ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮುಹೂರ್ತ ಫಿಕ್ಸ್? ಮೊಬೈಲ್‌ನಲ್ಲಿ ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ! ಲೇಟೆಸ್ಟ್ ಅಪ್ಡೇಟ್

Spread the love

Karnataka 2nd PUC Results 2026 Date Time Live Updates:ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ(Second PUC exam Results 2026)ಯನ್ನು ಬರೆದು ಪಲಿತಾಂಶ ಪ್ರಕಟಣೆಗಾಗಿ ಕಾಯುತ್ತಿದ್ದೀರಾ.? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್(good news).

ಕರ್ನಾಟಕ 12ನೇ ತರಗತಿಯ ಫಲಿತಾಂಶ(Karnataka 2nd PUC Results 2026)ಕ್ಕಾಗಿ ಈಗ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಯಾವಾಗ ಬರುತ್ತೆ ಅಂತ ತುಂಬಾ ಕಾಯುತ್ತಿದ್ದಾರೆ ಹಾಗೆ ಫಲಿತಾಂಶ ವಿದ್ಯಾರ್ಥಿಗಳಲ್ಲದೆ ಅಲ್ಲದೆ ಪೋಷಕರ ಸಹ ಮಕ್ಕಳ ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತೆ ಎದುರು ನೋಡುತ್ತಿದ್ದಾರೆ ಇದೀಗ ಫಲಿತಾಂಶವನ್ನು ಈ ದಿನಾಂಕದಂದು ಸೆಕೆಂಡ್ ಪಿಯುಸಿ ಫಲಿತಾಂಶ ಪ್ರಕಟ(Second PUC results announced) ಮಾಡಲಾಗುತ್ತದೆ, 2nd PUC ಫಲಿತಾಂಶ ದಿನಾಂಕ(2nd PUC Result Date) ಯಾವಾಗ?, 12ನೇ ತರಗತಿಯ ಪರೀಕ್ಷೆ ಫಲಿತಾಂಶ ಚೆಕ್ ಮಾಡುವುದು ಹೇಗೆ, ಪರೀಕ್ಷೆ ಫಲಿತಾಂಶ ಚೆಕ್(Exam Result Check) ಮಾಡಲು ಅಧಿಕೃತ ವೆಬ್ಸೈಟ್ ಯಾವುದು? ಎಂಬ ಎಲ್ಲಾ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ

ಪ್ರತಿ ವರ್ಷ ಸುಮಾರು 7 ರಿಂದ 8 ಲಕ್ಷ ವಿದ್ಯಾರ್ಥಿಗಳು ಈ ನಿರ್ಣಾಯಕ ಪರೀಕ್ಷೆಗಳನ್ನು ಬರೆದಿದ್ದಾರೆ.

Table of Contents

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026 | Karnataka 2nd PUC Results 2026 Date Time Live Updates

Karnataka 2nd PUC Results 2026 Date Time Live Updates:ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮುಹೂರ್ತ ಫಿಕ್ಸ್? ಮೊಬೈಲ್‌ನಲ್ಲಿ ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ! ಲೇಟೆಸ್ಟ್ ಅಪ್ಡೇಟ್ Free

