Gruhalakshmi Yojana 27th Installment: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ₹2000 ಹಣ ಬಿಡುಗಡೆ | ನಿಮ್ಮ ಖಾತೆಗೆ ಬಂತಾ? ಮೊಬೈಲ್‌ನಲ್ಲಿ ತಕ್ಷಣ ಹೀಗೆ ಚೆಕ್ ಮಾಡಿ

Spread the love

Gruhalakshmi Yojana 27th Installment:ಕರ್ನಾಟಕ ಸರ್ಕಾರ(Karnataka Government)ದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ (Gruhalakshmi Scheme) ಯ 27ನೇ ಕಂತಿನ ಹಣ ಜಮಾ(Gruhalakshmi Yojana 27th installment payment) ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ಲಕ್ಷಾಂತರ ಮಹಿಳಾ ಫಲಾನುಭವಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಈ 27ನೇ ಕಂತಿನ ಕಂತಿನ ಹಣವು ಈಗಾಗಲೇ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗುತ್ತಿದೆ. ನೀವು ಕೂಡ ಈ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ಮೊಬೈಲ್‌ನಲ್ಲೇ ಸುಲಭವಾಗಿ ಪರಿಶೀಲಿಸಬಹುದು.

ಈ ಲೇಖನದಲ್ಲಿ, ಗೃಹಲಕ್ಷ್ಮಿ 27ನೇ ಕಂತು (Gruhalakshmi 27th Installment Date), ಹಣ ಜಮಾ ಪ್ರಕ್ರಿಯೆ, ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ, ಮತ್ತು ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳ ಎಲ್ಲಾ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ

Table of Contents

ಗೃಹಲಕ್ಷ್ಮಿ ಯೋಜನೆ ಎಂದರೇನು? ಸಂಪೂರ್ಣ ಮಾಹಿತಿ (What is Gruhalakshmi Scheme?)

Gruhalakshmi Yojana 27th Installment: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ₹2000 ಹಣ ಬಿಡುಗಡೆ | ನಿಮ್ಮ ಖಾತೆಗೆ ಬಂತಾ? ಮೊಬೈಲ್‌ನಲ್ಲಿ ತಕ್ಷಣ ಹೀಗೆ ಚೆಕ್ ಮಾಡಿ Free

ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯು ಕರ್ನಾಟಕ ಸರ್ಕಾರಐದು ಗ್ಯಾರಂಟಿ ಯೋಜನೆ(Five Guarantee Scheme)ಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಮಹಿಳಾ ಮನೆಯ ಮುಖ್ಯಸ್ಥರಿಗೆ (Women Head of the Family) ತಿಂಗಳಿಗೆ ₹2000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಬಿಪಿಎಲ್ (BPL) ಮತ್ತು ಎಪಿಎಲ್ (APL) ಕಾರ್ಡ್ (card)ಹೊಂದಿರುವ ಅರ್ಹ ಮಹಿಳೆಯರಿಗೆ ಈ ಹಣ(money)ವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ (DBT) ಜಮಾ ಮಾಡಲಾಗುತ್ತದೆ. ಬಡ ಕುಟುಂಬಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಗೃಹಲಕ್ಷ್ಮಿ 27ನೇ ಕಂತು ಯಾವಾಗ ಬಿಡುಗಡೆ? ₹2000 ಹಣ ಜಮಾ ದಿನಾಂಕ (Gruhalakshmi 27th Installment Release Date & Status)

ಗೃಹಲಕ್ಷ್ಮಿ 27ನೇ ಕಂತಿನ ಹಣ(Gruhalakshmi Yojana 27th Installment money) ಜಮಾ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಹಂತ ಹಂತವಾಗಿ ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಈ ಹಣವು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಈ ಬಾರಿಯ 27ನೇ ಕಂತು(27th installment)ಮಾರ್ಚ್ ತಿಂಗಳ ವೇತನವಾಗಿದ್ದು, ಸಮಯಕ್ಕೆ ಸರಿಯಾಗಿ ವಿತರಣೆ ಮಾಡಲಾಗುತ್ತಿದೆ.

