Best Courses After PUC 2026: ಪಿಯುಸಿ ಪಾಸ್ ಆಯ್ತು ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗಳು ತುಂಬಾ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಮುಂದೆ ಡಿಗ್ರಿ ಶಿಕ್ಷಣ ಪಡೆಯುವುದಾ? ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಪಿಯುಸಿ ಬಳಿಕ ನೀವು ಮಾಡುವ ಕೋರ್ಸ್ ಅಥವಾ ಪಡೆಯುವ ಡಿಗ್ರಿ ನಿಮ್ಮ ಉದ್ಯೋಗವನ್ನು ನಿರ್ಧರಿಸುತ್ತದೆ. ಹೀಗಾಗಿ ಪಿಯುಸಿ ಬಳಿಕ ಮುಂದೇನು ಓದಬೇಕು ಎನ್ನುವ ಬಗ್ಗೆ ಹಾಗೂ ಈ ಕೋರ್ಸ್ ಮಾಡಿದ್ರೆ ಸುಲಭವಾಗಿ ಕೆಲಸ ಸಿಗುತ್ತೆ ಯಾವುದು ಕೋರ್ಸ್ ಅಂತ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ,
Table of Contents
ಎಸ್ಎಸ್ಎಲ್ಸಿ ಮತ್ತು ಪಿಯುಸಿ – ಜೀವನದ ನಿರ್ಣಾಯಕ ಘಟ್ಟ | best courses after 12th Karnataka

ಎಸ್ ಎಸ್ ಎಲ್ ಸಿ (SSLC) ಮತ್ತು ಪಿಯುಸಿ (PUC) ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾದಂತಹ ಘಟ್ಟಗಳಲ್ಲಿ ಒಂದು ಆಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಕೂಡ ತಮ್ಮ ಫಲಿತಾಂಶವು ಬಂದ ಬಳಿಕ ನಾವು ಮುಂದೆ ಏನು ಮಾಡಬೇಕೆಂದು ಮತ್ತು ಏನು ಓದಬೇಕೆಂದು ಅನ್ನೋದೇ ಒಂದು ದೊಡ್ಡ ಗೊಂದಲ ಆಗಿದೆ.
ಆದರೆ ಈ ಹಂತದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವತ ಕೋರ್ಸ್ (Course) ಗಳು ನಿಮ್ಮ ವೃತ್ತಿ ಜೀವನಕ್ಕೆ ದೊಡ್ಡ ಅಡಿಪಾಯ ಹಾಕಿಕೊಳ್ಳುತ್ತದೆ. ವಿಜ್ಞಾನ (Science) , ವಾಣಿಜ್ಯ (Commerce) ಅಥವಾ ಕಲಾ (Arts) ವಿಷಯಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಪಿಯುಸಿ ಬಳಿಕ ನೀವು ಈ ಕೋರ್ಸ್ ಮಾಡಿದರೆ ತುಂಬಾ ಸುಲಭವಾಗಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು.
ಪಿಯುಸಿ ನಂತರ ಸರಿಯಾದ ಕೋರ್ಸ್ ಆಯ್ಕೆ ಏಕೆ ಮುಖ್ಯ? | Best Career Options After PUC
ಪಿಯುಸಿ (PUC) ಮುಗಿಸಿದ ನಂತರ ನೀವು ತೆಗೆದುಕೊಳ್ಳುವ ಕೋರ್ಸ್ ನಿಮ್ಮ ಮುಂದಿನ 30-40 ವರ್ಷಗಳ ವೃತ್ತಿ ಜೀವನವನ್ನು (Career) ನೇರವಾಗಿ ನಿರ್ಧರಿಸುತ್ತದೆ. ಇದನ್ನು ಕೇವಲ ಒಂದು ಶೈಕ್ಷಣಿಕ ಆಯ್ಕೆಯಾಗಿ ಕಾಣಬೇಡಿ – ಇದು ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ನಿರ್ಧಾರವಾಗಿದೆ.