ಫೆಬ್ರವರಿ 28 2026 ರಿಂದ ಮಾರ್ಚ್ 17 2026 ರವರೆಗೆ ರಾಜ್ಯದಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆಯು ಪೂರ್ಣಗೊಂಡಿವೆ. ಈ ಬಾರಿ ಸುಮಾರು 7,10,350 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟಾರೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ವಿಭಾಗದ ಉನ್ನತ ಮೂಲಗಳ ಪ್ರಕಾರ, ಮೌಲ್ಯಮಾಪನ ಕಾರ್ಯ ಈಗಾಗಲೇ ಮುಗಿದಿದ್ದು, ಫಲಿತಾಂಶ ಪ್ರಕಟಣೆಗಾಗಿ ಅಗತ್ಯ ಕ್ರಮಗಳು ವೇಗವಾಗಿ ನಡೆಯುತ್ತಿವೆ. ಈ ಬಾರಿ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 9, 2026 ರಂದು ಉಪಚುನಾವಣೆ ನಡೆಯುತ್ತಿದೆ. ಸಾಮಾನ್ಯವಾಗಿ ರಿಸಲ್ಟ್ ಪ್ರಕಟಿಸುವಾಗ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಚಿವರು ಭಾಗವಹಿಸುವಂತಿಲ್ಲ. ಒಂದು ವೇಳೆ ಅಧಿಕಾರಿಗಳೇ ರಿಸಲ್ಟ್ ಅನೌನ್ಸ್ ಮಾಡಬಹುದಾ? ಅಥವಾ ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಬೇಕಾ? ಎಂಬ ಚರ್ಚೆ ಈಗ ಪರೀಕ್ಷಾ ಮಂಡಳಿಯಲ್ಲಿ ನಡೆಯುತ್ತಿದೆ.

ಹಿಂದಿನ ವರ್ಷಗಳ ಫಲಿತಾಂಶ ದಿನಾಂಕ ನೋಡುವುದಾದರೆ, ಫಲಿತಾಂಶಗಳು ಸಾಮಾನ್ಯವಾಗಿ ಏಪ್ರಿಲ್ ಎರಡನೇ ಅಥವಾ ಮೂರನೇ ವಾರದಲ್ಲಿ ಪ್ರಕಟವಾಗುತ್ತಿದ್ದವು. ಆದರೆ ಈ ಬಾರಿ ಮೌಲ್ಯಮಾಪನ ಬೇಗ ಮುಕ್ತಾಯವಾಗಿರುವತ ಹಿನ್ನೆಲೆಯಲ್ಲಿ, 2nd PUC Result 2026 ಏಪ್ರಿಲ್ 7 ಅಥವಾ 8ರಂದು ಪ್ರಕಟವಾಗುವ ಸಾಧ್ಯತೆ ಇದೆ. ಪರೀಕ್ಷಾ ಮಂಡಳಿಯು ಶೀಘ್ರದಲ್ಲೇ ಪತ್ರಿಕಾಗೋಷ್ಠಿಯನ್ನು ಕರೆದು ನಿಖರ ದಿನಾಂಕ ಮತ್ತು ಸಮಯವನ್ನು ಪ್ರಕಟಿಸುವ ನಿರೀಕ್ಷೆಯಿದೆ.

Karnataka 2nd PUC Result 2026 Update | ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2026 ದಿನಾಂಕ?

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 7 ಅಥವಾ 8ರಂದು ಪ್ರಕಟವಾಗುವ ಸಾಧ್ಯತೆ ಇದೆ

ದ್ವಿತೀಯ ಪಿಯುಸಿ ಹಿಂದಿನ ವರ್ಷಗಳ ಫಲಿತಾಂಶ ದಿನಾಂಕ | 2nd PUC Result 2026 Karnataka date

ಹಿಂದಿನ ವರ್ಷಗಳ ಫಲಿತಾಂಶ ದಿನಾಂಕಗಳು:

  • 2025 ಏಪ್ರಿಲ್ 15 ಫಲಿತಾಂಶ ಪ್ರಕಟವಾಗಿತ್ತು
  • 2024 ಏಪ್ರಿಲ್ 10 ಫಲಿತಾಂಶ ಪ್ರಕಟವಾಗಿತ್ತು
  • 2023 ಏಪ್ರಿಲ್ 21 ಫಲಿತಾಂಶ ಪ್ರಕಟವಾಗಿತ್ತು
  • 2022 ಏಪ್ರಿಲ್ 18 ಫಲಿತಾಂಶ ಪ್ರಕಟವಾಗಿತ್ತು