ಮೊಬೈಲ್‌ನಲ್ಲಿ ಗೃಹಲಕ್ಷ್ಮಿ ₹2000 ಜಮಾ ಆಗಿದೆಯೇ? | How to Check Gruhalakshmi Payment Status Online

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣ ಜಮಾ(Gruhalakshmi Yojana 27th Installment money) ಆಗಿದೆಯೇ ಎಂದು ತಿಳಿಯಲು ನೀವು ಈ ಕೆಳಗಿನ ಸುಲಭ ವಿಧಾನಗಳನ್ನು ಅನುಸರಿಸಬಹುದು. ಇದಕ್ಕಾಗಿ ನೀವು ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಫೋನ್ ಅನ್ನು ಬಳಸಬಹುದು.

ವಿಧಾನ 1: ಅಧಿಕೃತ ವೆಬ್‌ಸೈಟ್ ಮೂಲಕ ಗೃಹಲಕ್ಷ್ಮಿ ₹2000 ಸ್ಟೇಟಸ್ ಚೆಕ್ ಮಾಡುವ ವಿಧಾನ (Official Website)

  • ಮೊದಲು sevasindhu.karnataka.gov.in ವೆಬ್‌ಸೈಟ್ ಓಪನ್ ಮಾಡಿ.
  • ಮುಖಪುಟದಲ್ಲಿ “ಫಲಾನುಭವಿ ಸೇವೆಗಳು” (Beneficiary Services) ಆಯ್ಕೆ ಮಾಡಿ.
  • ನಂತರ “ಗೃಹಲಕ್ಷ್ಮಿ” ಯೋಜನೆಯ ಮೇಲೆ ಕ್ಲಿಕ್ ಮಾಡಿ.
  • ಫಲಾನುಭವಿ ಸ್ಥಿತಿ ಪರಿಶೀಲಿಸಿ” (Know Your Status) ಲಿಂಕ್ ಆಯ್ಕೆಮಾಡಿ.
  • ನಿಮ್ಮ ಆಧಾರ್ ಸಂಖ್ಯೆ (Aadhaar Number) ಅಥವಾ ಮನೆ ಸರ್ವೆ ನಂಬರ್ (Household Survey Number) ನಮೂದಿಸಿ.
  • ಪರದೆಯ ಮೇಲೆ ತೋರಿಸುವ ಕೋಡ್ ಅನ್ನು ನಮೂದಿಸಿ (Captcha) ಮತ್ತು “ಸರ್ಚ್” ಬಟನ್ ಒತ್ತಿರಿ.
  • ನಿಮ್ಮ ಮಾಹಿತಿ ಮತ್ತು ಇತ್ತೀಚಿನ ಕಂತಿನ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.

ವಿಧಾನ 2: DBT Karnataka ಮೊಬೈಲ್ ಆ್ಯಪ್ ಮೂಲಕ ಗೃಹಲಕ್ಷ್ಮಿ ₹2000 ಸ್ಟೇಟಸ್ ಚೆಕ್ ಮಾಡುವ ವಿಧಾನ (DBT Karnataka Mobile App)

