PM Kisan e-KYC Update:ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಗೆ ಕ್ಷಣಗಣನೆ | ಈ ಕೆಲಸ ಕಡ್ಡಾಯ! ಈ ಕೆಲಸ ಮಾಡಿಲ್ಲ ಅಂದ್ರೆ ಖಾತೆಗೆ ಹಣ ಬರಲ್ಲ

Spread the love

PM Kisan e-KYC Update:ಕರ್ನಾಟಕ ಸೇರಿದಂತೆ ದೇಶದ ಕೋಟ್ಯಾಂತರ ರೈತರು ಕಾತುರದಿಂದ ಎದುರು ನೋಡುತ್ತಿರುವ ಪಿಎಂ ಕಿಸಾನ್ 22ನೇ ಕಂತು (PM Kisan 22nd Installment) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸರ್ಕಾರ(Central Govt)ವು ಶೀಘ್ರದಲ್ಲೇ 22ನೇ ಹಂತದ ಹಣವನ್ನು ಅರ್ಹ ರೈತರ ಖಾತೆಗಳಿಗೆ ಜಮೆ ಮಾಡಲಿದೆ. ಆದರೆ, ಈ ಹಣ ನಿಮ್ಮ ಖಾತೆ ಸೇರಬೇಕಾದರೆ, ನೀವು ಕಡ್ಡಾಯವಾಗಿ ಪಿಎಂ ಕಿಸಾನ್ ಇ-ಕೆವೈಸಿ (PM Kisan e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು.

ಇ-ಕೆವೈಸಿ(E-KYC) ಪೂರ್ಣಗೊಳಿಸದ ರೈತರಿಗೆ 22ನೇ ಕಂತಿನ ಹಣ ವರ್ಗಾವಣೆ(22nd installment money transfer)ಯಾಗುವುದಿಲ್ಲ. ಹಾಗಾದರೆ, ಈ ಪ್ರಕ್ರಿಯೆಯನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಮತ್ತು ನಿಮ್ಮ ಹೆಸರು ಪಿಎಂ ಕಿಸಾನ್ ಪಟ್ಟಿಯಲ್ಲಿ (PM Kisan Beneficiary List) ಇದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

Table of Contents

ಪಿಎಂ ಕಿಸಾನ್ ಯೋಜನೆ 2026 ಮತ್ತು 22ನೇ ಕಂತಿನ ಮಹತ್ವ | PM Kisan 22nd Installment ₹2000

PM Kisan e-KYC Update: ಪಿಎಂ ಕಿಸಾನ್ 22ನೇ ಕಂತು ಬಿಡುಗಡೆಗೆ ಕ್ಷಣಗಣನೆ | ಈ ಕೆಲಸ ಕಡ್ಡಾಯ! ಈ ಕೆಲಸ ಮಾಡಿಲ್ಲ ಅಂದ್ರೆ ಖಾತೆಗೆ ಹಣ ಬರಲ್ಲ Online e-KYC Guide Free

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ, ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಾಗಿ (ತಲಾ 2,000 ರೂಪಾಯಿ) ನೀಡಲಾಗುತ್ತದೆ. ಇದುವರೆಗೆ 21 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಈಗ 22ನೇ ಕಂತಿಗಾಗಿ ಕೇಂದ್ರ ಹಣಕಾಸು ಸಚಿವಾಲಯ ಸಜ್ಜಾಗುತ್ತಿದೆ.

ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂತು ಬಿಡುಗಡೆಯಾಗುವುದರಿಂದ, ಇವತ್ತು 22ನೇ ಕಂತು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಹೊಸ ಆದೇಶದ ಪ್ರಕಾರ, ಪಿಎಂ ಕಿಸಾನ್ ಇ-ಕೆವೈಸಿ(PM Kisan e-KYC) ಪೂರ್ಣಗೊಳಿಸದ ಯಾವುದೇ ರೈತರಿಗೆ ಈ ಕಂತಿನ ಹಣ(installment money) ತಲುಪುವುದಿಲ್ಲ. ಹೀಗಾಗಿ, ರೈತರು ತಕ್ಷಣವೇ ಈ ಕೆಲಸವನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ ಆಗಿದೆ..