2026ರಲ್ಲಿ ಏಪ್ರಿಲ್ 7 ಅಥವಾ 8ರಂದು ಫಲಿತಾಂಶ ಪ್ರಕಟವಾದರೆ, ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಬೇಗ ಫಲಿತಾಂಶ ಪ್ರಕಟಣೆಯಾಗಲಿದೆ. ಇದು ವಿದ್ಯಾರ್ಥಿಗಳಿಗೆ KCET, NEET ಮುಂತಾದ ಎಲ್ಲಾ ಪ್ರವೇಶ ಪರೀಕ್ಷೆಗಳ ತಯಾರಿಗೆ ಹೆಚ್ಚುವರಿ ಸಮಯವನ್ನು ಸಿಗುತ್ತೆ.

ಆನ್‌ಲೈನ್‌ನಲ್ಲಿ 2nd ಪಿಯುಸಿ ರಿಸಲ್ಟ್ ಚೆಕ್ ಮಾಡುವುದು ಹೇಗೆ? | Karnataka 2nd PUC Result 2026 Check Online, Direct Link, Official Website & Step-by-Step Guide

ಅಧಿಕೃತ ವೆಬ್ಸೈಟ್ ಮೂಲಕ ಫಲಿತಾಂಶ ಪ್ರಕಟವಾದಾಗ ಟ್ರಾಫಿಕ್ ಹೆಚ್ಚಾಗಿ ವೆಬ್ಸೈಟ್ ಕ್ರ್ಯಾಶ್ ತುಂಬಾ ಆಗಬಹುದು ಈ ಕೆಳಗೆ ನೀಡಿರುವ ಎರಡು ಲಿಂಕ್ ಮೂಲಕ ಚೆಕ್ ಮಾಡಿ.

  • ಮೊದಲು ಸರ್ಕಾರದ KSEAB ಅಧಿಕೃತ ಪೋರ್ಟಲ್  kseab.karnataka.gov.in ಅಥವಾ karresults.nic.in ಒಂದನ್ನು ವೆಬ್ಸೈಟ್ ಗೆ ಭೇಟಿ ಮಾಡಿ.
  • ನಂತರ ಮುಖಪುಟದಲ್ಲಿ “2nd PUC Result 2026” ಅಥವಾ “ದ್ವಿತೀಯ ಪಿಯುಸಿ ಫಲಿತಾಂಶ 2026” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹಾಲ್ ಟಿಕೆಟ್ ನಲ್ಲಿರುವ ರಿಜಿಸ್ಟರ್ ಸಂಖ್ಯೆ ನಮೂದಿಸಿ ಜನ್ಮದಿನಾಂಕ (DD/MM/YYYY) ನಮೂದಿಸಿ ಸ್ಟ್ರೀಮ್ (Science / Commerce / Arts) ಆಯ್ಕೆ ಮಾಡಿ
  • ನಂತರ “Submit” ಅಥವಾ “Get Result” ಬಟನ್ ಒತ್ತಿ.
  • ನಿಮ್ಮ 2nd PUC ಪರೀಕ್ಷೆ ಫಲಿತಾಂಶ ನಿಮ್ಮ ಸ್ಕ್ರೀನ್ ಮೇಲೆ ಎಲ್ಲಾ ವಿಷಯಗಳ ಅಂಕಗಳು, ಒಟ್ಟು ಅಂಕಗಳು, ಶೇಕಡಾ ಮತ್ತು ಪಾಸ್/ಫೇಲ್ ಸ್ಥಿತಿಯನ್ನು ನೋಡಬಹುದು
  • “Download” ಅಥವಾ “Print” ಬಟನ್ ಒತ್ತಿ. PDF ಪ್ರತಿಯನ್ನು ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಳ್ಳಿ.
  1. ವೆಬ್ಸೈಟ್ ತೆರೆಯುತ್ತಿಲ್ಲ 10-15 ನಿಮಿಷ ನಂತರ ಪ್ರಯತ್ನಿಸಿ. ಮೊದಲ ಗಂಟೆಯಲ್ಲಿ ಹೆಚ್ಚಿನ ಟ್ರಾಫಿಕ್ ಇರುತ್ತದೆ.
  2. ರಿಜಿಸ್ಟರ್ ಸಂಖ್ಯೆ ಮರೆತಿದೆ ನಿಮ್ಮ ಹಾಲ್ ಟಿಕೆಟ್ ಅಥವಾ ಕಾಲೇಜನ್ನು ಸಂಪರ್ಕಿಸಿ.
  3. ತಪ್ಪಾದ ಸ್ಟ್ರೀಮ್ ಆಯ್ಕೆ ಸರಿಯಾದ ಸ್ಟ್ರೀಮ್ (Science/Commerce/Arts) ಆಯ್ಕೆ ಮಾಡಿ.
  4. “Invalid Details” ಎರರ್ ರಿಜಿಸ್ಟರ್ ಸಂಖ್ಯೆ ಮತ್ತು DOB ಸರಿಯಾಗಿದೆಯೇ ಎಂದು ಪರಿಶೀಲಿಸಿ.