  • ಮೊದಲು ನಿಮ್ಮ ಮೊಬೈಲ್ ಅಲ್ಲಿ ಪ್ಲೇ ಸ್ಟೋರ್ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ.
  • ಪ್ಲೇ ಸ್ಟೋರ್ ಟಾಪ್ ನಲ್ಲಿ ಸರ್ಚ್ ಬಾರ್ ನಲ್ಲಿ “DBT Karnataka” ಎಂದು ಸರ್ಚ್ ಮಾಡಿಕೊಳ್ಳಿ.
  • ನಂತರ DBT Karnataka ಅಧಿಕೃತ ಅಪ್ಲಿಕೇಶನ್ ಡೌನ್ಲೋಡ್ ಮಾಡಿ (ಸರ್ಕಾರದ ಲೋಗೋ ಇರುವ ಅಪ್ಲಿಕೇಶನ್ ಆಯ್ಕೆಮಾಡಿ).
  • ನಂತರ ಆ್ಯಪ್ ಓಪನ್ ಮಾಡಿ “ಚೆಕ್ ಮಾಡಬೇಕಾದವರ ಆಧಾರ್ ನಂಬರ್ ಹಾಕಿ ಮುಂದುವರೆಯಿರಿ” ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಚೆಕ್ ಮಾಡಬೇಕಾದವರ 12 ಅಂಕೆಯ ಆಧಾರ್ ಸಂಖ್ಯೆ ಹಾಕಿ.
  • ನಂತರ ಚೆಕ್ ಮಾಡಬೇಕಾದವರ ಆಧಾರ್‌ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್‌ಗೆ ಬಂದ OTP ಅಲ್ಲಿ ಹಾಕಿ.
  • ನಂತರ “ಮುಂದುವರೆಯಿರಿ” ಎಂಬುದರ ಮೇಲೆ ಕ್ಲಿಕ್ ಮಾಡಿ.
  • ನಂತರ ನಾಲ್ಕು ಅಂಕೆ ಇರುವ ಯಾವುದಾದರೂ ಸೀಕ್ರೆಟ್ ಕೋಡ್ (ಪಿನ್) ಕ್ರಿಯೇಟ್ ಮಾಡಿಕೊಳ್ಳಿ.
  • ನಂತರ “ಲಾಗಿನ್” ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಲಾಗಿನ್ ಆದ ನಂತರ, ಎಡ ಭಾಗದಲ್ಲಿ ಇರುವ ಮೂರು ಗೆರೆಯ (ಮೆನು) ಐಕಾನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಅಲ್ಲಿ “Payment status/ಗೃಹಲಕ್ಷ್ಮಿ ಪಾವತಿ ಸ್ಥಿತಿ” ಆಯ್ಕೆಯನ್ನು ಮಾಡಿಕೊಳ್ಳಿ.
  • ಈಗ ನಿಮಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಡುಗಡೆಯಾದ ಎಲ್ಲಾ ಹಣದ ಸಂಪೂರ್ಣ ವಿವರಗಳು ನಿಮಗೆ ಕಾಣಿಸುತ್ತವೆ.

ವಿಧಾನ 3: ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್‌ಬುಕ್ ಮೂಲಕ ಗೃಹಲಕ್ಷ್ಮಿ ₹2000 Payment Status ಚೆಕ್ ಮಾಡುವ ವಿಧಾನ (Payment Status Bank Passbook)

ನಿಮ್ಮ ಬ್ಯಾಂಕ್ ಪಾಸ್‌ಬುಕ್(Bank Passbook) ಅನ್ನು ಅಪ್‌ಡೇಟ್(update) ಮಾಡಿಸಿ ನಿಮ್ಮ ಖಾತೆಯ (Transaction History) ಪರಿಶೀಲಿಸಿ. “ಗೃಹಲಕ್ಷ್ಮಿ” ಅಥವಾ “DBT” ಹೆಸರಿನಲ್ಲಿ ₹2,000 ಜಮಾ ಆಗಿರುವುದನ್ನು ನೀವು ನೋಡಬಹುದು.

ವಿಧಾನ 4: ಗೃಹಲಕ್ಷ್ಮಿ ಹೆಲ್ಪ್‌ಲೈನ್ ಸಂಖ್ಯೆ ಮೂಲಕ ಪಾವತಿ ಸಮಸ್ಯೆಗಳಿಗೆ ಸಹಾಯ ಪಡೆಯುವುದು (Gruhalakshmi Payment Issues Helpline Number)

ಯಾವುದೇ ಸಮಸ್ಯೆಗಳಿದ್ದಲ್ಲಿ, ನೀವು ಗೃಹಲಕ್ಷ್ಮಿ ಹೆಲ್ಪ್‌ಲೈನ್(Helpline Number) ಸಂಖ್ಯೆಗೆ ಕರೆ ಮಾಡಬಹುದು. ಸಾಮಾನ್ಯವಾಗಿ ಈ ಯೋಜನೆಗಾಗಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ 1902 (ಅಥವಾ ಸ್ಥಳೀಯ ಸಂಪರ್ಕ ಸಾಧನ) ಅನ್ನು ಸರ್ಕಾರ ಪ್ರಕಟಿಸುತ್ತದೆ.