ಇ-ಕೆವೈಸಿ ಏಕೆ ಅಷ್ಟು ಮುಖ್ಯ? | PM Kisan e-KYC Update Importance, DBT Security

ಇ-ಕೆವೈಸಿ ಅಂದರೆ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್. ಇದು ರೈತರ ಗುರುತನ್ನು ಖಚಿತಪಡಿಸಿಕೊಳ್ಳುವ ಡಿಜಿಟಲ್ ಪ್ರಕ್ರಿಯೆಯಾಗಿದೆ. ಸರ್ಕಾರವು ಈ ಹಿಂದೆ ಆಧಾರ್ ಕಾರ್ಡ್ ಅನ್ನು ಪಿಎಂ ಕಿಸಾನ್ ಖಾತೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಈಗ ಆಧಾರ್ ಲಿಂಕ್ ಜೊತೆಗೆ, ಬಯೋಮೆಟ್ರಿಕ್ ಅಥವಾ ಒಟಿಪಿ ಆಧಾರಿತ ಇ-ಕೆವೈಸಿ ಕಡ್ಡಾಯವಾಗಿದೆ.

ಇದರಿಂದಾಗಿ ನಕಲಿ ರೈತರು, ನಕಲಿ ಖಾತೆಗಳನ್ನು ತಡೆಗಟ್ಟಬಹುದು ಮತ್ತು ನಿಜವಾದ ಅರ್ಹ ರೈತರಿಗೆ ಮಾತ್ರ ಸರ್ಕಾರಸಹಾಯಧನ (Subsidy)ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಹಣ ಪಡೆಯದಂತೆ ತಡೆಯಲು ಸಹ ಇದು ಸಹಾಯಕವಾಗಿದೆ.

ಪಿಎಂ ಕಿಸಾನ್ ಇ-ಕೆವೈಸಿ ಮಾಡುವ ವಿಧಾನಗಳು | PM Kisan e-KYC Online Guide via CSC & Mobile App

ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ಎರಡು ರೀತಿಯಲ್ಲಿ ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸಬಹುದು.

1.ಆಫ್ಲೈನ್ ಮೂಲಕ ಪಿಎಂ ಕಿಸಾನ್ ಇ-ಕೆವೈಸಿ ಮಾಡುವ ವಿಧಾನ | PM Kisan Offline e-KYC Step by Step Guide (ಹತ್ತಿರದ CSC ಕೇಂದ್ರದ ಮೂಲಕ)

  • ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC – Common Service Centre) ಅಥವಾ ಗ್ರಾಮ ಒನ್ (ಅರೆಸೆ) ಕೇಂದ್ರಕ್ಕೆ ಭೇಟಿ ನೀಡಿ.
  • ನಿಮ್ಮ ಆಧಾರ್ ಕಾರ್ಡ್(Aadhaar card) ಮತ್ತು ಪಿಎಂ ಕಿಸಾನ್ ಖಾತೆ ಸಂಖ್ಯೆಯನ್ನು (ರಿಜಿಸ್ಟರ್ ಮೊಬೈಲ್ ನಂಬರ್) ವಿವರ ನೀಡಿ.
  • ಅಲ್ಲಿನ ಆಪರೇಟರ್ ನಿಮ್ಮ ಬೆರಳಚ್ಚು (ಬಯೋಮೆಟ್ರಿಕ್) ಪರಿಶೀಲನೆ ನಡೆಸಿ, ಇ-ಕೆವೈಸಿ ಪ್ರಕ್ರಿಯೆ(E-KYC process)ಯನ್ನು ಪೂರ್ಣಗೊಳಿಸುತ್ತಾರೆ.
  • ಈ ಸೇವೆಗೆ ಸಾಮಾನ್ಯವಾಗಿ ದರ ನಿಗದಿಯಾಗಿದ್ದು, ರಶೀದಿ ಪಡೆಯುವುದು ಉತ್ತಮ.

2.ಆನ್ಲೈನ್ ಮೂಲಕ ಪಿಎಂ ಕಿಸಾನ್ e-KYC ಮಾಡುವ ಹಂತ-ಹಂತದ ವಿಧಾನ (ಮನೆಯಿಂದಲೇ) | PM Kisan Online e-KYC Process from Home

ನಿಮ್ಮ ಮೊಬೈಲ್ ನಂಬರ್ ಆಧಾರ್ ಜೊತೆ ಲಿಂಕ್ ಆಗಿದ್ದರೆ, ನೀವು ಮನೆಯಲ್ಲೇ ಆನ್‌ಲೈನ್ ಮೂಲಕ ಇ-ಕೆವೈಸಿ ಮಾಡಬಹುದು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹೇಗೆ ಇ-ಕೆವೈಸಿ ಮಾಡಬೇಕು ಅಂತ ಕೆಳಗೆ ತಿಳಿಸಲಾಗಿದೆ.

  • ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ (pmkisan.gov.in) ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ‘Farmer Corner’ ಅಡಿಯಲ್ಲಿ ‘e-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಭರ್ತಿ ಮಾಡಿ.
  • ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ (OTP) ಬರುತ್ತದೆ. ಆ ಒಟಿಪಿ ನಮೂದಿಸಿ.
  • ನಂತರ ಒಟಿಪಿ ಸರಿಯಾಗಿದ್ದರೆ, ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಯಶಸ್ವಿ(E-KYC process successful)ಯಾಗಿ ಪೂರ್ಣಗೊಳ್ಳುತ್ತದೆ.

3. ಪಿಎಂ ಕಿಸಾನ್ ಮೊಬೈಲ್ ಆಪ್ ಮೂಲಕ e-KYC ಮಾಡುವ ಹಂತ-ಹಂತದ ವಿಧಾನ | PM Kisan Mobile App e-KYC Step by Step Guide

ಪ್ಲೇ ಸ್ಟೋರ್ ನಿಂದ ಪಿಎಂ ಕಿಸಾನ್ ಆಫೀಷಿಯಲ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದರಲ್ಲಿಯೂ ‘e-KYC’ ಆಯ್ಕೆ ಇದ್ದು, ಅದರ ಮೂಲಕವೂ ಒಟಿಪಿ ಪರಿಶೀಲನೆ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಪಿಎಂ ಕಿಸಾನ್ 22ನೇ ಕಂತು: ₹2000 ಹಣ ಖಾತೆಗೆ ಬರದಿರುವ ಪ್ರಮುಖ ಕಾರಣಗಳು | PM Kisan 22nd Installment ₹2000 Not Credited Reasons

1.ಇ-ಕೆವೈಸಿ (e-KYC) ಪೂರ್ಣಗೊಳ್ಳದಿರುವುದು

22ನೇ ಕಂತಿಗೆ ಇ-ಕೆವೈಸಿ ಕಡ್ಡಾಯ(E-KYC mandatory for 22nd installment)ವಾಗಿದೆ. ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿಲ್ಲದಿದ್ದರೆ, ಹಣ ಖಾತೆಗೆ ಜಮೆಯಾಗುವುದಿಲ್ಲ.

2.ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದಿರುವುದು

ಡಿಬಿಟಿ (DBT – Direct Benefit Transfer) ಮೂಲಕ ಹಣ ವರ್ಗಾವಣೆ(Money transfer)ಯಾಗಬೇಕಾದರೆ, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಲೇಬೇಕು. ಲಿಂಕ್ ಆಗಿಲ್ಲದಿದ್ದರೆ, ಹಣ ವರ್ಗಾವಣೆ ಪ್ರಕ್ರಿಯೆ ವಿಫಲವಾಗುತ್ತದೆ.

3.ಬ್ಯಾಂಕ್ ಖಾತೆಯ ಹೆಸರು ಮತ್ತು ಪಿಎಂ ಕಿಸಾನ್ ಪೋರ್ಟಲ್ ಹೆಸರು ಹೊಂದಾಣಿಕೆಯಾಗದಿರುವುದು

ನಿಮ್ಮ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನಮೂದಾಗಿರುವ ಹೆಸರು ಮತ್ತು ಬ್ಯಾಂಕ್ ಪಾಸ್‌ಬುಕ್‌ನಲ್ಲಿರುವ ಹೆಸರು ಒಂದೇ ಆಗಿರಬೇಕು. ಸಣ್ಣ ವ್ಯತ್ಯಾಸ (ಉದಾ: ಶಿವಣ್ಣ – ಶಿವಕುಮಾರ್, ವೆಂಕಟೇಶ್ – ವೆಂಕಟೇಶಪ್ಪ) ಇದ್ದರೂ ಪಾವತಿ ವಿಫಲವಾಗಬಹುದು.

4.ತಪ್ಪಾದ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ ಸಂಖ್ಯೆ

ನಿಮ್ಮ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಹಳೆಯ, ಮುಚ್ಚಿದ ಅಥವಾ ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆ ನಮೂದಾಗಿದ್ದರೆ, ಹಣ ಆ ಖಾತೆಗೆ ಹೋಗಿ ವಾಪಸ್ ಬರುತ್ತದೆ.