ಪಿಯುಸಿ ನಂತರ ನೀವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಿಮ್ಮ ಉದ್ಯೋಗವನ್ನು ನೇರವಾಗಿ ನಿರ್ಧರಿಸುತ್ತದೆ. ತಿಳುವಳಿಕೆ ಇಲ್ಲದೆ ಕೋರ್ಸ್ ಸೇರಿದರೆ, ಪದವಿ ಮುಗಿದ ನಂತರ ನಿರುದ್ಯೋಗಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಮಾರುಕಟ್ಟೆಯಲ್ಲಿ (Job Market) ಬೇಡಿಕೆಯಿರುವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.
ವಿಭಾಗವಾರು ಟಾಪ್ ಕೋರ್ಸ್ ಗಳು (ವಿವರವಾದ ಮಾಹಿತಿ) after puc which course is best
ನೀವು ವಾಣಿಜ್ಯ ವಿಷಯದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ (Commerce Students)
ನೀವು ವಾಣಿಜ್ಯ ವಿಷಯದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ : ವಾಣಿಜ್ಯ ವಿದ್ಯಾರ್ಥಿಗಳು ಮುಂದೆ ಬಿಬಿಎ, ಬಿಕಾಂ ಕೋರ್ಸ್ ಮಾಡಿ ಪದವಿ ಪಡೆದು ಒಳ್ಳೆ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಇದೇ ಕ್ಷೇತ್ರದಲ್ಲಿ ಉನ್ನತ್ತ ಶಿಕ್ಷಣ ಪಡೆಯುವ ಆಯ್ಕೆಗಳು ಕೂಡ ನಿಮಗೆ ಇದೆ. ಕಂಪನಿ ಸೆಕ್ರೆಟರಿ, ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ (ಸಿಪಿಎ), ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್, ಡಿಜಿಟಲ್ ಮಾರ್ಕೆಟರ್, ಬ್ಯಾಂಕಿಂಗ್ ಮತ್ತು ಅಕೌಂಟೆನ್ಸಿ ಹೀಗೆ 10 ಆರು ವೃತ್ತಿ ಆಯ್ಕೆ ಮಾಡಬಹುದು.
ನೀವು ವಿಜ್ಞಾನದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ (Science Students)
ನೀವು ವಿಜ್ಞಾನದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ : ನೀವು ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ನೆಸ್ಟ್ ಬಿ ಎಸ್ಸಿ ಅಥವಾ ಬಿಸಿಎ ಯಲ್ಲಿ ಪಾಸ್ ಹಾಗಿ ಪದವಿ ಪಡೆಯಬಹುದು ಹಾಗೂ ವಿಜ್ಞಾನ ಓದಿರುವ ವಿದ್ಯಾರ್ಥಿಗಳಿಗೆ ಆಯ್ಕೆಗಳು ಹಲವಾರು ಇದೆ, ಎಂಬಿಬಿಎಸ್, ಆರ್ಕಿಟೆಕ್ಚರ್, ಏವಿಯೇಷನ್‌ನಲ್ಲಿ ಸೌಂಡ್ ಇಂಜಿನಿಯರಿಂಗ್, ಬಯೋಮೆಡಿಕಲ್ ವೃತ್ತಿಗಳು, ಓಸಿಯೋನೋಗ್ರಫಿ, ಬಯೋಕೆಮಿಸ್ಟ್ರಿ, ಫೋರೆನ್ಸಿಕ್ ಸೈನ್ಸ್, ನರ್ಸಿಂಗ್, ಪ್ಯಾರಾ ಮೆಡಿಕಲ್, ಡಿಪ್ಲೋಮ ಇಂಜಿನಿಯರಿಂಗ್ ನಂತಹ ಕೋರ್ಸ್ ಗಳನ್ನು ನೀವು ಮಾಡಿದರೆ ನೂರಕ್ಕೆ ನೂರರಷ್ಟು ಸಹ ನಿಮಗೆ ಉದ್ಯೋಗ ಸಿಗುತ್ತದೆ.
