Digital Census India 2026:ಭಾರತದಲ್ಲಿ ಬಹು ವರ್ಷಗಳ ಬಳಿಕ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆ ಈ ಬಾರಿ ಹೊಸ ರೂಪದಲ್ಲಿ ಬರುತ್ತಿದೆ. ಕೋವಿಡ್-19 ಮಹಾಮಾರಿಯಿಂದ ಮುಂದೂಡಲ್ಪಟ್ಟಿದ್ದ ಜನಗಣತಿ ಇದೀಗ 2026ರಲ್ಲಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಆರಂಭವಾಗುತ್ತಿದೆ. ಏಪ್ರಿಲ್ 1, 2026ರಿಂದ ದೇಶದಾದ್ಯಂತ “ಡಿಜಿಟಲ್ ಜನಗಣತಿ” ಪ್ರಾರಂಭವಾಗಿದ್ದು, ಇದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಒಂದು ದೊಡ್ಡ ಪರಿವರ್ತನೆಯಾಗಿ ಪರಿಗಣಿಸಲಾಗಿದೆ.
ಈ ಲೇಖನದಲ್ಲಿ ನೀವು ಡಿಜಿಟಲ್ ಜನಗಣತಿ 2026(Digital Census 2026) ಎಂದರೇನು, ಅದರ ಪ್ರಯೋಜನಗಳು, ಪ್ರಮುಖ ವೈಶಿಷ್ಟ್ಯಗಳು ಮತ್ತು ನಿಮ್ಮ ಮೊಬೈಲ್ ಬಳಸಿ ಮಾಹಿತಿ ಹೇಗೆ ತುಂಬಬೇಕು ಎಂಬುದರ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಭಾರತದಲ್ಲಿ ಜನಗಣತಿ ಎಂದರೆ ದೇಶದ ಅಭಿವೃದ್ಧಿಗೆ ಅಡಿಪಾಯವಾಗುವ ಅತ್ಯಂತ ಪ್ರಮುಖ ಪ್ರಕ್ರಿಯೆ. ಪ್ರತಿಯೊಬ್ಬ ನಾಗರಿಕರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಸರ್ಕಾರ ಭವಿಷ್ಯದ ಯೋಜನೆಗಳನ್ನು ರೂಪಿಸುತ್ತದೆ. ಇದೇ ಕಾರಣದಿಂದ ಜನಗಣತಿ ಕೇವಲ ಒಂದು ಅಂಕಿ-ಅಂಶ ಸಂಗ್ರಹಣೆ ಮಾತ್ರವಲ್ಲ, ದೇಶದ ಪ್ರಗತಿಗೆ ಮಾರ್ಗದರ್ಶಕವಾಗಿದೆ.
ಕೋವಿಡ್-19 ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿದ್ದ ಜನಗಣತಿ ಪ್ರಕ್ರಿಯೆ ಇದೀಗ 2026ರಲ್ಲಿ ಹೊಸ ರೂಪದಲ್ಲಿ ಆರಂಭವಾಗುತ್ತಿದೆ. ಈ ಬಾರಿ ಭಾರತವು ಸಂಪೂರ್ಣ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಂಡಿದ್ದು, ಮೊಬೈಲ್ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕವೇ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದ ಜನರಿಗೆ ಇನ್ನಷ್ಟು ಸುಲಭ, ವೇಗವಾದ ಮತ್ತು ಪಾರದರ್ಶಕ ಸೇವೆ ಲಭ್ಯವಾಗಲಿದೆ.
Table of Contents
Digital Census India 2026: ಡಿಜಿಟಲ್ ಜನಗಣತಿ ಎಂದರೇನು ಮತ್ತು ಹೇಗೆ ಕೆಲಸ ಮಾಡುತ್ತದೆ?

ಡಿಜಿಟಲ್ ಜನಗಣತಿ ಎಂದರೆ ಜನರ ಬಗ್ಗೆ ಮಾಹಿತಿಯನ್ನು ಕಾಗದದಲ್ಲಿ ಅಲ್ಲ, ಬದಲಿಗೆ ಡಿಜಿಟಲ್ ಸಾಧನಗಳ ಮೂಲಕ ಸಂಗ್ರಹಿಸುವ ಪ್ರಕ್ರಿಯೆ. ಹಿಂದಿನ ಜನಗಣತಿಗಳಲ್ಲಿ ಎಲ್ಲಾ ಅಧಿಕಾರಿಗಳು ಮನೆ ಮನೆಗಳಿಗೆ ಹೋಗಿ ಮಾಹಿತಿಯನ್ನು ದಾಖಲಿಸುತ್ತಿದ್ದರು. ಆದರೆ ಈ ಬಾರಿ, ಜನರು ಸ್ವತಃ ತಮ್ಮ ಮಾಹಿತಿಯನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ನಲ್ಲಿ ಭರ್ತಿ ಮಾಡಬಹುದು.