ಮೊಬೈಲ್ SMS ಮೂಲಕ ದ್ವಿತೀಯ ಪಿಯುಸಿ ರಿಸಲ್ಟ್ ಚೆಕ್ ಮಾಡುವುದು ಹೇಗೆ 2026? | 2nd PUC Result 2026 Karnataka SMS Method, Registration Number & Live Result Updates

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ಅಥವಾ ನಿಧಾನ ಇಂಟರ್ನೆಟ್ ಸಂಪರ್ಕ ಹೊಂದಿರುವವರಿಗೆ, ಕರ್ನಾಟಕ ಮಂಡಳಿಯು SMS ಸೇವೆ ಒದಗಿಸುತ್ತದೆ. ಇಂಟರ್ನೆಟ್ ಇಲ್ಲದೆಯೇ ನೇರವಾಗಿ ಮೊಬೈಲ್‌ನಲ್ಲಿ ಫಲಿತಾಂಶ ಪಡೆಯಬಹುದು.

ಈ ಕೆಳಗಿನ ಫಾರ್ಮ್ಯಾಟ್ನಲ್ಲಿ SMS ಟೈಪ್ ಮಾಡಿ:KAR12 <ಸ್ಪೇಸ್> ನಿಮ್ಮ ನೋಂದಣಿ ಸಂಖ್ಯೆ ಹಾಕಿ ಇದನ್ನು 56263 ಅಥವಾ 57777 ಗೆ ಕಳುಹಿಸಿ.

ಉದಾಹರಣೆ: ನಿಮ್ಮ ನೋಂದಣಿ ಸಂಖ್ಯೆ 123456 ಆಗಿದ್ದರೆ, “KAR12 123456” ಎಂದು ಟೈಪ್ ಮಾಡಿ 56263 ಗೆ ಕಳುಹಿಸಿ. ನೀವು ವಿಷಯವಾರು ಅಂಕಗಳೊಂದಿಗೆ ಸಂದೇಶವನ್ನು ಸ್ವೀಕರಿಸುತ್ತೀರಿ.

ಡಿಜಿಲಾಕರ್‌ನಲ್ಲಿ ದ್ವಿತೀಯ ಪಿಯುಸಿ (2nd PUC) ಫಲಿತಾಂಶ ಚೆಕ್ ಮಾಡುವುದು ಹೇಗೆ? | Karnataka 2nd PUC Result 2026 DigiLocker Method, Marksheet Download & Step-by-Step Guide

