ ಟ್ಯಾಕ್ಸಿ ಅಥವಾ ಪ್ಯಾಸೆಂಜರ್ ಆಟೋ) ವಾಣಿಜ್ಯ (commercial) ಉದ್ದೇಶಕ್ಕೆ ಮಾತ್ರ ಬಳಸಬೇಕು. ಖಾಸಗಿ ವಾಹನವಾಗಿ ಬಳಸುವಂತಿಲ್ಲ.

ಮಾರಾಟದ ನಿಷೇಧ: ಸಹಾಯಧನ ಪಡೆದ ನಂತರ 3 ರಿಂದ 5 ವರ್ಷಗಳ ಕಾಲ ವಾಹನವನ್ನು ಮಾರಾಟ ಮಾಡುವಂತಿಲ್ಲ ಅಥವಾ ಬೇರೊಬ್ಬರ ಹೆಸರಿಗೆ ಸ್ಥಳಾಂತರಿಸುವಂತಿಲ್ಲ.

ಪರ್ಮಿಟ್ ಮತ್ತು ವಿಮೆ: ವಾಹನದ ಎಲ್ಲಾ ಕಾನೂನುಬದ್ಧ ಪರ್ಮಿಟ್, ಫಿಟ್ನೆಸ್ ಪ್ರಮಾಣಪತ್ರ ಮತ್ತು ವಾಣಿಜ್ಯ ವಿಮೆಯನ್ನು ಪಡೆಯುವ ಜವಾಬ್ದಾರಿ ಅರ್ಜಿದಾರರದ್ದೇ.

ಸಾಲದ ವ್ಯವಸ್ಥೆ: ಸಹಾಯಧನವು ನೇರವಾಗಿ ವಾಹನ ಡೀಲರ್ ಅಥವಾ ನಿಮ್ಮ ಬ್ಯಾಂಕ್ ಸಾಲದ ಖಾತೆಗೆ ಬಿಡುಗಡೆಯಾಗುತ್ತದೆ. ಉಳಿದ ಹಣಕ್ಕಾಗಿ ನೀವು ಬ್ಯಾಂಕ್ ಸಾಲ ಪಡೆಯಬೇಕು.

ಸ್ವಾವಲಂಬಿ ಸಾರಥಿ ಯೋಜನೆ 2026 ಅರ್ಜಿ ತಿರಸ್ಕರಿಸಲು ಸಾಮಾನ್ಯ ಕಾರಣಗಳು (Common Rejection Reasons)

ಕೆಳಗಿನ ತಪ್ಪುಗಳಿಂದಾಗಿ ನಿಮ್ಮ ಅರ್ಜಿ ತಿರಸ್ಕೃತವಾಗಬಹುದು:

  1. ವಯಸ್ಸು 21ಕ್ಕಿಂತ ಕಡಿಮೆ ಅಥವಾ 45ಕ್ಕಿಂತ ಹೆಚ್ಚು.
  2. ಆದಾಯ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ಅಥವಾ ಗಡುವು ಮೀರಿದ ಪ್ರಮಾಣ ಪತ್ರ.
  3. ಕುಟುಂಬದ ಬೇರೆ ಸದಸ್ಯರು ಈಗಾಗಲೇ ಈ ಯೋಜನೆಯನ್ನು ಬಳಸಿಕೊಂಡಿದ್ದರೆ.
  4. ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವುದು (LMV-Transport ಅಗತ್ಯ).
  5. ಅಪೂರ್ಣ ದಾಖಲೆಗಳು.

ತೀರ್ಮಾನ

ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ರಾಜ್ಯದ ನಿರುದ್ಯೋಗಿ ಹಿಂದುಳಿದ ವರ್ಗಗಳ ಯುವಕರಿಗೆ ಒಂದು ಸುವರ್ಣಾವಕಾಶವಾಗಿದೆ. ನೀವು SC, ST, OBC ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಮತ್ತು 21-45 ವರ್ಷ ವಯಸ್ಸಿನವರಾಗಿದ್ದರೆ, ನಿಮ್ಮ ಕನಸಿನ ಕಾರನ್ನು ಖರೀದಿಸಲು ಮತ್ತು ಲಾಭದಾಯಕ ಸಾರಿಗೆ ವ್ಯವಹಾರವನ್ನು ಪ್ರಾರಂಭಿಸಲು ಇದೇ ಸರಿಯಾದ ಸಮಯ.

ಕೇವಲ ₹1.5 ಲಕ್ಷದ ವಾರ್ಷಿಕ ಆದಾಯವಿರುವ ಕುಟುಂಬವೂ ₹4 ಲಕ್ಷದವರೆಗೆ ಸಹಾಯಧನ ಪಡೆಯಬಹುದು. ಹಣದ ಕೊರತೆಯಿಂದ ಹಿಂದೆ ಸರಿಯಬೇಡಿ. ಸರ್ಕಾರವೇ ನಿಮ್ಮ ಕೈ ಹಿಡಿದು ಮುಂದೆ ನಡೆಸಲು ಸಿದ್ಧವಾಗಿದೆ.

Back To Home Page: Click here

FAQ

ಸ್ವಾವಲಂಬಿ ಸಾರಥಿ ಯೋಜನೆ ಎಂದರೇನು?

ಸ್ವಾವಲಂಬಿ ಸಾರಥಿ ಯೋಜನೆ ಕರ್ನಾಟಕ ಸರ್ಕಾರದ ಒಂದು ಸ್ವ-ಉದ್ಯೋಗ ಯೋಜನೆಯಾಗಿದ್ದು, ಟೂರಿಸ್ಟ್ ಅಥವಾ ಗೂಡ್ಸ್ ವಾಹನ ಖರೀದಿಸಲು ₹4 ಲಕ್ಷದವರೆಗೆ ಸಹಾಯಧನ ನೀಡುತ್ತದೆ.

ಈ ಯೋಜನೆಯಡಿ ಎಷ್ಟು ಸಹಾಯಧನ ಸಿಗುತ್ತದೆ?

ವಾಹನದ ಬೆಲೆಯ 50% ರಷ್ಟು ಸಬ್ಸಿಡಿ ಸಿಗುತ್ತದೆ. ಗರಿಷ್ಠ ₹4 ಲಕ್ಷವರೆಗೆ ಸಹಾಯಧನ ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

21 ರಿಂದ 45 ವರ್ಷದೊಳಗಿನ, ಕರ್ನಾಟಕ ನಿವಾಸಿ, ನಿರುದ್ಯೋಗಿ ಮತ್ತು LMV Transport ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಯಾವ ವಾಹನಗಳಿಗೆ ಈ ಯೋಜನೆ ಅನ್ವಯಿಸುತ್ತದೆ?

ಟೂರಿಸ್ಟ್ ವಾಹನ (Taxi)
ಗೂಡ್ಸ್ ವಾಹನ (Commercial goods vehicle)
ಖಾಸಗಿ ಕಾರುಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

Leave a Comment