ಈ ಹೊಸ ವಿಧಾನವು ವೇಗ, ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಸಹಾಯಕವಾಗಿದೆ.
Digital Census India 2026 Features in Kannada | ಡಿಜಿಟಲ್ ಜನಗಣತಿ ಪ್ರಮುಖ ವೈಶಿಷ್ಟ್ಯಗಳು, Online Self Enumeration Guide
- ಸಂಪೂರ್ಣ ಡಿಜಿಟಲೀಕರಣ: ಈ ಬಾರಿ ಕಾಗದದ ಬಳಕೆ ಇಲ್ಲ. ಎಲ್ಲಾ ಮಾಹಿತಿ ಮೊಬೈಲ್ ಆಪ್ ಅಥವಾ ವೆಬ್ ಪೋರ್ಟಲ್ ಮೂಲಕ ನೇರವಾಗಿ ಸರ್ವರ್ಗೆ ಸೇರುತ್ತದೆ.
- Self Enumeration (ಸ್ವಯಂ ಮಾಹಿತಿ ಭರ್ತಿ): ನೀವು ನಿಮ್ಮ ಮನೆಯ ಮಾಹಿತಿಯನ್ನು ಸ್ವತಃ ನಿಮ್ಮ ಸಮಯಕ್ಕೆ ಅನುಗುಣವಾಗಿ ತುಂಬಬಹುದು. ಇದು ಸಮಯ ಉಳಿಸುವ ಉತ್ತಮ ವಿಧಾನ.
- ಬಹುಭಾಷಾ ಬೆಂಬಲ Multilingual support: ಕನ್ನಡ ಸೇರಿದಂತೆ ಸುಮಾರು 16 ಭಾರತೀಯ ಭಾಷೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
- ಜಿಯೊ-ರೆಫರೆನ್ಸಿಂಗ್ ತಂತ್ರಜ್ಞಾನ: ನಿಮ್ಮ ಮನೆಯ ಸ್ಥಳವನ್ನು ಡಿಜಿಟಲ್ ಮ್ಯಾಪ್ನಲ್ಲಿ ನಿಖರವಾಗಿ ಗುರುತಿಸಲಾಗುತ್ತದೆ. ಇದು ಡೇಟಾ ನಿಖರತೆಯನ್ನು ಹೆಚ್ಚಿಸುತ್ತದೆ.
ಡಿಜಿಟಲ್ ಜನಗಣತಿಯ ಪ್ರಯೋಜನಗಳು | Benefits of Digital Census India 2026
- ಪಾರದರ್ಶಕತೆ: ಆನ್ಲೈನ್ನಲ್ಲಿ ಡೇಟಾ ದಾಖಲಿಸುವುದರಿಂದ ತಪ್ಪು ಮಾಹಿತಿ ಸೇರಿಸುವ ಸಾಧ್ಯತೆ ಕಡಿಮೆ.
- ಪರಿಸರ ಸ್ನೇಹಿ: ಕಾಗದ ಬಳಕೆ ಕಡಿಮೆಯಾಗುವುದರಿಂದ ಮರಗಳ ಉಳಿವು ಸಾಧ್ಯ.
- ಉತ್ತಮ ಯೋಜನೆಗಳು: ಸರ್ಕಾರಕ್ಕೆ ನಿಖರ ಮಾಹಿತಿ ಸಿಗುವುದರಿಂದ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮ ಯೋಜನೆ ರೂಪಿಸಬಹುದು.
- ಸಮಯ ಉಳಿತಾಯ: ಸ್ವಯಂ ಮಾಹಿತಿ ಭರ್ತಿ ಮಾಡಿದರೆ ಅಧಿಕಾರಿಗಳ ಸಮಯವೂ, ನಿಮ್ಮ ಸಮಯವೂ ಉಳಿಯುತ್ತದೆ.