ಹಣ ಜಮಾ ಆಗದೇ ಇದ್ದರೆ ಏನು ಮಾಡಬೇಕು? | Gruhalakshmi Payment Not Received, ₹2000 Status Check

ಅನೇಕ ಬಾರಿ ತಾಂತ್ರಿಕ ಕಾರಣಗಳಿಂದ ಅಥವಾ ಮಾಹಿತಿ ಕೊರತೆಯಿಂದ ಕೆಲವು ಫಲಾನುಭವಿಗಳ ಖಾತೆಗೆ ಹಣ ಜಮಾ ಆಗದೇ ಇರಬಹುದು. ನಿಮ್ಮ ಖಾತೆಗೆ ಹಣ ಬಂದಿಲ್ಲದಿದ್ದರೆ, ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ:

  • ಬ್ಯಾಂಕ್ ಖಾತೆ ಸೀಡಿಂಗ್ (Bank Account Seeding): ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. DBT ಯೋಜನೆಗಳಿಗೆ ಇದು ಕಡ್ಡಾಯವಾಗಿದೆ.
  • ಆಧಾರ್ ಲಿಂಕ್ (Aadhaar Linking): ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಜೊತೆಗೆ, ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಆಧಾರ್ ಸರಿಯಾಗಿ ನಮೂದಾಗಿದೆಯೇ ಎಂದು ಪರಿಶೀಲಿಸಿ.
  • ಈ-ಕೇವೈಸಿ (e-KYC): ನಿಮ್ಮ ಗ್ರಾಮ ಒನ್ ಅಥವಾ ಬಿಬಿಎಂಪಿ ಕಚೇರಿಯಲ್ಲಿ ಈ-ಕೇವೈಸಿ(e-KYC) ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಹೆಸರು ಹೊಂದಾಣಿಕೆ (Name Match): ರೇಷನ್ ಕಾರ್ಡ್(Ration card), ಆಧಾರ್ ಕಾರ್ಡ್(Aadhaar card) ಮತ್ತು ಬ್ಯಾಂಕ್ ಖಾತೆ(Bank Account)ಯಲ್ಲಿರುವ ಹೆಸರು ಒಂದೇ ರೀತಿ ಇರಬೇಕು. ಸಣ್ಣ ವ್ಯತ್ಯಾಸವಿದ್ದರೂ ಹಣ ವರ್ಗಾವಣೆ(Money transfer)ಗೆ ತೊಂದರೆಯಾಗಬಹುದು.

ಫಲಾನುಭವಿಗಳಿಗೆ ಮುಖ್ಯ ಸೂಚನೆಗಳು | Important Guidelines for Gruhalakshmi Beneficiaries

ಯಾವುದೇ ಶುಲ್ಕವಿಲ್ಲ: ಗೃಹಲಕ್ಷ್ಮಿ ಯೋಜನೆಯ ಹಣ(Gruhalakshmi Yojana money)ವನ್ನು ಪಡೆಯಲು ಯಾವುದೇ ದಲ್ಲಾಳಿಗಳ ಬಳಿ ಹೋಗಬೇಡಿ. ಇದು ಸಂಪೂರ್ಣವಾಗಿ ಉಚಿತ ಸರ್ಕಾರಿ ಯೋಜನೆಯಾಗಿದೆ. ಯಾರಾದರೂ ಹಣ(amount) ಕೇಳಿದರೆ ಅದು ವಂಚನೆಯಾಗಿರುತ್ತದೆ.