ನೀವು ಕಲಾ ವಿಭಾಗದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ (Arts Students)
ನೀವು ಕಲಾ ವಿಭಾಗದಲ್ಲಿ ಪಿಯುಸಿ ಮಾಡಿ ಪಾಸ್ ಹಾಗಿದ್ದರೆ : ಮುಂದೆ ನೀವು ಬಿಎ ಪದವಿ ಪಡೆದು ಕೊಂಡು ಬಿಎಡ್ ಸೇರಿದಂತೆ ಇನ್ನಿತ್ತರ ಕೋರ್ಸ್ ಗಳನ್ನು ಮಾಡಿ ಶಿಕ್ಷಕರಾಗಿ ಉದ್ಯೋಗ ಸಹ ಪಡೆದುಕೊಳ್ಳಬಹುದು. ಇದಲ್ಲದೆ, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಪ್ರತಿಕೋದ್ಯಮ, ಅನಿಮೇಷನ್, ವೆಬ್ ಡಿಸೈನಿಂಗ್ ಹೀಗೆ ವಿವಿಧ ತರಹದ ಕೋರ್ಸ್ ನಿಮಗೆ ಆಯ್ಕೆಗಳಿವೆ.
ನೀವು ಚಾರ್ಟೆಡ್ ಅಕೌಂಟೆನ್ಸಿ (CA) ಮಾಡಿ ಪಾಸ್ ಹಾಗಿದ್ದರೆ
ನೀವು ಚಾರ್ಟೆಡ್ ಅಕೌಂಟೆನ್ಸಿ ಮಾಡಿ ಪಾಸ್ ಹಾಗಿದ್ದರೆ : ಪಿಯುಸಿಯಲ್ಲಿ ವಾಣಿಜ್ಯ ವಿಷಯ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಬೆಸ್ಟ್ ಅಂತ ಆಯ್ಕೆ ಅಂದ್ರೆ ಸಿಎ. ಆದರೆ ಈ ಕೋರ್ಸ್ ನಲ್ಲಿ ಮೂರು ಹಂತದಲ್ಲಿ ಪರೀಕ್ಷೆಗಳನ್ನು ಎದುರಿಸಬೇಕಾಗಿದ್ದರೂ ಶ್ರಮ ಹಾಕಿ ಪರೀಕ್ಷೆ ಪಾಸ್ ಆದರೆ ಹೆಚ್ಚಿನ ಸಂಬಳ ಉದ್ಯೋಗ ಕೂಡ ಸಹ ನಿಮ್ಮ ಕೈ ಸೇರುತ್ತದೆ ಅಂತ ಹೇಳಬಹುದು
ಪಿಯುಸಿ ನಂತರ ಫ್ಯಾಷನ್ ಡಿಸೈನಿಂಗ್ : ಇತ್ತೀಚೆಗಿನ ದಿನದಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಗೆ ಕೂಡ ಹೆಚ್ಚು ಬೇಡಿಕೆಯಿದೆ. ಫ್ಯಾಷನ್ ಡಿಸೈನಿಂಗ್ ನಲ್ಲಿ ವಿವಿಧ ಕ್ಷೇತ್ರಗಳು ಇದೆ, ಇದರಲ್ಲಿ ಆಭರಣಗಳ ಡಿಸೈನಿಂಗ್ ಕೂಡ ಕಲಿಯಬಹುದು. ಬಟ್ಟೆಗಳ ಡಿಸೈನಿಂಗ್ ಹಾಗೂ ಒಡವೆಗಳ ಡಿಸೈನಿಂಗ್ ಬಗ್ಗೆ ಹೆಚ್ಚು ಆಸಕ್ತಿಯಿರುವ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು.
ಪಿಯುಸಿ ಬಳಿಕ ಕೋರ್ಸ್ ಆಯ್ಕೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ | Best Courses After PUC 2026
- ಟ್ರೆಂಡ್ ಹಿಂಬಾಲಿಸಬೇಡಿ: ಎಲ್ಲಾ ಮಿತ್ರರು ಎಂಜಿನಿಯರಿಂಗ್ ಸೇರುತ್ತಿದ್ದಾರೆ ಅಂತ ಅದನ್ನೇ ಆಯ್ಕೆ ಮಾಡಬೇಡಿ.
- ಅನುಕೂಲಕರ ಅವಧಿಯನ್ನು (Duration) ನೋಡಿ: ಡಿಪ್ಲೊಮಾ (1-2 ವರ್ಷ) ಮತ್ತು ಡಿಗ್ರಿ (3-4 ವರ್ಷ) – ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬದ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿ.