ನಿಮ್ಮ ಮೊಬೈಲ್ನಲ್ಲೇ ಡಿಜಿಟಲ್ ಜನಗಣತಿ ಮಾಡುವುದು ಹೇಗೆ? | Online Census India 2026 Step-by-Step Guide
ನೀವೇ ಸ್ವತಃ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಡಿಜಿಟಲ್ ಜನಗಣತಿ ಮಾಹಿತಿ ಭರ್ತಿ ಮಾಡುವುದು ಅತ್ಯಂತ ಸುಲಭ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: ಅಧಿಕೃತ ಪೋರ್ಟಲ್ ಭೇಟಿ ನೀಡಿ: ಮೊದಲು ನಿಮ್ಮ ಬ್ರೌಸರ್ನಲ್ಲಿ ಸರ್ಕಾರದ ಅಧಿಕೃತ ಜನಗಣತಿ ಪೋರ್ಟಲ್ ವೆಬ್ಸೈಟ್ se.census.gov.in ಭೇಟಿ ನೀಡಿ. ಇದು ಸ್ವಯಂ ಗಣತಿ (Self Enumeration) ಪೋರ್ಟಲ್ ಆಗಿದೆ. ನಕಲಿ ವೆಬ್ಸೈಟ್ಗಳಿಂದ ಎಚ್ಚರಿಕೆ ವಹಿಸಿ.
ಹಂತ 2: ಮೊಬೈಲ್ ನೋಂದಣಿ: ಅಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆಗ ನಿಮ್ಮ ಮೊಬೈಲ್ಗೆ ಬರುವ OTP ಅನ್ನು ಹಾಕಿ ಲಾಗಿನ್ ಆಗಿರಿ. ಈ ಮೊಬೈಲ್ ಸಂಖ್ಯೆಯೇ ನಿಮ್ಮ ನೋಂದಣಿಗೆ ಮುಖ್ಯ ಸಂಪರ್ಕ ಸಾಧನವಾಗಿರುತ್ತದೆ.
ಹಂತ 3: ವಿಳಾಸ ಆಯ್ಕೆ : ಲಾಗಿನ್ ಆದ ನಂತರ, ಸ್ಕ್ರೀನ್ ಮೇಲಿನ ಆಯ್ಕೆಗಳಿಂದ ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲೂಕು, ಹೋಬಳಿ ಮತ್ತು ಸ್ಥಳೀಯ ವಿಳಾಸದ ವಿವರಗಳನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.
ಹಂತ 4: ಡಿಜಿಟಲ್ ಮ್ಯಾಪ್ನಲ್ಲಿ ಮನೆ ಗುರುತಿಸುವಿಕೆ: ಈಗ ನಿಮಗೆ ಡಿಜಿಟಲ್ ಮ್ಯಾಪ್ (Digital Map) ಕಾಣಿಸುತ್ತದೆ. ಅದರಲ್ಲಿ ನಿಮ್ಮ ಮನೆಯ ನಿಖರವಾದ ಸ್ಥಳವನ್ನು ಪಿನ್ ಮಾಡಿ (ಗುರುತಿಸಿ). ಇದು ಜಿಯೊ-ರೆಫರೆನ್ಸಿಂಗ್ ಪ್ರಕ್ರಿಯೆಯ ಭಾಗವಾಗಿದ್ದು, ನಿಮ್ಮ ಮನೆಯ ಸ್ಥಳ ನಿಖರವಾಗಿ ದಾಖಲಾಗಲು ಸಹಾಯಕವಾಗಿದೆ.
ಹಂತ 5: ಮಾಹಿತಿ ಭರ್ತಿ: ತದನಂತರ ನಿಮ್ಮ ಮನೆ ಹಾಗೂ ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ ಕೇಳಲಾಗುವ 33 ಸರಳ ಪ್ರಶ್ನೆಗಳಿಗೆ ಉತ್ತರಿಸಿ. ಈ ಪ್ರಶ್ನೆಗಳು ಮನೆಯ ಸ್ಥಿತಿ (ಸ್ವಂತ/ಬಾಡಿಗೆ), ಕುಟುಂಬದ ಸದಸ್ಯರ ವಯಸ್ಸು, ಲಿಂಗ, ಶೈಕ್ಷಣಿಕ ಅರ್ಹತೆ, ಉದ್ಯೋಗ, ವಿಕಲಚೇತನತೆ, ಮೂಲ ಸೌಲಭ್ಯಗಳು (ವಿದ್ಯುತ್, ನೀರು, ಶೌಚಾಲಯ) ಇತ್ಯಾದಿಗಳನ್ನು ಒಳಗೊಂಡಿರುತ್ತವೆ.