ನೀವು ಯಾವುದೇ ಸೈಬರ್ ಸೆಂಟರ್‌ಗೆ ಹೋಗದೆ, ನೀವು ಮನೇಲಿ ಕುಳಿತು ಮೊಬೈಲ್‌ನಲ್ಲಿ ಈ ಸಿಂಪಲ್ ಸ್ಟೆಪ್ಸ್ ಮಾಡಿ ನಿಮ್ಮ ಒರಿಜಿನಲ್ ಅಂಕಪಟ್ಟಿ ಪಡೆಯಬಹುದು ಮತ್ತು ರಿಸಲ್ಟ್ ನೋಡಬಹುದು:

  1. ಮೊದಲು ಗೂಗಲ್ ಪ್ಲೇ-ಸ್ಟೋರ್ (Play Store) ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ ಅಧಿಕೃತ ‘DigiLocker’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
  2. ನಂತರ ಆ್ಯಪ್ ಓಪನ್ ಮಾಡಿಕೊಡು ನಿಮ್ಮ ಆಧಾರ್ ಕಾರ್ಡ್ (Aadhar Card) ನಂಬರ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಕಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ.
  3. ನಿಮ್ಮ ಲಾಗಿನ್ ಆದ ಮೇಲೆ ಆಪ್ ನಲ್ಲಿ ‘Search’ ಬಟನ್ ಒತ್ತಿ, KSEAB ಅಥವಾ Karnataka School Examination and Assessment Board ಎಂದು ಟೈಪ್ ಮಾಡಿ ಹುಡುಕಿ.
  4. ನಂತರ ಅಲ್ಲಿ ‘Class 12 Marksheet’ ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ, ನಿಮ್ಮ ಪಿಯುಸಿ ರಿಜಿಸ್ಟರ್ ನಂಬರ್ ಮತ್ತು ವರ್ಷ (2026) ನಮೂದಿಸಿ ‘Get Document’ ಕ್ಲಿಕ್ ಮಾಡಿ.
  5. ತಕ್ಷಣವೇ ನಿಮ್ಮ ಅಧಿಕೃತ ದ್ವಿತೀಯ ಪಿಯುಸಿ ಅಂಕಪಟ್ಟಿ ಸ್ಕ್ರೀನ್ ಮೇಲೆ ಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು!

ಆನ್‌ಲೈನ್ ಮಾರ್ಗಗಳು ಕಷ್ಟವಾದರೆ ನಿಮ್ಮ ಕಾಲೇಜು ಸಹಾಯ ಹೇಗೆ ಪಡೆಯುವುದು? | 2nd PUC Result 2026 Karnataka College Support, Result Check & Marks Card Assistance

  • ನಿಮ್ಮ ಪಿಯು ಕಾಲೇಜಿಗೆ ನೇರವಾಗಿ ಭೇಟಿ ನೀಡಿ.
  • ನಂತರ ಕಾಲೇಜಿನ ನೋಟಿಸ್ ಬೋರ್ಡ್ ಅನ್ನು ಪರಿಶೀಲಿಸಿ. ಹೆಚ್ಚಿನ ಕಾಲೇಜುಗಳು ಫಲಿತಾಂಶದ ಪ್ರತಿಯನ್ನು ಕಾಣುತ್ತೆ.
  • ನಿಮ್ಮ ಕ್ಲಾಸ್ ಟೀಚರ್ ಅಥವಾ ಪ್ರಿನ್ಸಿಪಾಲ್ ಅವರನ್ನು ಸಂಪರ್ಕಿಸಿ.
  • ಅವರು ನಿಮ್ಮ ರಿಜಿಸ್ಟರ್ ಸಂಖ್ಯೆಯ ಮೂಲಕ ಫಲಿತಾಂಶವನ್ನು ತೋರಿಸುತ್ತಾರೆ.
  • ಅಗತ್ಯವಿದ್ದರೆ, ಕಾಲೇಜಿನಿಂದ ದೃಢೀಕರಿಸಿದ ಪ್ರತಿಯನ್ನು ಪಡೆಯಿರಿ.