5.ಜಾಮೀನು ಅಥವಾ ಸಾಲ ಬಾಕಿ ಇರುವ ಖಾತೆ

ಕೆಲವು ಸಂದರ್ಭಗಳಲ್ಲಿ, ರೈತರು ಸಾಲ ಪಡೆದಿದ್ದರೆ ಅಥವಾ ಜಮೀನು ಅಡಮಾನ ಇಟ್ಟಿದ್ದರೆ, ಆ ಬ್ಯಾಂಕ್ ಖಾತೆಯಿಂದ ಹಣವನ್ನು ಸಾಲ ತೀರಿಸಲು ಕಡಿತಗೊಳಿಸಬಹುದು. ಹೀಗಾಗಿ ನಿಮ್ಮ ಖಾತೆಗೆ ಹಣ ಬಂದರೂ, ನಿಮಗೆ ಮೊತ್ತ ಸಿಗದೆ ಇರಬಹುದು.

6.ಮೊಬೈಲ್ ನಂಬರ್ ಆಧಾರ್ ಜೊತೆ ನೋಂದಾಯಿತವಾಗಿಲ್ಲದಿರುವುದು

ಒಟಿಪಿ ಆಧಾರಿತ ಇ-ಕೆವೈಸಿ ಮಾಡಲು ಸಾಧ್ಯವಾಗದೆ ಇರಬಹುದು. ಅಲ್ಲದೆ, ಪಿಎಂ ಕಿಸಾನ್ ಪೋರ್ಟಲ್‌(PM Kisan Portal)ನಲ್ಲಿ ನೋಂದಾಯಿತ ಮೊಬೈಲ್ ನಂಬರ್ ಆಧಾರ್ ಜೊತೆ ಲಿಂಕ್ ಆಗಿಲ್ಲದಿದ್ದರೆ, ಭವಿಷ್ಯದ ನವೀಕರಣಗಳು ಮತ್ತು ಸೂಚನೆಗಳು ನಿಮಗೆ ತಲುಪದೇ ಹೋಗಬಹುದು.

7.ಭೂಮಿ ದಾಖಲೆಗಳಲ್ಲಿ ತಪ್ಪು (Land Record Discrepancy)

ನಿಮ್ಮ ಭೂಮಿ ದಾಖಲೆಗಳು (ಆರ್ಟಿಸಿ / ಪಹಣಿ) ಸರಿಯಾಗಿಲ್ಲದಿದ್ದರೆ ಅಥವಾ ನಿಮ್ಮ ಹೆಸರು ಭೂಮಿ ದಾಖಲೆಯಲ್ಲಿ ಇಲ್ಲದಿದ್ದರೆ, ನೀವು ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಬಹುದು.

8.ಒಂದಕ್ಕಿಂತ ಹೆಚ್ಚು ಖಾತೆಗಳು (Duplicate Accounts)

ಒಬ್ಬ ರೈತನಿಗೆ ಒಂದೇ ಖಾತೆಯಡಿ ಹಣ ನೀಡಬೇಕು. ನಿಮ್ಮ ಹೆಸರಿನಲ್ಲಿ ಎರಡು ಪಿಎಂ ಕಿಸಾನ್ ಖಾತೆಗಳಿದ್ದರೆ, ಎರಡೂ ಖಾತೆಗಳಿಗೆ ಹಣ ಸ್ಥಗಿತಗೊಳ್ಳಬಹುದು ಅಥವಾ ಒಂದು ಖಾತೆಗೆ ಮಾತ್ರ ಹಣ ಬರಬಹುದು.

9.ಆಧಾರ್ ಸೀಡಿಂಗ್ (Aadhaar Seeding) ಸರಿಯಾಗಿ ಆಗದಿರುವುದು

ಕೆಲವೊಮ್ಮೆ ಬ್ಯಾಂಕ್‌ನಲ್ಲಿ ಆಧಾರ್ ಲಿಂಕ್ ಆಗಿದ್ದರೂ, ಅದು ಪಿಎಂ ಕಿಸಾನ್ ಪೋರ್ಟಲ್‌ಗೆ ಪ್ರತಿಫಲಿಸದೇ ಇರಬಹುದು.

PM Kisan 22ನೇ ಕಂತು ಪಡೆಯಲು ತಕ್ಷಣ ಮಾಡಬೇಕಾದ ಕೆಲಸಗಳು | Immediate Steps to Claim PM Kisan 22nd Installment

1.ಇ-ಕೆವೈಸಿ (eKYC) ಪೂರ್ಣಗೊಳಿಸಿ ತಕ್ಷಣವೇ

PM Kisan ಯೋಜನೆ(PM Kisan Scheme)ಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಇ-ಕೆವೈಸಿ ಮಾಡಿಕೊಳ್ಳಬಹುದು.