ಹಂತ 6: ದೃಢೀಕರಣ ಮತ್ತು SE ID ಪಡೆಯಿರಿ: ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿದ ಬಳಿಕ, ನಿಮಗೆ ಒಂದು ವಿಶೇಷವಾದ ‘ಎಸ್ಇ ಐಡಿ ನಂಬರ್’ (SE ID) ಸಿಗುತ್ತದೆ. ಇದು ಅತ್ಯಂತ ಪ್ರಮುಖವಾದದ್ದು. ಇದನ್ನು ಬರೆದಿಟ್ಟುಕೊಳ್ಳಿ ಅಥವಾ ಸ್ಕ್ರೀನ್ಶಾಟ್ ತೆಗೆದು ಭದ್ರವಾಗಿಟ್ಟುಕೊಳ್ಳಿ. ಈ ಸಂಖ್ಯೆಯ ಮೂಲಕವೇ ನಿಮ್ಮ ಸ್ವಯಂ-ಭರ್ತಿಯನ್ನು ಗಣತಿದಾರರು ದೃಢೀಕರಿಸುತ್ತಾರೆ.
ಡಿಜಿಟಲ್ ಜನಗಣತಿ ಹಂತಗಳು | Digital Census India 2026 Phases Explained
- Self Enumeration Phase: ಏಪ್ರಿಲ್ 1, 2026ರಿಂದ ನೀವು ಸ್ವತಃ ಮಾಹಿತಿ ತುಂಬಬಹುದು.
- Field Verification Phase: ಏಪ್ರಿಲ್ 16 ನಂತರ ಅಧಿಕಾರಿಗಳು ಮನೆಗೆ ಬಂದು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಾರೆ.
- Final Phase: ಫೆಬ್ರವರಿ 2027ರಲ್ಲಿ ಅಂತಿಮ ಪ್ರಕ್ರಿಯೆ ನಡೆಯಲಿದೆ.
ಡಿಜಿಟಲ್ ಜನಗಣತಿ 2026ಗೆ ಯಾವುದೇ ದಾಖಲೆಗಳು ಬೇಕಿಲ್ಲವೇ?
ನೀವು ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್… ಇಂಥ ಯಾವುದೇ ದಾಖಲೆ ಹಿಡಿದುಕೊಳ್ಳಬೇಕಾದ ಅಗತ್ಯವಿಲ್ಲ. ಇದು ಕೇವಲ ಮಾಹಿತಿ ಸಂಗ್ರಹಣೆ ಮಾತ್ರ. ಇಲ್ಲಿ ನಿಮ್ಮ ದಾಖಲೆಗಳ ಸ್ಕ್ಯಾನ್ ಮಾಡೋದು ಅಥವಾ ಫೋಟೋ ಅಪ್ಲೋಡ್ ಮಾಡೋದು ಇಲ್ಲ.
ಹಾಗಾದ್ರೆ ಏನು ಬೇಕು?
ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರ ಬಗ್ಗೆ ಕೇಳುವ 33 ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದಿದ್ದರೆ ಸಾಕು. ಅಷ್ಟೇ. ಉದಾಹರಣೆಗೆ:
- ಮನೆಯಲ್ಲಿ ಎಷ್ಟು ಜನ ಇದ್ದಾರೆ?
- ಅವರ ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ ಏನು?
- ಅವರು ಯಾವ ಶಿಕ್ಷಣ ಪಡೆದಿದ್ದಾರೆ?
- ಅವರ ಉದ್ಯೋಗ ಏನು?
- ಮನೆಯ ಮೂಲ ಸೌಕರ್ಯಗಳು (ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಇಂಧನ) ಯಾವೆಲ್ಲಾ ಇವೆ?
ಇಷ್ಟೇ. ಇದಕ್ಕೆಲ್ಲಾ ನೀವು ನೆನಪಿನಲ್ಲಿಟ್ಟುಕೊಂಡು, ಮನೆಯವರ ಜೊತೆ ಒಮ್ಮೆ ಮಾತನಾಡಿ ನಿಖರವಾಗಿ ಮಾಹಿತಿ ಕೊಟ್ಟರೆ ಸಾಕು.