ಸೂಚನೆ: ಮೂಲ ಮಾರ್ಕ್ಸ್ ಕಾರ್ಡ್ ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ 2-3 ವಾರಗಳ ನಂತರ ಕಾಲೇಜಿಗೆ ಬರುತ್ತದೆ.

UMANG ಅಪ್ಲಿಕೇಶನ್ ಮೂಲಕ 2nd PUC Result 2026 ಚೆಕ್ ಮಾಡುವುದು ಹೇಗೆ? | Karnataka 2nd PUC Result UMANG App Steps, Login & Download Guide

  • UMANG ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
  • “ಕರ್ನಾಟಕ” ರಾಜ್ಯವನ್ನು ಆಯ್ಕೆ ಮಾಡಿ.
  • “ಶಿಕ್ಷಣ” (Education) ವಿಭಾಗಕ್ಕೆ ಹೋಗಿ.
  • “KSEAB 2nd PUC Result 2026” ಅನ್ನು ಹುಡುಕಿ.
  • ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ.
  • ಫಲಿತಾಂಶ ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ.

ತೀರ್ಮಾನ Conclusion – Karnataka puc results 2026 date

ಒಟ್ಟಾರೆಯಾಗಿ ನೋಡಿದರೆ, ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಫಲಿತಾಂಶ 2026 ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಹಂತವಾಗಿದೆ. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆ ಬೇಗ ಪೂರ್ಣಗೊಂಡಿರುವುದರಿಂದ, ಏಪ್ರಿಲ್ 7 ಅಥವಾ 8ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳು ಆತಂಕ ಪಡದೇ, ಶಾಂತವಾಗಿ ಅಧಿಕೃತ ವೆಬ್‌ಸೈಟ್, SMS, DigiLocker ಅಥವಾ UMANG ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪರಿಶೀಲಿಸಬಹುದು.

ಫಲಿತಾಂಶ ಬಂದ ನಂತರ ಮುಂದಿನ ಹಂತವಾದ ಉನ್ನತ ಶಿಕ್ಷಣ ಅಥವಾ ಪ್ರವೇಶ ಪರೀಕ್ಷೆಗಳ (KCET, NEET) ಕಡೆ ಗಮನ ಹರಿಸುವುದು ಮುಖ್ಯ.

Back To Home Page: Click here

FAQ – karnataka 2nd puc results 2026 date | ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಫಲಿತಾಂಶ 2026

2nd PUC Result 2026 ಯಾವಾಗ ಪ್ರಕಟವಾಗುತ್ತದೆ?

ನಿರೀಕ್ಷೆಯಂತೆ ಫಲಿತಾಂಶವು ಏಪ್ರಿಲ್ 7 ಅಥವಾ 8, 2026 ರಂದು ಪ್ರಕಟವಾಗುವ ಸಾಧ್ಯತೆ ಇದೆ. ಅಧಿಕೃತ ದಿನಾಂಕವನ್ನು ಮಂಡಳಿ ಶೀಘ್ರದಲ್ಲೇ ಘೋಷಿಸುತ್ತದೆ.

Karnataka 2nd PUC Result 2026 ಅನ್ನು ಹೇಗೆ ಚೆಕ್ ಮಾಡುವುದು?

ನೀವು ಫಲಿತಾಂಶವನ್ನು ಈ ಮಾರ್ಗಗಳಿಂದ ಚೆಕ್ ಮಾಡಬಹುದು:
ಅಧಿಕೃತ ವೆಬ್‌ಸೈಟ್ (karresults.nic.in)
SMS ಸೇವೆ
DigiLocker App
UMANG App

2nd PUC Result 2026 karnataka ಚೆಕ್ ಮಾಡಲು ಅಧಿಕೃತ ವೆಬ್‌ಸೈಟ್ ಯಾವುದು?

ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್‌ಗಳು:
kseab.karnataka.gov.in
karresults.nic.in

Leave a Comment