ನಿಮಗೆ ಆನ್‌ಲೈನ್ ಪ್ರಕ್ರಿಯೆ ತುಂಬಾ ಕಷ್ಟವೆನಿಸಿದರೆ, ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ನೀಡಿ ನಿಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

2.ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ (Aadhaar Seeding)

ಸರ್ಕಾರದಿಂದ ಬರುವ ಎಲ್ಲಾ ಹಣವೂ (DBT) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತೆ ಆಧಾರ್ ಸೀಡಿಂಗ್ ಆಗಿರಲೇಬೇಕು.

ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಆಧಾರ್ ಸೀಡಿಂಗ್ ಫಾರ್ಮ್ ಭರ್ತಿ ಮಾಡಿ ಆಧಾರ್ ಸೀಡಿಂಗ್ ಮಾಡಿಸಿ

3.ಭೂಮಿ ದಾಖಲೆಗಳು ಪರಿಶೀಲಿಸಿ?

PM Kisan ಯೋಜನೆಯು ಭೂಮಿ ಹೊಂದಿರುವ ರೈತರಿಗೆ ಮಾತ್ರ ಅನ್ವಯಿಸುತ್ತದೆ. ಭೂಮಿ ವರ್ಗಾವಣೆ ಅಥವಾ ಭೂಮಿ ಖರೀದಿ ಅಥವಾ ಮಾರಾಟ ಮಾಡಿದಾಗ ಅಥವಾ ಹಂಚಿಕೆ ಮಾಡಿದಾಗ ದಾಖಲೆಗಳನ್ನು ತಾಲೂಕು ಕಚೇರಿಯಲ್ಲಿ ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಬೇಕು

4.ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ?

ನಿಮ್ಮ PM Kisan ಪ್ರೊಫೈಲ್‌ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಯು ನಿಮ್ಮ ಬಳಕೆಯಲ್ಲಿರುವ ಸಕ್ರಿಯ ಸಂಖ್ಯೆಯಾಗಿರಬೇಕು. ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಅದನ್ನು PM Kisan ಪೋರ್ಟಲ್ ಮೂಲಕ ಅಥವಾ CSC ಕೇಂದ್ರದ ಮೂಲಕ ಅಪ್ಡೇಟ್ ಮಾಡಿಸಿ.

PM Kisan Beneficiary List ನಲ್ಲಿ ನಿಮ್ಮ ಹೆಸರು ಹೇಗೆ ಪರಿಶೀಲಿಸಬಹುದು? | How to Check Your Name in PM Kisan Beneficiary List

ಹೆಸರು ಪರಿಶೀಲನೆ (Beneficiary List): pmkisan.gov.in ವೆಬ್‌ಸೈಟ್‌ನಲ್ಲಿ ‘Beneficiary List’ ವಿಭಾಗಕ್ಕೆ ಹೋಗಿ, ನಿಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಆಯ್ಕೆ ಮಾಡಿ. ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂದು ನೋಡಿ. ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ, ನಿಮ್ಮ ಸ್ಥಿತಿ (Status) ‘e-KYC completed’ ಎಂದು ತೋರಿಸಬೇಕು.

ಇ-ಕೆವೈಸಿ ಮುಗಿಸಲು ಕೇಂದ್ರ ಸರ್ಕಾರದಿಂದ ರೈತರಿಗೆ ಪ್ರಮುಖ ಸೂಚನೆ | Government Instructions for Farmers to Complete e-KYC

ಪಿಎಂ-ಕಿಸಾನ್ ಯೋಜನೆಯ 22ನೇ ಕಂತಿನ ₹18,640 ಕೋಟಿ ಹಣವನ್ನು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಮಾ. 13 ರಂದು ಬಿಡುಗಡೆ ಮಾಡಲಿದ್ದಾರೆ. ಯೋಜನೆಯ ಲಾಭ ಪಡೆಯಲು ರೈತರು ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಗುವಾಹಟಿಯಿಂದ ಡಿಜಿಟಲ್ ಮೂಲಕ 9.32 ಕೋಟಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ರೈತರು ಮನೆಯಿಂದಲೇ ಫೇಸ್ ಅಥೆಂಟಿಕೇಶನ್ ಆ್ಯಪ್ ಅಥವಾ ಕಿಸಾನ್-ಇ-ಮಿತ್ರ ಚಾಟ್‌ಬಾಟ್ ಬಳಸಿ ವಿವರ ಪರಿಶೀಲಿಸಿಕೊಳ್ಳಬಹುದು.