- ಸ್ಥಳೀಯ ಉದ್ಯೋಗ ಸಾಧ್ಯತೆ ಪರಿಶೀಲಿಸಿ: ಬೆಂಗಳೂರಿನಲ್ಲಿ IT ಕೋರ್ಸ್ ಗೆ ಬೇಡಿಕೆ ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ವಿಜ್ಞಾನ ಅಥವಾ ಬ್ಯಾಂಕಿಂಗ್ ಕೋರ್ಸ್ ಗೆ ಬೇಡಿಕೆ ಹೆಚ್ಚು.
ಉದ್ಯೋಗ ಖಾತ್ರಿಯ ಸರ್ಟಿಫಿಕೇಟ್ ಕೋರ್ಸ್ ಗಳು (Short-term)
ಪೂರ್ಣ ಪ್ರಮಾಣದ ಡಿಗ್ರಿ ಮಾಡಲು ಸಮಯ ಅಥವಾ ಹಣವಿಲ್ಲದವರಿಗೆ ಪಿಯುಸಿ ನಂತರ ನೇರವಾಗಿ ಈ ಕೆಳಗಿನ ಸರ್ಟಿಫಿಕೇಟ್ ಕೋರ್ಸ್ ಗಳು (6 ತಿಂಗಳು – 1 ವರ್ಷ) ಮಾಡಿದರೆ ಸುಲಭವಾಗಿ ಕೆಲಸ ಸಿಗುತ್ತೆ:
- ಡಿಜಿಟಲ್ ಮಾರ್ಕೆಟಿಂಗ್: Google, Facebook Ads ಮ್ಯಾನೇಜ್ ಮಾಡಲು ಕಲಿಯಿರಿ. ಪ್ರತಿ ಸಣ್ಣ ವ್ಯಾಪಾರಿಗೂ ಇದರ ಅಗತ್ಯ ಇದೆ.
- ಗ್ರಾಫಿಕ್ ಡಿಸೈನಿಂಗ್: ಕನ್ನಡ ಫಾಂಟ್ ಡಿಸೈನ್ ನಲ್ಲಿ ಪರಿಣತಿ ಪಡೆದರೆ ಕನ್ನಡ ಪತ್ರಿಕೆಗಳು, ಪ್ರಕಟಣಾ ಸಂಸ್ಥೆಗಳಲ್ಲಿ ನೇಮಕಾತಿ.
- Tally ERP 9 / GST Practitioner: ಕಾಮರ್ಸ್ ವಿದ್ಯಾರ್ಥಿಗಳಿಗೆ ಸ್ವಂತವಾಗಿ ಜಿಎಸ್ಟಿ ರಿಟರ್ನ್ ಸಲ್ಲಿಸುವ ಪರವಾನಿಗೆ ಪಡೆಯಬಹುದು. ಪ್ರತಿ ವ್ಯಾಪಾರಿಗೂ ಈ ಸೇವೆಯ ಅಗತ್ಯವಿರುತ್ತದೆ.
ವಿದ್ಯಾರ್ಥಿಗಳಿಗೆ ವಿಶೇಷ ಸಲಹೆ (KAS ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು)
ಪಿಯುಸಿ ನಂತರ ನೀವು ಯಾವುದೇ ಡಿಗ್ರಿ (BA, B.Com ಅಥವಾ B.Sc) ಮಾಡಿದರೂ, ನಿಮ್ಮ ಜೊತೆಗೆ KPSC (Karnataka Public Service Commission) ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಬಹುದು.
- Group C ಮತ್ತು Group D: ಪಿಯುಸಿ ಪಾಸ್ ಆದವರಿಗೆ ಗ್ರೂಪ್ ಸಿ ನೋಟಿಫಿಕೇಶನ್ ಬರುತ್ತದೆ (ವಿಲೇಜ್ ಅಕೌಂಟೆಂಟ್, FDA, SDA).
- SSC GD / Banking: PUC ಮುಗಿಸಿದವರಿಗೆ RBI, SBI, ಮತ್ತು ನ್ಯಾಷನಲೈಸ್ಡ್ ಬ್ಯಾಂಕುಗಳಲ್ಲಿ ಕ್ಲರ್ಕ್ ಪರೀಕ್ಷೆಗಳಿಗೆ ಅರ್ಹತೆ ಇದೆ.