ಮಾಹಿತಿ ಅಪ್‌ಡೇಟ್(Information update): ನಿಮ್ಮ ಮೊಬೈಲ್ ನಂಬರ್ ಬದಲಾಗಿದ್ದಲ್ಲಿ, ಅದನ್ನು ನಿಮ್ಮ ಬ್ಯಾಂಕ್ ಮತ್ತು ಆಧಾರ್‌ನಲ್ಲಿ ತಕ್ಷಣ ಅಪ್‌ಡೇಟ್ ಮಾಡಿಸಿ.

ತೀರ್ಮಾನ (Conclusion)

ಗೃಹಲಕ್ಷ್ಮಿ ಯೋಜನೆ(Gruhalakshmi Yojana)ಯು ಕರ್ನಾಟಕದ ಮಹಿಳೆಯರ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 27ನೇ ಕಂತಿನ ಹಣ(Gruhalakshmi Yojana 27th installment money) ಜಮಾ ಪ್ರಕ್ರಿಯೆ ಆರಂಭವಾಗಿದ್ದು, ಫಲಾನುಭವಿಗಳು ಮೇಲೆ ತಿಳಿಸಿದ ವಿಧಾನಗಳ ಮೂಲಕ ತಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಹಣ ಜಮಾ ಆಗುವಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ, ತಡಮಾಡದೆ ಸಂಬಂಧಪಟ್ಟ ಗ್ರಾಮ ಒನ್ / ಬಿಬಿಎಂಪಿ ಕಚೇರಿ ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಿ. ಸರ್ಕಾರದ ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಲು ನಿಮ್ಮ ದಾಖಲಾತಿಗಳನ್ನು ಅಪ್‌ಡೇಟ್ ಆಗಿರಿಸಿಕೊಳ್ಳಿ.

Back To Home Page: Click here

FAQ- Gruhalakshmi Yojana 27th Installment

ಗೃಹಲಕ್ಷ್ಮಿ 27ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?

ಗೃಹಲಕ್ಷ್ಮಿ 27ನೇ ಕಂತಿನ ಹಣ ಈಗಾಗಲೇ ಹಂತ ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಹಣ DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಎಷ್ಟು ಹಣ ಸಿಗುತ್ತದೆ?

ಈ ಯೋಜನೆಯಡಿ ಅರ್ಹ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ₹2000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದರೂ ಗೃಹಲಕ್ಷ್ಮಿ ಹಣ ಯಾಕೆ ಬರುತ್ತಿಲ್ಲ?

ಕೇವಲ ಆಧಾರ್ ಲಿಂಕ್ ಮಾಡಿರುವುದು ಸಾಕಾಗುವುದಿಲ್ಲ. ಸರ್ಕಾರದ DBT ಯೋಜನೆಗಳ ಹಣ ಬರಲು ನಿಮ್ಮ ಬ್ಯಾಂಕ್ ಖಾತೆಗೆ NPCI DBT Mapping (ಡಿಬಿಟಿ ಮ್ಯಾಪಿಂಗ್) ಆಗಿರಬೇಕು.
ಅದಕ್ಕಾಗಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ DBT active ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿದರೆ ತಕ್ಷಣ ಗೃಹಲಕ್ಷ್ಮಿ ಹಣ ಬರುತ್ತಾ?

ಇಲ್ಲ. ರೇಷನ್ ಕಾರ್ಡ್‌ನಲ್ಲಿ ಮಾಹಿತಿ ತಿದ್ದುಪಡಿ ಮಾಡಿದ ನಂತರ, ಅದು ಸರ್ಕಾರದ ಡೇಟಾಬೇಸ್‌ನಲ್ಲಿ ಅಪ್‌ಡೇಟ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡೇಟಾ ಜೊತೆ Sync ಆದ ನಂತರವಷ್ಟೇ ಮುಂದಿನ ಕಂತಿನಿಂದ ಹಣ ಬರಲು ಪ್ರಾರಂಭವಾಗುತ್ತದೆ.

Leave a Comment