Conclusion – ಪಿಎಂ ಕಿಸಾನ್ eKYC

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತು(Pradhan Mantri Kisan Samman Nidhi Yojana 22nd installment) ರೈತರ ಬ್ಯಾಂಕ್ ಖಾತೆ ಇಂದು ಬರುತ್ತೆ. ಆದರೆ, ಆ ಹಣ(money) ನಿಮ್ಮ ಖಾತೆ ಸೇರಬೇಕಾದರೆ, ಇ-ಕೆವೈಸಿ ಅಡಚಣೆಯಾಗದಂತೆ ನೋಡಿಕೊಳ್ಳಿ. ಸರ್ಕಾರವು ಪಾರದರ್ಶಕತೆಗೆ ಒತ್ತು ನೀಡಿರುವ ಈ ಹಂತದಲ್ಲಿ, ಪಿಎಂ ಕಿಸಾನ್ ಇ-ಕೆವೈಸಿ ಕಡ್ಡಾಯವಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಪ್ರಯೋಜನ ವಂಚಿತರಾಗಬೇಕಾಗುತ್ತದೆ. ಆದ್ದರಿಂದ, ತಡಮಾಡದೆ, ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಿ ಮತ್ತು 22ನೇ ಕಂತಿಗೆ ಸಿದ್ಧರಾಗಿ.

Back To Home Page: Click here

FAQ – ಪಿಎಂ ಕಿಸಾನ್ e-KYC 22ನೇ ಕಂತು | PM Kisan e-KYC 22nd Installment

PM Kisan 22ನೇ ಕಂತು ಯಾವಾಗ ಬಿಡುಗಡೆಯಾಗಲಿದೆ?

ಕೇಂದ್ರ ಸರ್ಕಾರವು 13 ಮಾರ್ಚ್ 2026 ರಂದು 22ನೇ ಕಂತಿನ ₹2000/- ಹಣ ಅರ್ಹ ರೈತರ ಖಾತೆಗಳಿಗೆ ಜಮೆ ಮಾಡಲಿದೆ. ವರ್ಷಕ್ಕೆ 6,000 ರೂ. 3 ಸಮಾನ ಕಂತುಗಳಾಗಿ (2,000 ರೂ. ಪ್ರತಿ ಕಂತು) ಲಭ್ಯ.

e-KYC ಏಕೆ ಕಡ್ಡಾಯವಾಗಿದೆ?

e-KYC (Electronic Know Your Customer) ಮೂಲಕ ರೈತರ ಗುರುತನ್ನು ಡಿಜಿಟಲ್ ಆಗಿ ಪರಿಶೀಲಿಸಲಾಗುತ್ತದೆ. ಇದು:
ನಕಲಿ ಖಾತೆ ತಡೆಯಲು
ನಿಜವಾದ ರೈತರಿಗೆ ಮಾತ್ರ ಹಣ ಪಾವತಿ ಮಾಡಲು
ಹೆಸರಿನಲ್ಲಿ ಬೇರೆ ಯಾರೂ ಹಣ ಪಡೆಯದಂತೆ ನೋಡಿಕೊಳ್ಳಲು ಸಹಾಯಕ

e-KYC ಮಾಡದಿದ್ದರೆ ಏನಾಗುತ್ತದೆ?

e-KYC ಪೂರ್ಣಗೊಂಡಿಲ್ಲದಿದ್ದರೆ 22ನೇ ಕಂತಿನ ಹಣ ನಿಮ್ಮ ಖಾತೆಗೆ ಬರುವುದಿಲ್ಲ.

ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಮಾಡಬೇಕಾದ ಅಗತ್ಯವೇ?

ಹೌದು, DBT ಮೂಲಕ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ. ಲಿಂಕ್ ಇಲ್ಲದಿದ್ದರೆ ಹಣ ವರ್ಗಾವಣೆಯಾಗುವುದಿಲ್ಲ.

ನಾನು ಮನೆಯಿಂದ e-KYC ಮಾಡಿಕೊಳ್ಳಬಹುದು?

ಹೌದು, OTP ಆಧಾರಿತ e-KYC ಮೂಲಕ ಮನೆಮನೆಯಿಂದಲೇ pmkisan.gov.in ಅಥವಾ PM Kisan App ಮೂಲಕ ಮಾಡಬಹುದು.

Leave a Comment