ತೀರ್ಮಾನ
ಪ್ರಿಯ ವಿದ್ಯಾರ್ಥಿಗಳೇ, “ಪಿಯುಸಿ ನಂತರ ಮುಂದೇನು” ಎಂಬ ಒತ್ತಡ ಬೇಡ. ನಿಮ್ಮ ಆಸಕ್ತಿ ಯಾವುದೋ ಅದನ್ನು ಗುರುತಿಸಿ. ಮೇಲೆ ಹೇಳಿರುವ ಕೋರ್ಸ್ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ವಿಜ್ಞಾನವಿದ್ದರೆ ಬಿಸಿಎ/ಪ್ಯಾರಾಮೆಡಿಕಲ್, ವಾಣಿಜ್ಯವಿದ್ದರೆ ಸಿಎ/ಬಿಕಾಂ, ಕಲೆಯಿದ್ದರೆ ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಬಿಎಡ್ ಮಾಡಿದರೆ ನೂರಕ್ಕೆ ನೂರರಷ್ಟು ನಿಮಗೆ ಉದ್ಯೋಗ ಸಿಗುತ್ತೆ.
ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ವೃತ್ತಿ ಜೀವನ ಉಜ್ವಲವಾಗಲಿ!
Back To Home Page: Click here
FAQ – Best Courses After PUC 2026 | ಪಿಯುಸಿ ನಂತರ ಯಾವ course ಬೆಸ್ಟ್
ಪಿಯುಸಿ ನಂತರ ಯಾವ ಕೋರ್ಸ್ ಬೆಸ್ಟ್? (Which is the best course after PUC?)
ನಿಮ್ಮ stream ಮತ್ತು ಆಸಕ್ತಿಯ ಮೇಲೆ ಅವಲಂಬಿತವಾಗಿದೆ:
Science → Engineering, MBBS, BCA
Commerce → B.Com, CA, BBA
Arts → BA, B.Ed, Design Courses
ಪಿಯುಸಿ ನಂತರ ತಕ್ಷಣ ಜಾಬ್ ಸಿಗುವ ಕೋರ್ಸ್ ಯಾವುದು?
Short-term courses ಹೆಚ್ಚು ಉಪಯುಕ್ತ:
Digital Marketing
Tally + GST
Graphic Designing
Web Designing
ಪಿಯುಸಿ ನಂತರ degree ಮಾಡಲೇಬೇಕಾ?
Degree ಮಾಡಬಹುದು ಅಥವಾ diploma / certificate course ಮಾಡಿ job ಪಡೆಯಬಹುದು. ಆದರೆ long-term growth ಗೆ degree ಉತ್ತಮ.
Commerce ವಿದ್ಯಾರ್ಥಿಗಳಿಗೆ highest salary course ಯಾವುದು?
CA (Chartered Accountant) ಅತ್ಯುತ್ತಮ ಆಯ್ಕೆ
ಇದಲ್ಲದೆ CMA, CPA ಕೂಡ high salary courses.
Science ವಿದ್ಯಾರ್ಥಿಗಳಿಗೆ easy job ಸಿಗುವ ಕೋರ್ಸ್ ಯಾವುದು?
BCA (IT field)
Nursing
Paramedical Courses
ಇವುಗಳಲ್ಲಿ job opportunities ಹೆಚ್ಚು ಇವೆ.
Arts ವಿದ್ಯಾರ್ಥಿಗಳಿಗೆ job ಸಿಗುತ್ತಾ?
ಹೌದು:
Teaching (B.Ed)
Journalism
Government Jobs
Design & Creative Fields
ಪಿಯುಸಿ ನಂತರ Government job ಸಿಗುತ್ತಾ?
ಹೌದು, ಕೆಲವು jobs ಗೆ eligible:
KPSC Group C / D
SSC GD
Banking Clerk
ಪಿಯುಸಿ ನಂತರ course ಆಯ್ಕೆ ಹೇಗೆ ಮಾಡಬೇಕು?
ನಿಮ್ಮ interest ನೋಡಿ
skill analyze ಮಾಡಿ
job demand check ಮಾಡಿ
experts ಸಲಹೆ ಪಡೆಯಿರಿ
Jeevan is a Government Schemes and News writer at Karnataka Yojana Info with over 6 years of experience covering Karnataka and Central Government schemes. He verifies all information from official government sources to provide accurate, clear, and trusted updates for citizens.