ಡಿಜಿಟಲ್ ಜನಗಣತಿ 2026 ಪ್ರಮುಖ ಸೂಚನೆಗಳು | Important Instructions for Online Census India
- SE ID ಅನ್ನು ಕಡ್ಡಾಯವಾಗಿ save ಮಾಡಿ
- ನಕಲಿ ವೆಬ್ಸೈಟ್ಗಳಿಂದ ದೂರವಿರಿ
- ಸರಿಯಾದ ಮಾಹಿತಿಯನ್ನು ಮಾತ್ರ ನೀಡಿ
- ವಲಸೆ ಕಾರ್ಮಿಕರು ತಮ್ಮ ವಾಸ ಸ್ಥಳದ ಆಧಾರದ ಮೇಲೆ ನೋಂದಣಿ ಮಾಡಬೇಕು
Conclusion
ಡಿಜಿಟಲ್ ಜನಗಣತಿ 2026 ಭಾರತದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಂತ್ರಜ್ಞಾನ ಬಳಸಿ ಈ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಮತ್ತು ಪಾರದರ್ಶಕವಾಗಿಸಲಾಗಿದೆ.
ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸರಿಯಾದ ಮಾಹಿತಿಯನ್ನು ನೀಡುವುದು ಅತ್ಯಂತ ಮುಖ್ಯ. ನಿಮ್ಮ ಮೊಬೈಲ್ ಬಳಸಿ ಸ್ವತಃ ಮಾಹಿತಿ ತುಂಬಿ, ಸಮಯ ಉಳಿಸಿ ಮತ್ತು ದೇಶದ ಅಭಿವೃದ್ಧಿಗೆ ಕೈಜೋಡಿಸಿ.
Back To Home Page: Click here
FAQ
ಡಿಜಿಟಲ್ ಜನಗಣತಿ ಯಾವಾಗ ಆರಂಭವಾಗುತ್ತದೆ?
ಏಪ್ರಿಲ್ 1, 2026ರಿಂದ ಆರಂಭವಾಗುತ್ತದೆ.
ನಾನು ಮೊಬೈಲ್ ಮೂಲಕ ಮಾಹಿತಿ ತುಂಬಬಹುದಾ?
ಹೌದು, ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ವತಃ ಆನ್ಲೈನ್ನಲ್ಲಿ ಮಾಹಿತಿ ಭರ್ತಿ ಮಾಡಬಹುದು.
SE ID ಎಂದರೇನು ಮತ್ತು ಅದು ಏಕೆ ಮುಖ್ಯ?
ನೀವು ಮಾಹಿತಿ ಸಲ್ಲಿಸಿದ ನಂತರ ಸಿಗುವ ವಿಶೇಷ ID.
ಇದನ್ನು future verificationಗಾಗಿ ಬಳಸಲಾಗುತ್ತದೆ.
ಮಾಹಿತಿ ತಪ್ಪಿದ್ದರೆ ಏನು ಮಾಡಬೇಕು?
ಅಧಿಕಾರಿಗಳು ಮನೆಗೆ ಬಂದಾಗ ಸರಿಪಡಿಸಬಹುದು.
ಎಲ್ಲ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆಯಾ?
ಹೌದು, ಕನ್ನಡ ಸೇರಿದಂತೆ ಸುಮಾರು 16 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
ಇಂಟರ್ನೆಟ್ ಇಲ್ಲದಿದ್ದರೆ ಏನು ಮಾಡಬೇಕು?
ನೀವು ಸ್ವತಃ ತುಂಬಲು ಆಗದಿದ್ದರೆ, ಗಣತಿದಾರರು ಮನೆಗೆ ಬಂದು ಮಾಹಿತಿ ಸಂಗ್ರಹಿಸುತ್ತಾರೆ.
ಡಿಜಿಟಲ್ ಜನಗಣತಿ ಸುರಕ್ಷಿತವೇ?
ಹೌದು, ಇದು ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ನಡೆಯುವುದರಿಂದ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತದೆ.
ವಲಸೆ ಕಾರ್ಮಿಕರು ಎಲ್ಲಿ ನೋಂದಣಿ ಮಾಡಬೇಕು?
ಅವರು ಪ್ರಸ್ತುತ ವಾಸವಾಗಿರುವ ಸ್ಥಳದ ಆಧಾರದ ಮೇಲೆ ಜನಗಣತಿ ಮಾಡಿಸಬೇಕು.
ಡಿಜಿಟಲ್ ಜನಗಣತಿಗೆ ಯಾವ ದಾಖಲೆಗಳು ಬೇಕು?
ಸಾಮಾನ್ಯವಾಗಿ:
ಆಧಾರ್ ಕಾರ್ಡ್
ಮೊಬೈಲ್ ನಂಬರ್
ಮನೆಯ ವಿವರಗಳು
(ಅಧಿಕೃತವಾಗಿ ಕೇಳಿದರೆ ಮಾತ್ರ ನೀಡಬೇಕು)
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.